22.3 C
New York
Tuesday, August 16, 2022

Buy now

spot_img

6.ನೇ ದಿನಕ್ಕೆ ಕಾಲಿಟ್ಟ ರೈತರ ಸತ್ಯಾಗ್ರಹ

ಬೆಳಗಾಯಿತು ವಾರ್ತೆ
ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಡ್ಡಿ ಮತ್ತು ಸಾಲದ ನೀತಿ ವಿರೋಧಿಸಿ ಹಾಗೂ ರೈತರ ಹಳೇ ಸಾಲ ಮನ್ನಾ ಮತ್ತು ಹೊಸ ಸಾಲ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 6ದಿನ ಪೂರೈಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷರಾದ ಆರ್ ಮಾಧವ ರೆಡ್ಡಿ ಅವರು ಮಾತನಾಡಿ ಕಳೆದ ಮೂರು ವರ್ಷಗಳಿಂದ ಸಾಕಷ್ಟು ರೈತರು ನಷ್ಟವಾದ ಹಿನ್ನೆಲೆ ಹೋರಾಟ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧ್ಯಕ್ಷರು ಬಂದು ಆರ್ ಬಿಐ ಪತ್ರ ಬರೆದಿದ್ದು ನಮ್ಮಿಂದ ಬ್ಯಾಂಕ್ ಸಾಲ ಮನ್ನಾ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಗಾದರೆ ಸಾಲ ಮನ್ನಾ ಮಾಡುವ ಅಧಿಕಾರ ಯಾರಿಗೆ ಇದೇಯೋ ಅವರು ಬರೋವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ರೈತರು ಬಡ್ಡಿಗೆ ಬಡ್ಡಿ ಕಟ್ಟಿ ಸಾಕಾಗಿದೆ ಹೊಸ ಸಾಲ ತೆಗೆದುಕೊಂಡು ಹೋಗುವ ಭರವಸೆಯೊಂದಿಗೆ ಹೋರಾಟ ಕ್ಕೆ ಮುಂದಾಗಿದ್ದೇವೆ ಎಂದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸುರಿದು ಮಳೆಗೆ ಕಳೆದ ಮೂವತ್ತು ವರ್ಷಗಳಿಲ್ಲಿಯೇ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಸರ್ಕಾರ ವರದಿಗಳು ಹೇಳುತ್ತಿವೆ. ಆದ್ದರಿಂದ ರೈತರಿಗೆ ಹೊಸ ಸಾಲ ನೀಡಬೇಕು ಮತ್ತು ಹಳೇ ಸಾಲ ಮನ್ನಾ ಮಾಡಬೇಕು
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಕಾರ್ಯಾಧ್ಯಕ್ಷ
ಆರ್ ಮಾಧವ ರೆಡ್ಡಿ
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಸ. ರಘುನಾಥ್, ಜೆ. ಪ್ರಕಾಶ್ ರೆಡ್ಡಿ, ವಿ. ಹನುಮಂತ ರೆಡ್ಡಿ, ಟಿ. ಬಸವರಾಜ, ತಿರುಮಲ ಎಚ್, ಸಂಜೀವ ರೆಡ್ಡಿ, ಶಿವಪ್ಪ ರೇಣುಕಮ್ಮ, ಮಾಳಮ್ಮ ಸೇರಿದಂತೆ ಅನೇಕ ರೈತರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,436FollowersFollow
0SubscribersSubscribe
- Advertisement -spot_img

Latest Articles