ಮುಂಬೈ: ಮಹಾರಾಷ್ಟç ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ಆಘಾತ ಎದುರಾಗಿದ್ದು, ಥಾಣೆ ಮುನ್ಸಿಪಲ್ ಕಾರ್ಪೊರೇಷನ್ (ಟಿಎಂಸಿ) ೬೬ ಕಾರ್ಪೊರೇಟರ್ ಗಳು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರಿದ್ದಾರೆ.
ಮಹಾರಾಷ್ಟçದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ೬೭ ಶಿವಸೇನೆ ಕಾರ್ಪೊರೇಟರ್ ಗಳ ಪೈಕಿ ೬೬ ಬಂಡಾಯ ಕಾರ್ಪೊರೇಟರ್ ಗಳು ಬುಧವಾರ ತಡರಾತ್ರಿ ನಿವಾಸದಲ್ಲಿ ಭೇಟಿಯಾದರು. ೬೬ ಮಂದಿ ಏಕನಾಥ್ ಶಿಂಧೆ ಬಣ ಸೇರಿದ ಪರಿಣಾಮ, ಉದ್ಧವ್ ಠಾಕ್ರೆ ಅವರು ಟಿಎಂಸಿ ಮೇಲೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ನಂತರ ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಅತ್ಯಂತ ಪ್ರಮುಖ ನಾಗರಿಕ ಸಂಸ್ಥೆಯಾಗಿದೆ.