ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಅಂದಾಜು 449 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತವಾಗಿವೆ.
ಬಳ್ಳಾರಿ- 13, ಹಡಗಲಿ- 69, ಹಗರಿ ಬೊಮ್ಮನಹಳ್ಳಿ- 27, ಹರಪನಹಳ್ಳಿ-, ಹೊಸಪೇಟೆ-93, ಕಂಪ್ಲಿ-19, ಕೊಟ್ಟೂರು-
12, ಕೂಡ್ಲಿಗಿ-24, ಕುರುಗೋಡು-84, ಸಂಡೂರು-2 ಹಾಗೂ ಸಿರುಗುಪ್ಪ ತಾಲೂಕಿನ- 74 ಗ್ರಾಮಗಳು ಕೊರೊನಾ ಸೋಂಕಿನಿಂದ ಮುಕ್ತಗೊಂಡಿದ್ದು, ಇದೀಗ ಗ್ರಾಮೀಣ ಭಾಗದಲ್ಲಿ ಕೊಂಚಮಟ್ಟಿಗೆ ಈ ಕೊರೊನಾ ಸೋಂಕಿನ ಭಯವನ್ನ ಹೋಗ ಲಾಡಿಸಲು ಜಿಲ್ಲಾಡಳಿತ ಶ್ರಮಿಸಿದೆ.
ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸರಿಸುಮಾರು 237 ಗ್ರಾಮ ಪಂಚಾಯಿತಿ ಗಳಿವೆ. ಅಂದಾಜು 1043 ಗ್ರಾಮಗಳಿವೆ. ಈವರೆಗೂ 15421 ಕೊರೊನಾ ಸೋಂಕಿತರು ಇದ್ದರು. ಇದೀಗ ಕೇವಲ 2687 ಸಕ್ರಿಯ ಪ್ರಕರಣಗಳಿವೆ. ಕಂಪ್ಲಿ ಹಾಗೂ ಕೊಟ್ಟೂರು ತಾಲೂಕಿನಲ್ಲಿ ಸಾವಿರದೊಳಗಡೆ ಕೊರೊನಾ ಸೋಂಕಿತರ ಸಂಖ್ಯೆಯಿದ್ದು, ಉಳಿದೆಲ್ಲಾ ತಾಲೂಕುಗಳಲ್ಲಿ ಈ ಸೋಂಕಿತರ ಸಂಖ್ಯೆಯು ಸಾವಿರದ ಗಡಿಯನ್ನ ದಾಟಿತ್ತು.
ಸದ್ಯ ಉಭಯ ಜಿಲ್ಲೆಗಳ 66 ಗ್ರಾಮಗಳಲ್ಲಿ ಹತ್ತಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ.
ಅಂದಾಜು 111 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಹಾಗೂ ಐದಕ್ಕಿಂತ ಹೆಚ್ಚು ಪ್ರಕರಣ ಗಳಿವೆ. 417 ಗ್ರಾಮಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.