ಬಳ್ಳಾರಿ: ಆರನೇ ವೇತನ ಆಯೋಗ ವರದಿ ಜಾರಿಗೊಳಿಸಿ ಎಂದು ಒತ್ತಾಯಿಸಿ ಸರ್ಕಾರಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ ನಗರದಲ್ಲಿನ ಬಸ್ ಸ್ಟ್ಯಾಂಡ್‍ಗಳ ತುಂಬಾ ಖಾಸಗಿ ಬಸ್‍ಗಳ ಹಾವಳಿ, ಪ್ರಯಾಣಿಕರಿಗೆ ನಿಗಧಿತ ಸ್ಥಳಕ್ಕೆ ಹೋಗಲು ಮಾತ್ರ ಪರದಾಟ ತಪ್ಪಲಿಲ್ಲ.
ನಗರದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಶುಕ್ರವಾರ ಹೊಸ ಬಸ್ ಸ್ಟ್ಯಾಂಡ್ ಮತ್ತು ಹಳೆ ಬಸ್ ಸ್ಟ್ಯಾಂಡ್ ಹಾಗೂ ಸಿಟಿ ಬಸ್ ಸ್ಟ್ಯಾಂಡ್‍ನಲ್ಲಿ ಬೇರೆ ರಾಜ್ಯ, ಜಿಲ್ಲೆ ಗ್ರಾಮೀಣ ಪ್ರದೇಶದಿಂದ ಮಹಿಳೆಯರು, ಮಕ್ಕಳು, ವಯೋವೃದ್ಧರು, ಗರ್ಭಿಣಿ ಸ್ತ್ರೀಯರು, ಕಾಲೇಜು ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ನಿಗಧಿತ ಸ್ಥಳಕ್ಕೆ ಹೋಗಲು ಖಾಸಗಿ ಬಸ್, ಆಟೋ, ತುಫಾನ್‍ಗಳನ್ನು ಹುಡುಕುವುದೇ ಕಷ್ಟವಾಗಿತ್ತು
ಆಂಧ್ರದ ಬಸ್‍ಗಳು ಎಂದಿನಂತೆ ಒಡಾಡುತ್ತಿರುವುದರಿಂದ ಆಂಧ್ರಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಆಗಲಿಲ್ಲ.
ಈ ನಡುವೆ ಮುಷ್ಕರ ಕೈಗೊಂಡ ನೌಕಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಿನ ಅಧಿಕಾರಿಗಳು ಒತ್ತಡ ಹಾಕಲಾಗುತ್ತಿದೆ ಹಾಗೂ ನಿವೃತ್ತ ನೌಕರರನ್ನು ಮತ್ತು ವೈದೈಕೀಯ ಪರೀಕ್ಷೆಯಲ್ಲಿ ಬಸ್ ಒಡಿಸಲು ಅಸಮರ್ಥ ಎಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿ ಲೈಟ್ ವೇಟ್ ಕೆಲಸ ಮಾಡುತ್ತಿದ್ದ ನೌಕರರನ್ನು ಸಹ ಬಸ್ ಚಾಲಾಯಿಸುವಂತೆ ಒತ್ತಡ ಹೇರಲಾಗುತ್ತದೆ ಎಂದು ಆರೋಪಿಸಿದರು.
- ಬೆಳಿಗ್ಗೆ ಕೋಡಾಲ ಗ್ರಾಮದಿಂದ ಚಿಕಿತ್ಸೆ ಪಡೆಯುವ ಸಲುವಾಗಿ ಬಳ್ಳಾರಿಗೆ ಬಹಳ ಕಷ್ಟ ಪಟ್ಟು ಬಂದೇ ಆಸ್ಪತ್ರೆಯಲ್ಲಿ ಡಾಕ್ಟರ್ ಸಹ ಇಲ್ಲ ನಾಳೆ ಬನ್ನಿ ಆಸ್ಪತ್ರೆ ಸಿಬ್ಬಂದಿ ಹೇಳಿದರು ಮರಳಿ ಮನೆಗೆ ಹೋಗೋಣ ಎಂದು ಬಸ್ ಸ್ಟ್ಯಾಂಡ್‍ಗೆ ಬಂದರೆ ಇಲ್ಲಿ ಖಾಸಗಿ ಬಸ್ ಅಥವಾ ತುಫಾನ್ ಗಳು ಸಹ ಇಲ್ಲ ಏನೂ ಮಾಡಬೇಕು ಎಂದು ಗೂತ್ತಾಗುತ್ತಿಲ್ಲ ಕೊನೆ ಪಕ್ಷ ಕುಡುತಿಗೆ ಹೋಗಿ ನಮ್ಮೂರಿಗೆ ಹೋಗೋಣ ಎಂದು ಬೆಳಿಗ್ಗೆಯಿಂದ ಕಾಯುತ್ತಿರುವೆ ಅದಕ್ಕೂ ವ್ಯವಸ್ಥೆಯಿಲ್ಲ
ಹೊನ್ನುರಪ್ಪ, ಪ್ರಯಾಣಿಕ