ಟೋಕಿಯೋ: ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಮಂಗಳವಾರವೂ ಪದಕ ಬೇಟೆಯನ್ನು ನಡೆಸಿದ್ದಾರೆ. 10 ಮೀ ಏರ್ ಪಿಸ್ತೂಲ್‌ನ ಎಸ್‌ಹೆಚ್1 ವಿಭಾಗದಲ್ಲಿ ಅಧಾನ ಸಿಂಗ್‌ರಾಜ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಚೀನಾದ ಸ್ಪರ್ಧಿಗಳಾದ ಚಾವೊ ಯಾಂಗ್ (ಬೆಳ್ಳಿ) ಮತ್ತು ಕ್ಸಿಂಗ್ ಹುವಾಂಗ್ (ಚಿನ್ನ) ನಂತರ ಒಟ್ಟು 216.8 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಇದು ಈ ಬಾರಿಯ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗಳಿಸಿದ 8ನೇ ಪದಕವಾಗಿದೆ. ಕ್ರೀಡಾಕೂಟದ ಏಳನೇ ದಿನವಾಗಿರುವ ಮಂಗಳವಾರದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ಸೋಮವಾರ ಪುರುಷರ ಜಾವೆಲಿನ್ ಎಫ್-64 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಥ್ಲೀಟ್ ಸುಮಿತ್ ಅಂತಿಲ್ ದೇಶಕ್ಕೆ ಮತ್ತೊಂದು ಬಂಗಾರದ ಪದಕ ಗೆದ್ದಿದ್ದರು. 68.55 ಮೀಟರ್ ದೂರದ ಸಾಧನೆಯೊಂದಿಗೆ ಸುಮಿತ್ ಚಿನ್ನದ ಪದಕವನ್ನು ಕೊರಳಿಗೇರಿಸಿದ್ದರು.
ಅಲ್ಲದೆ ಈ ವಿಭಾಗದಲ್ಲಿ ಸುಮಿತ್ ವಿಶ್ವ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸುಮಿತ್ ಎಸೆದಿದ್ದ ಮೊದಲ ಎಸೆದ 66.95 ಮೀಟರ್ ಸಾಧನೆ ಮೊದಲು ವಿಶ್ವ ದಾಖಲೆಗೆ ಕಾರಣಾವಾಗಿತ್ತು. ದ್ವಿತೀಯ ಯತ್ನದಲ್ಲಿ 68.08 ಮೀಟರ್ ದೂರ ಸಾಧನೆ ಮತ್ತೆ ವಿಶ್ವ ದಾಖಲೆಗೆ ಕಾರಣವಾಗಿತ್ತು. ಅದಾಗಿ ಕೊನೇಯ ಪ್ರಯತ್ನದಲ್ಲಿ 68.55 ಮೀಟರ್ ಸಾಧನೆಯೊಂದಿಗೆ ಮತ್ತೆ ಮೂರನೇ ಬಾರಿಗೆ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 23ರ ಹರೆಯದ ಹರ್ಯಾಣದ ಸೋನೀಪತ್‌ನವರಾದ ಸುಮಿತ್ ಅಂತಿಲ್‌ಗೆ ಒಂದು ಕಾಲಿಲ್ಲ.
2015ರಲ್ಲಿ ನಡೆದ ವಾಹನ ಅಪಘಾತದಲ್ಲಿ ಸುಮಿತ್ ತನ್ನ ಕಾಲು ಕಳೆದುಕೊಂಡಿದ್ದರು. ಜಾವೆಲಿನ್ ಥ್ರೋ ಎಫ್-64 ವಿಭಾಗದಲ್ಲಿ ಐದನೇ ಮತ್ತು ಕೊನೇಯ ಪ್ರಯತ್ನದಲ್ಲಿ 68.55ನೇ ದೂರದೊಂದಿಗೆ ಸುಮಿತ್ ಬಂಗಾರ ಗೆದ್ದರಲ್ಲದೆ, ವಿಶ್ವ ದಾಖಲೆಯೂ ನಿರ್ಮಿಸಿದ್ದಾರೆ. ಇನ್ನು ಜಾವೆಲಿನ್ ಎಸೆತದಲ್ಲಿ ಎರಡು ಬಾರಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ದೇವೇಂದ್ರ ಝಝಾರಿಯಾ ಈ ಬಾರಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಸಾಧನೆಯ ಬಳಿಕ ಸುಮಿತ್ ಈ ಸಾಧನೆ ಮಾಡಿ ಮೆರೆದಿದ್ದಾರೆ.
ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಕೂಡ ಸ್ಪರ್ಧಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಇನ್ನು ಐದನೇ ದಿನ ಭಾನುವಾರ ನಡೆದ ಸ್ಪರ್ಧೆಯಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾ ಬೆನ್ ಪಟೇಲ್ ಐತಿಹಾಸಿಕ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತ ಈ ವಿಭಾಗದಲ್ಲಿ ಮಹತ್ವದ ಸಾಧನೆ ಮಾಡಿತು. ಈ ಮೂಲಕ ಈ ಭಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕದ ಖಾತೆ ತೆರೆಯಿತು. ಈ ಮಧ್ಯೆ ಭಾರತ ಗೆದ್ದಿದ್ದ ಒಮದಿ ಕಂಚಿನ ಪದಕವನ್ನು ಕಳೆದುಕೊಂಡಿತು. ಡಿಸ್ಕಸ್ ಎಸೆತಗಾರ ವಿನೋದ್ ಕುಮಾರ್ ಅವರ ಕಂಚಿನ ಪದಕ (ಎಫ್ 52 ವಿಭಾಗದಲ್ಲಿ ಭಾನುವಾರ ಗೆದ್ದಿತ್ತು) ಕೂಟದ ಪ್ಯಾನೆಲ್ ಅಂಗವೈಕಲ್ಯ ವರ್ಗೀಕರಣ ಮೌಲ್ಯಮಾಪನದಲ್ಲಿ ಅನರ್ಹ ಎಂದು ಕಂಡುಬಂದ ಕಾರಣ ಭಾರತ ತನ್ನ ಪದಕವನ್ನು ಕಳೆದುಕೊಂಡಿತು.