ನವದೆಹಲಿ – ಭಾರತೀಯ ವಾಯುಪಡೆಗೆ ಮತ್ತಷ್ಟು ಬಲ ನೀಡಲು ಫ್ರಾನ್ಸ್ ನಿಂದ ಮತ್ತೆ 3 ರಫೇಲ್ ಸಮರ ವಿಮಾನ ಭಾರತಕ್ಕೆ ಆಗಮಿಸಿದೆ.
58 ಸಾವಿರ ಕೋಟಿ ರೂ ವೆಚ್ಚದಲ್ಲಿ 36 ಸಮರ ವಿಮಾನಗಳ ಖರೀದಿಗೆಭಾರತ –ಫ್ರಾನ್ಸ್ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದವು. ಇಂದಿನ ಮೂರು ವಿಮಾನಗಳು ಸೇರಿದಂತೆ ಈವರೆಗೆ ಫ್ರಾನ್ಸ್ ನಿಂದ 24 ವಿಮಾನಗಳು ವಾಯುಪಡೆಗೆ ಸೇರಿದಂತಾಗಿದೆ. ಐದು ರಫೇಲ್ ವಿಮಾನಗಳು ಕಳೆದ ವರ್ಷ ಜುಲೈ 29 ರಂದು ಭಾರತಕ್ಕೆ ಬಂದಿತ್ತು.
ಯುಎನ್ಐ ಕೆಎಸ್ಆರ್ 2105