ರಾಜ್ಯಾದಾದ್ಯಂತ 2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಬಳ್ಳಾರಿ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 28,724 ವಿದ್ಯಾರ್ಥಿಗಳು ನೊಂದಾಯಿತರಾಗಿದ್ದ ವಿದ್ಯಾರ್ಥಿಗಳಲ್ಲಿ 14, 795 ವಿದ್ಯಾರ್ಥಿಗಳು ಮತ್ತು 13,929 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ ಎಂದು ಡಿಡಿಪಿಯು ವಿರೇಶಪ್ಪ ಅವರು ತಿಳಿಸಿದ್ದಾರೆ.
ಕಲಾ ವಿಜ್ಞಾನ ವಾಣಿಜ್ಯ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು ಕಲಾ ವಿಭಾಗದಲ್ಲಿ ಒಟ್ಟು 12,456 ವಿದ್ಯಾರ್ಥಿ ಗಳಲ್ಲಿ 6661ವಿದ್ಯಾರ್ಥಿಗಳು ಮತ್ತು 5795 ವಿದ್ಯಾರ್ಥಿ ನಿಯರು ಸೇರಿದಂತೆ ಒಟ್ಟು 2456 ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 8085 ವಿದ್ಯಾರ್ಥಿಗಳಲ್ಲಿ 4085 ವಿದ್ಯಾರ್ಥಿಗಳು ಮತ್ತು 4000ವಿದ್ಯಾ ರ್ಥಿನಿಯರು ಸೇರಿದಂತೆ ಒಟ್ಟು 8085 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 8183 ವಿದ್ಯಾರ್ಥಿಗಳಲ್ಲಿ 4049 ವಿದ್ಯಾರ್ಥಿಗಳು ಮತ್ತು 4134 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 8183 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಸ್ಟ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಏಳು ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕಗಳು
ಬಳ್ಳಾರಿ ವಿಜಯನಗರ ಜಿಲ್ಲೆಯ ಕಾಲೇಜಿನಲ್ಲಿ ಕೆಲ ಕಾಲೇಜಿನಲ್ಲಿ ಅತ್ಯತ್ತಮ ಉತ್ತಮ ಫಲಿತಾಂಶ ಬಂದಿದೆ. ನಗರದ ಬೆಸ್ಟ್ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಏಳು ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ನಗರದ ನಂದಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ 600ಕ್ಕೆ 599 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಹೊಸಪೇಟೆಯ ನ್ಯಾಷನಲ್ ಪಿಯು ಕಾಲೇಜಿನ ಕಲಾ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ 600ಅಂಕಗಳಿಗೆ 593 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.ಅದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳು 600ಕ್ಕೆ 590 ಅಂಕಗಳನ್ನು ಪಡೆದರೆ ಇಬ್ಬರು 600ಕ್ಕೆ 590ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದು ಅವರು ಡಿಡಿಪಿಯು ವಿರೇಶಪ್ಪ ಅವರು ತಿಳಿಸಿದ್ದಾರೆ.
ಇಂದು ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಶೇ 100% ಅಂಕ
ಮಂಗಳವಾರ ಪ್ರಕಟಗೊಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊಟ್ಟೂರಿನ ಇಂದು ಕಾಲೇಜಿನ ಆರು ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ.
ದ್ವಿತೀಯ ಪಿಯು ಫಲಿತಾಂಶದಲ್ಲಿ ಸತತ ಆರು ವರ್ಷ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಇಂದು ಕಾಲೇಜು ಈ ಭಾರಿಯು ಪಿಯು ಫಲಿತಾಂಶದಲ್ಲಿ ಉತ್ತಮ ಫಲಿತಾಂಶ ಪಡೆದಿದೆ.ವಿಜ್ಞಾನ ವಿಭಾಗದ ಇಬ್ಬರು, ಕಲಾ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಶೇ100 % ಫಲಿತಾಂಶ ಪಡೆದಿದ್ದಾರೆ. ವಿಜ್ಞಾನ ವಿಭಾಗದ ಭರತ್ ಕುಮಾರ್, ಬೂದನೂರು ಪ್ರೇಮ ಹಾಗೂ ಕಲಾ ವಿಭಾಗದ ಶಿಲ್ಪಾ ತಿಮ್ಮಲಾಪುರ, ಸುಣಗಾರ ಚನ್ನಮ್ಮ, ಸಣ್ಣ ಕಪ್ಪಳ ಸಹನ, ಬಿ.ಪಿ.ರಂಜಿತ 600ಕ್ಕೆ 600 ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಕಾಲೇಜಿನ ಪ್ರಾಚಾರ್ಯ ಎಚ್.ಎನ್.ವೀರಭದ್ರಪ್ಪ ಹಾಗೂ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.