ಸಸ್ಪೆನ್ಸ್, ಥ್ರಿಲ್ಲರ್, ಕಾಮಿಡಿ ಕಥಾಹಂದರ ಹೊಂದಿರುವ ‘ಗೋವಿಂದ ಗೋವಿಂದ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಇತ್ತೀಚೆಗೆ ಈ ಚಿತ್ರದ ಹಾಡುಗಳು ರಿಲೀಸ್ ಆಗಿವೆ. ಶೈಲೇಂದ್ರ ಪೆÇ್ರಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪೆÇ್ರಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಈ ಚಿತ್ರದ ಹಾಡುಗಳು ಪುಷ್ಕರ್ ಫಿಲಂಸ್ ಮೂಲಕ ಬಿಡುಗಡೆಯಾಗಿವೆ. ಏಪ್ರಿಲ್ 16ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ಈ ಚಿತ್ರದ ನಿರ್ಮಾಪಕರು ಶೈಲೇಂದ್ರ ಬಾಬು, ಕಿಶೋರ್ ಎಂ.ಕೆ.ಮಧುಗಿರಿ ಹಾಗೂ ರವಿ ಆರ್ ಗರಣಿ. ಜನಾರ್ದನ್ ರಾಮ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರವನ್ನು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ ತಿಲಕ್. ಚಿತ್ರದ ನಾಯಕನಾಗಿ ಸುಮಂತ್ ಶೈಲೇಂದ್ರ ನಟಿಸಿದ್ದು, ಮತ್ತೋರ್ವ ನಾಯಕನಾಗಿ ತುಳು ಚಿತ್ರರಂಗದ ರೂಪೇಶ್ ಶೆಟ್ಟಿ ಇದ್ದಾರೆ. ಸುಮಂತ್ ಹಾಗೂ ರೂಪೇಶ್ ಅವರಿಗೆ ನಾಯಕಿಯರಾಗಿ ಕವಿತಾ ಗೌಡ ಹಾಗೂ ಭಾವನ ಮೆನನ್ ನಟಿಸಿದ್ದಾರೆ.
ಈ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಗಳಾಗಿ ರಾಜಕಾರಣಿ ಕೆ.ಎನ್ ರಾಜಣ್ಣ ಮತ್ತು ನಿರ್ದೇಶಕ ಲಿಂಗದೇವರು. ಆಗಮಿಸಿ ಹಾಡುಗಳ ಅನಾವರಣ ಮಾಡಿದರು. ಈ ವೇಳೆ ಮಾತನಾಡಿದ ರಾಜಣ್ಣ, ‘ಗೋವಿಂದ ಗೋವಿಂದ ಚಿತ್ರದ ಎಲ್ಲ ಕಲಾವಿದರಿಗೆ ಅಭಿನಂದನೆ. ಹಾಡುಗಳು ಅದ್ಬುತವಾಗಿ ಮೂಡಿಬಂದಿವೆ. ಯುವಕಲಾವಿದರು ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಉಜ್ವಲ ಭವಿಷ್ಯವಿದೆ. ಒಳ್ಳೆಯದಾಗಲಿ’ ಎಂದರು. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಲಿಂಗದೇವರು ಶುಭಹಾರೈಸಿದರು. ಚಿತ್ರದ ಸಂಗೀತ ನಿರ್ದೇಶಕ ಹಿತನ್ ಮಾತನಾಡಿ, ‘ಎಲ್ಲರೂ ನನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ಈ ಸಂಗೀತದಲ್ಲಿ ಭಾಗಿಯಾದ ಎಲ್ಲ ನನ್ನ ತಂಡಕ್ಕೆ ತುಂಬು ಹೃದಯದ ಧನ್ಯವಾದ. ಜನಗಳಿಂದ ಯಾವ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ನೋಡಲು ಕಾತರದಿಂದ ಇದ್ದೇನೆ’ ಎಂದರು.
ಇನ್ನು ನಿರ್ಮಾಪಕರಲ್ಲೊಬ್ಬರಾದ ರವಿ ಗರಣಿ ‘ಇದು ಶುರುವಾಗಿದ್ದು ಆಕಸ್ಮಿಕ. ವಿಜಯ್ ಸೇತುಪತಿ ಸಿನಿಮಾ ಮಾಡುವ ಪ್ಲ್ಯಾನ್ ಇತ್ತು. ಕೊನೆಗೆ ಕೊರೊನಾದಿಂದ ಎಲ್ಲವೂ ಬದಲಾಯಿತು. ಆಗ ಶುರುವಾಗಿದ್ದೇ ಈ ಸಿನಿಮಾ. ತುಂಬ ಅಚ್ಚುಕಟ್ಟಾಗಿ ಚೆನ್ನಾಗಿ ಮೂಡಿಬಂದಿದೆ’ ಎಂದರು. ಚಿತ್ರದ ನಿರ್ದೇಶಕ ತಿಲಕ್ ‘ಇದು ನನ್ನ ಮೊದಲ ಸಿನಿಮಾ. ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ಪಕ್ಕಾ ಕೌಟುಂಬಿಕ ಸಿನಿಮಾ. ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಒಟ್ಟು ಆರು ಹಾಡುಗಳೀವೆ. ಎರಡು ಬಿಟ್ ಸಾಂಗ್‍ಗಳಿವೆ. ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯೂ ಪ್ರಮಾಣ ಪತ್ರ ಸಿಕ್ಕಿದೆ’ ಎಂದರು. ಅದೇ ಸಂದರ್ಭದಲ್ಲಿ ನಟ ರೂಪೇಶ್ ಶೆಟ್ಟಿ ಈ ಚಿತ್ರದಲ್ಲಿ ತೆರೆಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನಟಿ ಕವಿತಾ ಗೌಡ ಟೆನ್ಷನ್ ಫ್ರೀ ಆಗಿ ಸಿನಿಮಾ ಮಾಡಿದ್ದಾರಂತೆ. ಕಳೆದ ವರ್ಷವೇ ಸಿನಿಮಾ ರೆಡಿಯಾಗಿತ್ತು. ಇದೀಗ ಬಿಡುಗಡೆಗೆ ಬಂದಿದ್ದೇವೆ. ಅವಕಾಶ ನೀಡಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ’ ಎಂದರು.
ನಾಯಕ ಸುಮಂತ್ ಮಾತನಾಡಿ, ‘ರವಿ ಗರಣಿ ಅವರಿಗೆ ಧನ್ಯವಾದ. ಅವರೇ ಈ ಚಿತ್ರದ ಕ್ಯಾಪ್ಟನ್. ಕಾಮಿಡಿ ಶೈಲಿಯ ಮತ್ತು ಥ್ರಿಲ್ಲರ್ ಥರಹದ ಕಥೆ ಸಿನಿಮಾದಲ್ಲಿರಲಿದೆ. ಏ. 16ರಂದು ಚಿತ್ರ ತೆರೆಗೆ ಬರಲಿದೆ ಎಂದರು. ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. ತಾರಾಬಳಗದಲ್ಲಿ ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಗೋವಿಂದೇ ಗೌಡ, ಯಮುನ ಶ್ರೀನಿಧಿ ಮುಂತಾದವರಿದ್ದಾರೆ.