ಲಂಡನ್: ಭಾರತೀಯ ಟೆಸ್ಟ್ ತಂಡ ಇನ್ನು 15 ದಿನಗಳಲ್ಲಿ ಇಂಗ್ಲೆಂಡ್‍ನ ಡಹ್ರ್ಯಾಮ್‍ನಲ್ಲಿ ಒಟ್ಟು ಸೇರಲಿದೆ. ಅಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಘಾಗಿ ಸಿದ್ಧತೆ ನಡೆಸಲಿದೆ. ಈ ಟೆಸ್ಟ್ ಸರಣಿ ನ್ಯಾಟಿಂಗ್‍ಹ್ಯಾಮ್‍ನಲ್ಲಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಟೆಸ್ಟ್ ಸರಣಿ ನಡೆಯಲಿದೆ.
ಬುಧವಾರ (ಜೂನ್ 23) ಮುಕ್ತಾಯಗೊಂಡ ಐಸಿಸಿ ವಲ್ರ್ಡ್ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತಿದ್ದರಿಂದ ಲಂಡನ್‍ನಲ್ಲಿ ವಿರಾಟ್ ಕೊಹ್ಲಿ ಪಡೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ. ಐಸಿಸಿ ವಲ್ರ್ಡ್ ಟೆಸ್ಟ್ ಫೈನಲ್ ಪಂದ್ಯಕ್ಕಾಗಿ ತಂಡದಲ್ಲಿ ಹೆಸರಿಸಲ್ಪಟ್ಟ 15 ಜನರನ್ನು ಹೊರತು ಪಡಿಸಿ ಉಳಿದ 8 ಮಂದಿ ಭಾರತೀಯರು ಕಳೆದ ವಾರ Wಖಿಅ ಫೈನಲ್ ಶುರುವಾಗುತ್ತಲೇ ಸೌತಾಂಪ್ಟನ್‍ನಿಂದ ಫ್ರೀಯಾಗಿ ಬಿಡಲ್ಪಟ್ಟಿದ್ದರು ಎಂದು ಮಾಹಿತಿ ಲಭಿಸಿದೆ.
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಭಾರತೀಯ ತಂಡ ಎರಡು ಅಂತರ್ ಅಭ್ಯಾಸ ಪಂದ್ಯಗಳನ್ನಾಡಲಿದೆ ಎಂದು ಮಾಹಿತಿ ಲಭಿಸಿದೆ. ನ್ಯಾಟಿಂಗ್‍ಹ್ಯಾಮ್‍ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುವುದಕ್ಕೂ ಮುನ್ನ ಭಾರತ ತಂಡ ಡಹ್ರ್ಯಾಮ್‍ನಲ್ಲಿ ಅಭ್ಯಾಸ ಪಂದ್ಯಗಳನ್ನಾಡಲಿದೆ.