ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‍ಮನ್ ಜೋಸ್ ಬಟ್ಲರ್ ಶ್ರೀಲಂಕಾ ವಿರುದ್ಧ ಸೀಮಿತ ಓವರ್‍ಗಳ ಸರಣಿಯಿಂದ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿರುವುದರಿಂದ ಬಟ್ಲರ್ ಮುಂದಿನ ಪಂದ್ಯಗಳಲ್ಲಿ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ (ಇಸಿಬಿ) ಮೂಲ ಮಾಹಿತಿ ನೀಡಿದೆ.
ಶ್ರೀಲಂಕಾ ಮತ್ತು ಇಂಗ್ಲೆಂಡ್ ಮಧ್ಯೆ ಸದ್ಯ ಮೂರು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ಇದರಲ್ಲಿ ಕಾರ್ಡಿಫ್ ಸ್ಟೇಡಿಯಂನಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಜೋಸ್ ಬಟ್ಲರ್ ಗಾಯ ಮಾಡಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್‍ಗಳ ಸುಲಭ ಜಯ ಗಳಿಸಿತ್ತು. ಮೊದಲ ಟಿ20ಐ ಪಂದ್ಯದಲ್ಲಿ ಆರಂಭಿಕರಾಗಿ ಆಡಿದ್ದ ಬಟ್ಲರ್ 55 ಎಸೆತಗಳಿಗೆ ಅಜೇಯ 68 ರನ್ ಬಾರಿಸಿದ್ದರು. ಆ ಬಳಿಕ ಬಟ್ಲರ್ ಗಾಯಕ್ಕೀಡಾಗಿದ್ದರು. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‍ಮನ್ ಆಗಿರುವ ಬಟ್ಲರ್ ಎಂಆರ್ಐ ಸ್ಕ್ಯಾನಿಂಗ್ ಮಾಡಿಕೊಂಡಾಗ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿದು ಬಂದಿತ್ತು.
“ಇಂಗ್ಲೆಂಡ್ 8 ವಿಕೆಟ್‍ಗಳ ಜಯ ಗಳಿಸಿದ ಬಳಿಕ ಮ್ಯಾಚ್ ವಿನ್ನಿಂಗ್ಸ್ ಅಜೇಯ 68 ರನ್ ಬ್ಯಾಟಿಂಗ್ ನೀಡಿದ್ದ ಜೋಸ್ ಬಟ್ಲರ್ ಅಸ್ವಸ್ಥರಾಗಿದ್ದಾರೆ. ಅವರು ಮನೆಗೆ ತೆರಳಿ ಚೇತರಿಸಿಕೊಳ್ಳಲಿದ್ದಾರೆ,” ಎಂದು ಇಸಿಬಿ ತಿಳಿಸಿದೆ. ದ್ವಿತೀಯ ಟಿ20ಐ ಪಂದ್ಯದಲ್ಲಿ ಬಟ್ಲರ್ ಬದಲು ಜಾನಿ ಬೇಸ್ರ್ಟೋವ್ ಆರಂಭಿಕರಾಗಿ ಆಡಿದ್ದರು.