ಗ್ರ್ಯಾಂಡ್ ಆನ್ಸ್: ದಕ್ಷಿಣ ಆಫ್ರಿಕಾ ವಿರುದ್ಧದ ಆರಂಭಿಕ ಎರಡು ಟಿ20ಐ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ತಂಡ ಪ್ರಕಟಗೊಂಡಿದೆ. ಆಲ್ ರೌಂಡರ್ ಆ್ಯಂಡ್ರೆ ರಸೆಲ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. 2012 ಮತ್ತು 2016ರಲ್ಲಿ ವಿಶ್ವಕಪ್ ವಿಜೇತ ಟಿ20 ವಿಶ್ವಕಪ್ ತಂಡದಲ್ಲಿದ್ದ ರಸೆಲ್ ಮತ್ತೆ ತಂಡಕ್ಕೆ ಮರಳಿದ್ದಾರೆ. ಜೂನ್ 26ರಿಂದ ಜುಲೈ 3ರ ವರೆಗೆ ಐದು ಪಂದ್ಯಗಳ ಈ ಟಿ20ಐ ಸರಣಿ ನಡೆಯಲಿದೆ. ಎಲ್ಲಾ ಪಂದ್ಯಗಳೂ ಗ್ರೆನೆಡಾಡ ಸೇಂಟ್ ಜಾಜ್ರ್ಸ್ ಸ್ಟೇಡಿಯಂನಲ್ಲಿ ನಡೆಯಲಿದೆ.33ರ ಹರೆಯದ ಆ್ಯಂಡ್ರೆ ರಸೆಲ್ ಈವರೆಗೆ ಒಟ್ಟು 49 ಟಿ20ಐ ಪಂದ್ಯಗಳನ್ನಾಡಿದ್ದಾರೆ. ಅದರೆ ಈ ಕ್ರಿಕೆಟ್ ಮಾದರಿಯಲ್ಲಿ ರಸೆಲ್ ಅರ್ಧ ಶತಕ ಕೂಡ ಬಾರಿಸಿಲ್ಲ. ರಸೆಲ್ ಕಡೇಯ ಸಾರಿ ಭಾಗವಹಿಸಿದ ಟಿ20ಐ ಪಂದ್ಯವೆಂದರೆ ಕಳೆದ ವರ್ಷ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದಿದ್ದ ಪಂದ್ಯ.
ಪ್ರಭಾವಶಾಲಿ ಆಟಗಾರ
“ಆ್ಯಂಡ್ರೆ ರಸೆಲ್ ತಂಡದಲ್ಲಿ ಪ್ರಮುಖ ಪ್ರಭಾವಶಾಲಿ ಅಂಶ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಹಿಡಿತ ಹೊಂದಿರುವ ರಸೆಲ್ ಈ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಪರಿಣಾಮಕಾರಿ ಆಟಗಾರರಾಗಿರಲಿದ್ದಾರೆ,” ಎಂದು ತಂಡದ ಮುಂಚೂಣಿ ಆಯ್ಕೆದಾರ ರೋಜರ್ ಹಾರ್ಪರ್ ಹೇಳಿದ್ದಾರೆ.
ಕೀರನ್ ಪೆÇಲಾರ್ಡ್ ನಾಯಕ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಗಾಗಿ ವಿಂಡೀಸ್ ಪ್ರಕಟಿಸಿರುವ ತಂಡ ಬಲಿಷ್ಠವಾಗಿದೆ. ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಪ್ರಮುಖ ಆಟಗಾರ ಕೀರನ್ ಪೆÇಲಾರ್ಡ್ ತಂಡದ ನಾಯಕರಾಗಿದ್ದಾರೆ. ನಿಕೋಲಸ್ ಪೂರನ್ ಉಪನಾಯಕರಾಗಿದ್ದಾರೆ. ಇನ್ನು ಸ್ಪೋಟಕ ಬ್ಯಾಟ್ಸ್‍ಮನ್ ಕ್ರಿಸ್ ಗೇಲ್, ಎವಿನ್ ಲೂಯಿಸ್ ಮೊದಲಾದವರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ದ.ಆಫ್ರಿಕಾ ವಿರುದ್ಧದ ಮೊದಲ
2 ಟಿ20ಐಗೆ ವಿಂಡೀಸ್ ತಂಡ ಕೀರನ್ ಪೆÇಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಫಿಡೆಲ್ ಎಡ್ವಡ್ರ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ಆಂಡ್ರೆ ರಸ್ಸೆಲ್, ಲೆಂಡ್ಲ್ ಸಿಮ್ಮನ್ಸ್, ಕೆವಿನ್ ಸಿಂಕ್ಲೇರ್.