ಈ ವಾರ ತೆರೆಗೆ ಬರುತ್ತಿದೆ ಅನಘ

0
214

ದೀಕ್ಷಾ ಫಿಲಂಸ್ ಸಮೂಹ ಸಿನಿಮಾ ಬ್ಯಾನರ್ ಅಡಿಯಲ್ಲಿ ಡಿ.ಪಿ. ಮಂಜುಳ ನಾಯಕ ಅವರು ನಿರ್ಮಿಸಿರುವ ಚಿತ್ರ ಅನಘ. ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಮೂಲಕ ನಿರ್ದೇಶಕ ರಾಜು ಎನ್.ಆರ್. ಅವರು ಇದೇ ಮೊದಲಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕಿದ್ದು, ಕಥೆ ಚಿತ್ರಕಥೆ, ಸಂಭಾಷಣೆಯನ್ನು ಸಹ ಅವರೇ ಬರೆದಿದ್ದಾರೆ. ಸಾಕಷ್ಟು ಹಾರರ್ ಚಿತ್ರಗಳು ಬಂದಿದ್ದರೂ ಅದೆಲ್ಲ ಚಿತ್ರಗಳಿಗಿಂತ ತುಸು ವಿಭಿನ್ನವಾಗಿ ಅನಘ ಮೂಡಿಬಂದಿದೆ ಎನ್ನುವ ನಿರ್ದೇಶಕರು, ಬಹುತೇಕ ಹೊಸ ಪ್ರತಿಭೆಗಳನ್ನೇ ಬಳಸಿಕೊಂಡು ವಿಭಿನ್ನ ಸಸ್ಪೆನ್ಸ್, ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಅನಘ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿμÉೀಶವಾಗಿ ಅನಘ ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್‍ಗಳಿವೆ. ಅಲ್ಲದೆ ಸೈನ್ಸ್ ಬೇಸ್ಡ್ ಹಾರರ್ ಕಥಾನಕವಾಗಿದ್ದು, ಇಡೀ ಸಿನಿಮಾದಲ್ಲಿ ಮನರಂಜನೆಗೆ ಜಾಸ್ತಿ ಒತ್ತು ಕೊಟ್ಟು ಚಿತ್ರಕಥೆಯನ್ನು ನಿರೂಪಿಸಲಾಗಿದೆ.

ಇನ್ನು ಈ ಚಿತ್ರಕ್ಕೆ ಬೆಂಗಳೂರು ಹಾಗೂ ದೇವರಾಯನದುರ್ಗದ ಸುತ್ತಮುತ್ತಲ ಲೊಕೇಶನ್‍ಗಳಲ್ಲಿ ಚಿತ್ರಿಕರಣ ನಡೆಸಲಾಗಿದೆ. ಚಿತ್ರದಲ್ಲಿ ಶಂಕರ್ ಅವರ ಕ್ಯಾಮೆರಾ ಕೈಚಳಕ, ಅವಿನಾಶ್ ಸಂಗೀತ ಸಂಯೋಜನೆ ಇದ್ದು, ಹಾರರ್ ಚಿತ್ರವಾದ್ದರಿಂದ ಇಲ್ಲಿ ಹಿನ್ನೆಲೆ ಸಂಗೀತ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ. ಅದನ್ನು ಅವಿನಾಶ್ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರದ ಸಂಕಲನ ವೆಂಕಿ ಯುಡಿವಿ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿಸಿದ್ದಾರೆ.

ರಂಗಭೂಮಿ ಪ್ರತಿಭೆಗಳಾದ ನಳೀನ್ ಕುಮಾರ್ ಮತ್ತು ಪವನ್‍ಪುತ್ರ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಕಿರಣ್‍ರಾಜï, ದೀಪಾಮೋಹನ್, ಸಿಲ್ಲಿಲಲ್ಲಿ ಖ್ಯಾತಿಯ ಶ್ರೀನಿವಾಸ್‍ಗೌಡ್ರು, ಕಿರಣತೇಜ, ಕರಣ್ ಆರ್ಯನ್, ರೋಹಿತ್, ಖುಷಿ ರಶ್ಮಿ ಹಾಗೂ ವಿಶೇಷ ಪಾತ್ರದಲ್ಲಿ ನಂಜಪ್ಪ ಬೆನಕ ರಂಗಭೂಮಿ ಮತ್ತು ಹಾಸ್ಯಪಾತ್ರದಲ್ಲಿ ಮೋಟು ರವಿ, ಅಭಿ ಮತ್ತು ವೀರೇಶ(ಕೆಜಿಎಫ್) ಅವರುಗಳು ಕಾಣಿಸಿಕೊಂಡಿಸಿದ್ದಾರೆ

Previous articleಸರಳವಾಗಿ ಕನಕ ದುರ್ಗಮ್ಮ ಸಿಡಿಬಂಡಿ
Next articleಥಿಯೇಟರ್‍ಗೆ ಬರುತ್ತಿದೆ ನನ್ ಗುರಿ ವಾರೆಂಟ್

LEAVE A REPLY

Please enter your comment!
Please enter your name here