ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳಿಗೆ ಸೋಲಿನ ರುಚಿ ತೋರಿಸಿ ಸರಣಿ ಗೆದ್ದ ಬಾಂಗ್ಲಾದೇಶ!

0
176

ಬಾಂಗ್ಲಾದೇಶ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರತವಾಗಿದ್ದು, ಹರಿಣಗಳ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಇನ್ನು ಇತ್ತಂಡಗಳ ನಡುವೆ ಮೊದಲಿಗೆ ಪಂದ್ಯಗಳ ಏಕದಿನ ಸರಣಿ ನಡೆದಿದ್ದು, ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ ಹರಿಣಗಳಿಗೆ ಅವರದ್ದೇ ನೆಲದಲ್ಲಿ ಸೋಲಿನ ರುಚಿ ತೋರಿಸಿ ಸರಣಿ ವಶಪಡಿಸಿಕೊಂಡಿದೆ. ಹೌದು, ಪ್ರವಾಸಿ ಬಾಂಗ್ಲಾದೇಶ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಜಯ ಸಾಧಿಸಿದೆ.

ಇತ್ತಂಡಗಳ ನಡುವೆ ಮಾರ್ಚ್ 18ರಂದು ಸೆಂಚುರಿಯನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ 38 ರನ್‌ಗಳ ಜಯ ಸಾಧಿಸುವ ಮೂಲಕ ಸರಣಿಯಲ್ಲಿ ಶುಭಾರಂಭವನ್ನು ಮಾಡಿದ್ದ ಬಾಂಗ್ಲಾದೇಶ ನಂತರ ಜೋಹಾನ್ಸ್‌ಬರ್ಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಸೋಲುಂಡಿತ್ತು, ಹೀಗೆ ದ್ವಿತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸಿದ ನಂತರ ಸರಣಿಯಲ್ಲಿ ಇತ್ತಂಡಗಳು ಸಮಬಲವನ್ನು ಸಾದಿಸಿದ್ದವು ಹಾಗೂ ಇಂದು ( ಮಾರ್ಚ್ 23 ) ನಡೆದ ಅಂತಿಮ ಏಕದಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿತ್ತು. ಇನ್ನು ಭಾರೀ ಕುತೂಹಲದೊಂದಿಗೆ ಸೆಂಚುರಿಯನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ಈ ತೃತೀಯ ಪಂದ್ಯದಲ್ಲಿ ಬಾಂಗ್ಲಾದೇಶ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು ಸರಣಿಯನ್ನು ವಶಪಡಿಸಿಕೊಂಡಿದೆ.

ಸೆಂಚುರಿಯನ್ ಸೂಪರ್‌ಸ್ಪೋರ್ಟ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ತೃತೀಯ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡು 154 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಬಾಂಗ್ಲಾದೇಶ ಬೌಲಿಂಗ್ ದಾಳಿಗೆ ತತ್ತರಿಸಿದೆ. ದ. ಆಫ್ರಿಕಾ ಪರ ಆರಂಭಿಕ ಅಟಗಾರರಾಗಿ ಕಣಕ್ಕಿಳಿದ ಜನ್ನೆಮನ್ ಮಲನ್ 39 ರನ್ ಗಳಿಸಿದರೆ, ಕ್ವಿಂಟನ್ ಡಿ ಕಾಕ್ 12 ರನ್ ಗಳಿಸಿದರು. ಇನ್ನುಳಿದಂತೆ ಕೈಲ್ ವರ್ರೆಯ್ನೆ 9 ರನ್, ಟೆಂಬಾ ಬವುಮಾ 2 ರನ್, ರಸ್ಸಿ ವಾನ್ ಡರ್ ಡುಸೆನ್ 4 ರನ್, ಡೇವಿಡ್ ಮಿಲ್ಲರ್ 16 ರನ್, ಡ್ವೇನ್ ಪ್ರಿಟೊರಿಯಸ್ 20 ರನ್, ಕೇಶವ್ ಮಹಾರಾಜ್ 28 ರನ್, ಕಗಿಸೊ ರಬಾಡಾ 4 ರನ್, ಲುಂಗಿ ಎನ್‌ಗಿಡಿ ೦ ಹಾಗೂ ತಬ್ರೈಜ್ ಶಂಸಿ ಅಜೇಯ 3 ರನ್ ಕಲೆಹಾಕಿದರು. ಹೀಗೆ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರ ಕೂಡ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದ ಕಾರಣ ತಂಡ ಅಲ್ಪಮೊತ್ತಕ್ಕೆ ಆಲ್ಔಟ್ ಆಗಿದೆ. ಇನ್ನು ಬಾಂಗ್ಲಾದೇಶದ ಪರ ಟಸ್ಕಿನ್ ಆಹ್ಮದ್ 5 ವಿಕೆಟ್ ಪಡೆದು ಮಿಂಚಿದರೆ, ಶಕಿಬ್ ಅಲ್ ಹಸನ್ 2 ವಿಕೆಟ್ ಹಾಗೂ ಮೆಹದಿ ಹಾಸನ್ ಮತ್ತು ಶೊರಿಫುಲ್ ಇಸ್ಲಾಮ್ ತಲಾ ಒಂದೊಂದು ವಿಕೆಟ್ ಪಡೆದರು.

ಇತ್ತ ದಕ್ಷಿಣ ಆಫ್ರಿಕಾ ನೀಡಿದ 155 ರನ್‌ಗಳ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ತಮಿಮ್ ಇಕ್ಬಾಲ್ ಅಜೇಯ 87 ರನ್ ಗಳಿಸಿದರೆ, ಲಿಟನ್ ದಾಸ್ 48 ರನ್ ಗಳಿಸಿದರು ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಕಿಬ್ ಅಲ್ ಹಸನ್ ಅಜೇಯ 18 ರನ್ ಗಳಿಸಿದರು. ಈ ಮೂಲಕ 26.3 ಓವರ್‌ನಲ್ಲಿಯೇ ಯಶಸ್ವಿಯಾಗಿ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ 1 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿ 9 ವಿಕೆಟ್‌ಗಳ ಜಯ ಗಳಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕೈಲ್ ವೆರ್ರೆನ್ನೆ, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ ಬಾಂಗ್ಲಾದೇಶ ಪ್ಲೇಯಿಂಗ್ ಇಲೆವೆನ್: ತಮೀಮ್ ಇಕ್ಬಾಲ್ ( ನಾಯಕ ), ಲಿಟನ್ ದಾಸ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (wk), ಮಹಮ್ಮದುಲ್ಲಾ, ಯಾಸಿರ್ ಅಲಿ, ಅಫೀಫ್ ಹೊಸೈನ್, ಮೆಹಿದಿ ಹಸನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್

Previous articleಐಪಿಎಲ್ 2022: ಮೊಯಿನ್ ಅಲಿ ಬದಲಾಗಿ ಸಿಎಸ್‌ಕೆ ಪರ ಕಣಕ್ಕಿಳಿಯಬಹುದಾದ ಮೂವರು ಆಟಗಾರರು
Next article“ನಾಳೆ ವಿದ್ಯುತ್ ವ್ಯತ್ಯಯ “

LEAVE A REPLY

Please enter your comment!
Please enter your name here