ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ತನ್ನ ಜೀವನದ ಅತಿ ದೊಡ್ಡ ಟೆಸ್ಟ್ ಪಂದ್ಯವಲ್ಲ ಎಂದಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಆಡಲಿರುವ ಆರು ಪಂದ್ಯಗಳಲ್ಲಿ ಇದು ಕೂಡ ಒಂದು ಎಂದಿದ್ದಾರೆ ಕೊಹ್ಲಿ. ವಿರಾಟ್ ಕೊಹ್ಲಿ ಇದೇ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾ ನೀಡಿಕೊಂಡು ಬಂದಿರುವ ಅತ್ಯುತ್ತಮ ಪ್ರದರ್ಶನವನ್ನು ಈ ಫೈನಲ್ ಪಂದ್ಯದಲ್ಲಿಯೂ ನೀಡಲಿದೆ.
ಫಲಿತಾಂಶ ಯಾವುದೇ ಬಂದರೂ ತಂಡ ತನ್ನ ಅತ್ಯುನ್ನತ ಪ್ರದರ್ಶನವನ್ನು ಮುಂದುವರಿಸಲಿದೆ ಎಂದಿದ್ದಾರೆ. ಜೊತೆಗೆ ಐತಿಹಾಸಿಕ ಪಂದ್ಯವೆಂದು ಪಡದಿರುವ ಹೆಚ್ಚಿನ ಪ್ರಚಾರ ತಂಡದ ಡ್ರೆಸ್ಸಿಂಗ್ ರೂಮ್‍ಗೆ ಭಂಗ ತಂದಿಲ್ಲ ಎಂದಿದ್ದಾರೆ ವಿರಾಟ್ ಕೊಹ್ಲಿ.144 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಟೆಸ್ಟ್ ಕ್ರಿಕೆಟ್‍ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆಯೋಜನೆ ಮಾಡಲಾಗಿದೆ. ಭಾರತ ಹಾಗೂ ನ್ಯೂಜಿಎಲಂಡ್ ತಂಡಗಳು ಓ ಚೊಚ್ಚಲ ಟೂರ್ನಿಯಲ್ಲಿ ಫೈನಲ್ ಹಂತಕ್ಕೇರಿದ್ದು ಪ್ರಶಸ್ತಿಗಾಗಿ ಸೆಣೆಸಾಟವನ್ನು ನಡೆಸಲಿದೆ. ಅದರಲ್ಲೂ ಹಿರಿಯರ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಪ್ರಥಮ ಐಸಿಸಿ ಟ್ರೋಫಿಯನ್ನು ಗೆಲ್ಲುವ ಅವಕಾಶವೂ ದೊರೆತಿದೆ.
ಟೆಸ್ಟ್ ಕ್ರಿಕೆಟ್‍ನಲ್ಲಿ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾ ನೀಡುತ್ತಿರುವ ಅದ್ಭುತ ಪ್ರದರ್ಶನಕ್ಕೆ ಈ ಚಾಂಪಿಯನ್ ಪಟ್ಟ ಮತ್ತೊಂದು ಗರಿಮೆಯನ್ನು ನೀಡಲಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಫೈನಲ್ ಪಂದ್ಯದ ಮೇಲೆ ದೊಡ್ಡ ನಿರೀಕ್ಷೆ ಇದೆ. ಆದರೆ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯಕ್ಕೆ ಸೃಷ್ಟಿಯಾಗಿರುವ ‘ಹೈಪ್’ಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾರೆ. ನಮ್ಮ ತಂಡ ವೃತಿಪರ ಕ್ರಿಕಟಿಗರ ಬಳಗವಾಗಿದ್ದು ಒಂದು ಪಂದ್ಯದ ಫಲಿತಾಂಶದ ಬಗ್ಗೆ ಹೆಚ್ಚಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.