ಕೋಪಾ ಅಮೆರಿಕಾ 2021: ಪೆರು ವಿರುದ್ಧ ಬ್ರೆಜಿಲ್‍ಗೆ ಭರ್ಜರಿ ಜಯ

0
260

ರಿಯೋ ಡಿ ಜನೈರೋ: ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿರುವ ಎಸ್ಟಾಡಿಯೋ ನಿಲ್ಟನ್ ಸ್ಯಾಂಟೋಸ್ ಅರೆನಾದಲ್ಲಿ ಶುಕ್ರವಾರ (ಜೂನ್ 18) ನಡೆದ ಕೋಪಾ ಅಮೆರಿಕಾ ಗ್ರೂ ‘ಎ’ ಪಂದ್ಯದಲ್ಲಿ ಪೆರು ವಿರುದ್ಧ ಬ್ರೆಜಿಲ್ ಭರ್ಜರಿ 4-0ಯ ಗೆಲುವು ದಾಖಲಿಸಿದೆ.

ಬ್ರೆಜಿಲ್‍ನ ಅಲೆಕ್ಸ್ ಸ್ಯಾಂಡ್ರೋ 12ನೇ ನಿಮಿಷದಲ್ಲಿ, ನೇಮರ್ 68ನೇ ನಿಮಿಷದಲ್ಲಿ, ಎವರ್ಟನ್ ರಿಬೈರೊ 89ನೇ ನಿಮಿಷದಲ್ಲಿ, ರಿಚಾರ್ಲಿಸನ್ 90+3ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಪೆರುವಿನ ಹೀನಾಯ ಸೋಲಿಗೆ ಕಾರಣರಾದರು. ಬ್ರೆಜಿಲ್ ತಂಡಕ್ಕೆ ಟೂರ್ನಿಯ ಎರಡನೇ ಗೆಲುವಿದು. ಈ ಪಂದ್ಯದ ಬಳಿಕ ಬ್ರೆಜಿಲ್ ತಂಡ ಗ್ರೂಪ್ ‘ಎ’ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಗಟ್ಟಿಯಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಕೊಲಂಬಿಯಾ 4, ವೆನೆಜುವೆಲಾ 1 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿದೆ.ಗ್ರೂಪ್ ‘ಬಿ’ಯಲ್ಲಿ ಪೆರಗ್ವೆ 3, ಅಜೆರ್ಂಟೀನಾ 1, ಚಿಲಿ 1 ಅಂಕದೊಂದಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.

Previous articleವಾರಾಂತ್ಯ ಕರ್ಫ್ಯೂ ಜಾರಿ: ರಸ್ತೆಗಳಲ್ಲಿ ಕ್ರಿಕೇಟ್ , ಲಗೋರಿ ಆಟ
Next articleನ್ಯೂಜಿಲೆಂಡ್ ವಿರುದ್ಧದ ಕದನಕ್ಕೂ ಮುನ್ನ ಟೀಮ್ ಇಂಡಿಯಾ ಗ್ರೂಫ್ ಫೆÇೀಟೋಗೆ ಫೆÇೀಸ್

LEAVE A REPLY

Please enter your comment!
Please enter your name here