ಬುಡಾಪೆಸ್ಟ್: ಪೆÇೀರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಅವರ ಒಂದೇ ಒಂದು ನಡೆಯಿಂದಾಗಿ ದೈತ್ಯ ಕಂಪನಿ ಕೋಕಾ-ಕೋಲಾಗೆ ಸುಮಾರು 4 ಬಿಲಿಯನ್ ಡಾಲರ್ (2,93,24,00,00,000 ರೂ.) ನಷ್ಟವಾಗಿದೆ. ಸುದ್ದಿಗೋಷ್ಠಿ ವೇಳೆ ರೊನಾಲ್ಡೋ ತೋರಿದ ಒಂದು ನಡೆಯಿಂದಾಗಿ ಕೋಕಾ-ಕೋಲಾಕ್ಕೆ ಇಷ್ಟು ದೊಡ್ಡ ನಷ್ಟವಾಗಿದೆ.ಮಂಗಳವಾರ (ಜೂನ್ 15) ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‍ಎ) ಯೂರೋ 2020 ಪಂದ್ಯದಲ್ಲಿ ಪೆÇೀರ್ಚುಗಲ್ ಮತ್ತು ಹಂಗೆರಿ ತಂಡಗಳು ಕಾದಾಡಿದ್ದವು. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆದಿತ್ತು. ಈ ವೇಳೆ ಕ್ರಿಸ್ಚಿಯಾನೊ ರೊನಾಲ್ಡೋ ಕೋಕಾ-ಕೋಲಾ ಬಾಟಲಿಯನ್ನು ಬದಿಗೆ ಸರಿಸಿದ್ದರು. ಇದರಿಂದಲೇ ಕಂಪನಿಗೆ ಅಪಾರ ನಷ್ಟವಾಗಿದೆ.
ಸುದ್ದಿಗೋಷ್ಠಿಯಲ್ಲಿ ಕುಳಿತುಕೊಳ್ಳಲು ಬಂದ ರೊನಾಲ್ಡೋ ಮುಂದೆ ಎರಡು ಕೋಕಾ-ಕೋಲಾ ಬಾಟಲಿಗಳು ಮತ್ತೊಂದು ನೀರಿನ ಬಾಟಲಿ ಇತ್ತು. ಸುದ್ದಿಗೋಷ್ಠಿ ಆರಂಭವಾಗಬೇಕು ಅನ್ನುವಾಗ ರೊನಾಲ್ಡೋ ಎರಡು ಕೋಕಾ-ಕೋಲಾ ಬಾಟಲಿಗಳನ್ನು ಡೆಸ್ಕ್‍ನ ಬದಿಗಿರಿಸಿ ನೀರಿನ ಬಾಟಲಿ ಮೇಲೆತ್ತಿ ‘ಅದರ ಬದಲು ಇದನ್ನು ಕುಡಿಯಿರಿ’ ಎಂದಿದ್ದರು. ಇದು ಕೋಕಾ-ಕೋಲಾ’ ಕಂಪನಿಗೆ ದೊಡ್ಡ ಹೊಡೆತ ಕೊಟ್ಟಿದೆ.ಹಂಗೆರಿಯ ಬುಡಾಪೆಸ್ಟ್‍ನಲ್ಲಿರುವ ಪುಸ್ಕಸ್ ಅರೆನಾದಲ್ಲಿ ಮಂಗಳವಾರ ನಡೆದ ಯೂರೋ 2020 ಗ್ರೂಪ್ ‘ಎಫ್’ ಆರಂಭಿಕ ಪಂದ್ಯದಲ್ಲಿ ಹಂಗೆರಿ ವಿರುದ್ಧ ಪೆÇೀರ್ಚುಗಲ್ 3-0ಯ ಜಯ ದಾಖಲಿಸಿದೆ. ಪೆÇೀರ್ಚುಗಲ್ ಪರ ರಾಫೌಲ್ ಗೆರೆರೋ 84ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ರೊನಾಲ್ಡೋ 87 (ಪೆನಾಲ್ಟಿ) ಮತ್ತು 90+2ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವು ಸಾರಿದರು.