ಯೂರೋ ಕಪ್‍ನಲ್ಲಿ ಇತಿಹಾಸ ಬರೆದ ಕ್ರಿಸ್ಚಿಯಾನೊ ರೊನಾಲ್ಡೋ

0
262

ಬುಡಾಪೆಸ್ಟ್: ಪೆÇೀರ್ಚುಗಲ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ಯೂರೋ ಕಪ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಯೂರೋ ಇತಿಹಾಸದಲ್ಲಿ ಅತೀ ಹೆಚ್ಚು ಗೋಲ್ ಬಾರಿಸಿದ ಸಾರ್ವಕಾಲಿಕ ಆಟಗಾರನಾಗಿ ರೊನಾಲ್ಡೋ ಗುರುತಿಸಿಕೊಂಡಿದ್ದಾರೆ. ಮಂಗಳವಾರ (ಜೂನ್ 15)ರ ಪಂದ್ಯದಲ್ಲಿ ರೊನಾಲ್ಡೋ ಈ ಸಾಧನೆ ಮಾಡಿದ್ದಾರೆ.

ಹಂಗೆರಿಯ ಬುಡಾಪೆಸ್ಟ್‍ನಲ್ಲಿರುವ ಪುಸ್ಕಸ್ ಅರೆನಾದಲ್ಲಿ ಮಂಗಳವಾರ ನಡೆದ ಯೂರೋ 2020 ಗ್ರೂಪ್ ‘ಎಫ್’ ಆರಂಭಿಕ ಪಂದ್ಯದಲ್ಲಿ ಹಂಗೆರಿ ವಿರುದ್ಧ ಪೆÇೀರ್ಚುಗಲ್ 3-0ಯ ಜಯ ದಾಖಲಿಸಿತ್ತು. ಪೆÇೀರ್ಚುಗಲ್ ಪರ ರಾಫೌಲ್ ಗೆರೆರೋ 84ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಕ್ರಿಸ್ಚಿಯಾನೊ ರೊನಾಲ್ಡೋ 87 (ಪೆನಾಲ್ಟಿ) ಮತ್ತು 90+2ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವು ಸಾರಿದ್ದರು. ಈ ಎರಡು ಗೋಲ್‍ಗಳೊಂದಿಗೆ ರೊನಾಲ್ಡೋ ಯೂರೋ ಕಪ್‍ನಲ್ಲಿ ಒಟ್ಟು 11 ಗೋಲ್‍ಗಳನ್ನು ಬಾರಿಸಿದಂತಾಗಿದೆ. ಇದು ಯೂರೋ ಕಪ್‍ನಲ್ಲೇ ಅತ್ಯಧಿಕ ಗೋಲ್ ಸಾಧನೆಯಾಗಿದೆ. ಮಂಗಳವಾರದ ಪಂದ್ಯಕ್ಕೂ ಮುನ್ನ ರೊನಾಲ್ಡೋ, 9 ಗೋಲ್‍ಗಳೊಂದಿಗೆ ಫ್ರೆಂಚ್ ಮಾಜಿ ಆಟಗಾರ ಮೈಕೆಲ್ ಪ್ಲಾಟಿನಿ ಜೊತೆಗೆ ದಾಖಲೆ ಸರಿದೂಗಿಸಿಕೊಂಡಿದ್ದರು.

Previous articleಮನೀ ಪಾಂಡೆ ಮುಂದೆ ಧವನ್ ಮತ್ತು ಭುವನೇಶ್ವರ್‍ಗೆ ನಾಯಕರಾಗುವ ಅರ್ಹತೆ ಇಲ್ಲ ಎಂದ ಮಾಜಿ ಕ್ರಿಕೆಟಿಗ
Next articleWTC ಫೈನಲ್‍ಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳದ 5 ಪ್ರಮುಖ ಆಟಗಾರರಿವರು!

LEAVE A REPLY

Please enter your comment!
Please enter your name here