ಕೋಚ್ ಆಗಿ ದ್ರಾವಿಡ್‍ಗಿರುವ ವಿಶೇಷ ಶಕ್ತಿಯನ್ನು ವಿವರಿಸಿದ ಶುಬ್ಮನ್ ಗಿಲ್

0
212

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಭಾರತ ಎ ಹಾಗೂ ಅಂಡರ್ 19 ತಂಡಗಳಿಗೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ ರಾಹುಲ್ ದ್ರಾವಿಡ್ ಅನೇಕ ಯುವ ಆಟಗಾರರ ಬೆಳವಣಿಗೆಗೆ ಕಾರಣರಾಗಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರಿಗಿರುವ ವಿಶೇಷ ಸಾಮಥ್ರ್ಯವನ್ನು ಹೇಳಿಕೊಂಡಿದ್ದಾರೆ. ಶುಬ್ಮನ್ ಗಿಲ್ ಅಂಡರ್ 19 ತಂಡದಲ್ಲಿ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಸದ್ಯ ಟೀಮ್ ಇಂಡಿಯಾ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ಶುಬ್ಮನ್ ಗಿಲ್ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗುತ್ತಿದ್ದಾರೆ.

ತಾಂತ್ರಿಕವಾಗಿ ಬದಲಾವಣೆಗೆ ಒತ್ತು ನೀಡುವುದಿಲ್ಲ
ಗ್ರೇಡ್ ಕ್ರಿಕೆಟರ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿದ ಶುಬ್ಮನ್ ಗಿಲ್ ರಾಹುಲ್ ದ್ರಾವಿಡ್ ಕೋಚಿಂಗ್ ವಿಚಾರವಾಗಿ ಹೇಳಿಕೊಂಡಿದ್ದಾರೆ. “ರಾಹುಲ್ ದ್ರಾವಿಡ್ ಅವರು ಆಟಗಾರರು ಹೊಂದಿರುವ ತಾಂತ್ರಿಕತೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಿಕೊಳ್ಳಲು ಬಯಸದಂತಾ ಕೋಚ್” ಎಂದಿದ್ದಾರೆ.

ತಾಂತ್ರಿಕವಾಗಿ ಬದಲಾವಣೆಗೆ ಒತ್ತು ನೀಡುವುದಿಲ್ಲ
ಗ್ರೇಡ್ ಕ್ರಿಕೆಟರ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿದ ಶುಬ್ಮನ್ ಗಿಲ್ ರಾಹುಲ್ ದ್ರಾವಿಡ್ ಕೋಚಿಂಗ್ ವಿಚಾರವಾಗಿ ಹೇಳಿಕೊಂಡಿದ್ದಾರೆ. “ರಾಹುಲ್ ದ್ರಾವಿಡ್ ಅವರು ಆಟಗಾರರು ಹೊಂದಿರುವ ತಾಂತ್ರಿಕತೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಿಕೊಳ್ಳಲು ಬಯಸದಂತಾ ಕೋಚ್” ಎಂದಿದ್ದಾರೆ.

ಅದು ಮಾಡಿ, ಇದು ಮಾಡಿ ಅನ್ನಲ್ಲ ದ್ರಾವಿಡ್!
“ಅವರು ಆಟಗಾರನ ಬಳಿಗೆ ಹೋಗಿ ನಿಮ್ಮ ತಂತ್ರದಲ್ಲಿ ಇದನ್ನು ಬದಲಾಯಿಸಿಕೊಳ್ಳಿ ಎಂದು ಹೇಳುವುದಿಲ್ಲ, ಅಥವಾ ಇದನ್ನು ಮಾಡಿ ಅದನ್ನು ಮಾಡಿ ಎಂದು ಕೂಡ ಹೇಳುವುದಿಲ್ಲ. ಅವರು ಮಾನಸಿಕ ಹಾಗೂ ತಂತ್ರಗಳ ವಿಚಾರವಾಗಿ ಹೆಚ್ಚಿನ ಗಮನಹರಿಸುತ್ತಾರೆ. ಕಠಿಣ ಸಂದರ್ಭದಲ್ಲಿ ಕಠಿಣ ಮನಸ್ಥಿತಿಯನ್ನು ಯಾವ ರೀತಿಯಲ್ಲಿ ಹೊಂದಬಹುದು ಎಂಬುದರ ಮೇಲೆ ಹೆಚ್ಚು ಗಮನ ನೀಡುತ್ತಾರೆ” ಎಂದು ಗಿಲ್ ಹೇಳಿಕೆಯನ್ನು ನೀಡಿದ್ದಾರೆ.

ರಣತಂತ್ರ ಹಾಗೂ ಕಠಿಣ ಮನಸ್ಥಿತಿ
“ರಾಹುಲ್ ದ್ರಾವಿಡ್ ತಾಂತ್ರಿಕವಾಗಿ ಅತ್ಯಂತ ಹೆಚ್ಚು ಕೌಶಲ್ಯವನ್ನು ಹೊಂದಿದ್ದಂತಾ ಆಟಗಾರ. ಹಾಗಾಗಿ ಎಲ್ಲರೂ ಅವರು ಬ್ಯಾಟಿಂಗ್ ತಾಂತ್ರಿಕ ವಿಚಾರವಾಗಿ ಹೆಚ್ಚಿನ ಮಾರ್ಗದರ್ಶನಗಳನ್ನು ನೀಡಬಹುದು ಎಂದು ಭಾವಿಸುತ್ತಾರೆ. ಆದರೆ ಅವರು ರಣತಂತ್ರಗಳ ಬಗ್ಗೆ ಹಾಗೂ ಆಟಗಾರರ ಮನಸ್ಥಿತಿಯ ವಿಚಾರವಾಗಿ ಹೆಚ್ಚಿನ ಗಮನ ನೀಡುತ್ತಾರೆ” ಎಂದು ಗಿಲ್ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಎರಡು ತಂಡಗಳ ಪ್ರಯೋಗ
ಮೊದಲ ಬಾರಿಗೆ ಬಿಸಿಸಿಐ ಎರಡು ಪ್ರತ್ಯೇಕ ತಂಡಗಳನ್ನು ಏಕಕಾಲದಲ್ಲಿ ಎರಡು ಭಿನ್ನ ಮಾದರಿಗಳಲ್ಲಿ ಭಿನ್ನ ಸರಣಿಯಲ್ಲಿ ಆಡಿಸಲು ಸಜ್ಜಾಗಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡ ಇಂಗ್ಲೆಂಡ್‍ನಲ್ಲಿದ್ದು ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿದ್ದರೆ ಮತ್ತೊಂದೆಡೆ ಅದೇ ಸಂದರ್ಭದಲ್ಲಿ ಶಿಖರ್ ಧವನ್ ನೇತೃತ್ವದ ತಂಡ ಶ್ರೀಲಂಕಾದಲ್ಲಿ ಸೀಮಿತ ಓವರ್‍ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇಂಗ್ಲೆಂಡ್‍ನಲ್ಲಿರುವ ತಂಡಕ್ಕೆ ರವಿ ಶಾಸತ್ರಿ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ ರಾಹುಲ್ ದ್ರಾವಿಡ್‍ಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾ ತಂಡದ ಕೋಚ್ ಜವಾಬ್ಧಾರಿಯನ್ನು ನೀಡಲಾಗಿದೆ.

Previous articleಯುನಿಫೈಡ್ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್‌ ಅಡಿಯಲ್ಲಿ ಪದವಿ ಕಾಲೇಜುಗಳಿಗೆ ಪ್ರವೇಶ:ಡಾ.ಅಶ್ವತ್ಥ ನಾರಾಯಣ್
Next articleಕ್ರಿಶ್ಚಿಯನ್ ಎರಿಕ್ಸನ್‍ಗೆ ಹೃದಯಾಘಾತವಾಗಿತ್ತು: ಡೆನ್ಮಾರ್ಕ್ ಡಾಕ್ಟರ್

LEAVE A REPLY

Please enter your comment!
Please enter your name here