ಸ್ಫೋಟಕ ಬ್ಯಾಟಿಂಗ್‍ನೊಂದಿಗೆ ವಿಶ್ವದಾಖಲೆ ಬರೆದ ಕ್ರಿಸ್ ಗೇಲ್!

0
210

ಸೇಂಟ್ ಲೂಸಿಯಾ: ಸೇಂಟ್ ಲೂಸಿಯಾದಲ್ಲಿರುವ ಡ್ಯಾರೆನ್ ಸಾಮಿ ನ್ಯಾಷನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ (ಜುಲೈ 12) ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 6 ವಿಕೆಟ್ ಜಯ ಗಳಿಸಿದೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಸ್ಫೋಟಕ ಅರ್ಧಶತಕದೊಂದಿಗೆ ಕೆರಿಬಿಯನ್ ತಂಡ ಪ್ರವಾಸಿ ಆಸ್ಟ್ರೇಲಿಯಾವನ್ನು ಸುಲಭವಾಗಿ ಸೋಲಿಸಿದೆ.ಈ ಪಂದ್ಯದೊಂದಿಗೆ ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ವೆಸ್ಟ್ ಇಂಡೀಸ್ 3-0ಯ ಗೆಲುವಿನೊಂದಿಗೆ ಸರಣಿ ವಶವಾಗಿಸಿಕೊಂಡಿದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯೂ ಇತ್ತಂಡಗಳ ಮಧ್ಯೆ ನಡೆಯಲಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ 23, ಆ್ಯರನ್ ಫಿಂಚ್ 30, ಅಲೆಕ್ಸ್ ಕ್ಯಾರಿ 13, ಮೋಯ್ಸಸ್ ಹೆನ್ರಿಕ್ಸ್ 33, ಆ್ಯಷ್ಟನ್ ಟರ್ನರ್ 24 ರನ್‍ನೊಂದಿಗೆ 6 ವಿಕೆಟ್ ನಷ್ಟದಲ್ಲಿ 141 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್, ಲೆಂಡ್ಲ್ ಸಿಮನ್ಸ್ 15, ಕ್ರಿಸ್ ಗೇಲ್ 67, ನಿಕೋಲಸ್ ಪೂರನ್ 32 ರನ್‍ನೊಂದಿಗೆ 14.5ನೇ ಓವರ್‍ಗೆ 4 ವಿಕೆಟ್ ಕಳೆದು 142 ರನ್ ಗಳಿಸಿತು.

ಮೆರಿಡಿತ್ ಉತ್ತಮ ಬೌಲಿಂಗ್
ಆಸ್ಟ್ರೇಲಿಯಾ ಇನ್ನಿಂಗ್ಸ್‍ನಲ್ಲಿ ವೆಸ್ಟ್ ಇಂಡೀಸ್‍ನ ಒಬೆಡ್ ಮೆಕಾಯ್ 1, ಡ್ವೇನ್ ಬ್ರಾವೋ 1, ಫ್ಯಾಬಿಯೆನ್ ಅಲೆನ್ 1, ಹೇಡನ್ ವಾಲ್ಶ್ 2 ವಿಕೆಟ್ ಪಡೆದರೆ, ವೆಸ್ಟ್ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 1, ರಿಲೇ ಮೆರಿಡಿತ್ 3 ವಿಕೆಟ್‍ನೊಂದಿಗೆ ಗಮನ ಸೆಳೆದರು. ಕ್ರಿಸ್ ಗೇಲ್ ಪಂದ್ಯಶ್ರೇಷ್ಠರೆನಿಸಿದರು.

ಟಿ20 ಕ್ರಿಕೆಟ್‍ನಲ್ಲಿ ದಾಖಲೆ
ಈ ಪಂದ್ಯದಲ್ಲಿ 38 ಎಸೆತಗಳಲ್ಲಿ 67 ರನ್ ಬಾರಿಸಿರುವ ಕ್ರಿಸ್‍ಗೇಲ್ ಟಿ20 ಕ್ರಿಕೆಟ್‍ನಲ್ಲಿ ವಿಶೇಷ ದಾಖಲೆಗೂ ಕಾರಣರಾಗಿದ್ದಾರೆ. ಟಿ20 ಕ್ರಿಕೆಟ್‍ನಲ್ಲಿ 14,000 ರನ್ ಬಾರಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ವಿಶೇಷ ದಾಖಲೆಯನ್ನು 41ರ ಹರೆಯದ ಗೇಲ್ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಅತ್ಯಧಿಕ ರನ್ ಪಟ್ಟಿಯಲ್ಲಿ ಗೇಲ್ ಈಗ ನಂ.1 ಸ್ಥಾನದಲ್ಲಿದ್ದಾರೆ.

ಟಿ20 ಕ್ರಿಕೆಟ್ ಅತ್ಯಧಿಕ ರನ್ ಪಟ್ಟಿ

  1. ಕ್ರಿಸ್ ಗೇಲ್, ವೆಸ್ಟ್ ಇಂಡೀಸ್, 14038 ರನ್, 22 ಶತಕ
  2. ಕೀರನ್ ಪೆÇಲಾರ್ಡ್, ವೆಸ್ಟ್ ಇಂಡೀಸ್, 10836 ರನ್, 1 ಶತಕ
  3. ಶೊಯೆಬ್ ಮಲಿಕ್, ಪಾಕಿಸ್ತಾನ, 10,741 ರನ್, 0 ಶತಕ
  4. ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 10017, 8 ಶತಕ
  5. ವಿರಾಟ್ ಕೊಹ್ಲಿ, ಭಾರತ, 9922 ರನ್, 5 ಶತಕ

Previous articleಶೋಯೆಬ್ ಅಖ್ತರ್ ಪಾಲಿನ ಕಷ್ಟದ ಬ್ಯಾಟ್ಸ್‍ಮನ್ ಯಾರು ಗೊತ್ತಾ? ಹೆಸರು ಕೇಳಿದ್ರೆ ಅಚ್ಚರಿಗೊಳ್ತೀರಿ!
Next articleಕ್ರಿಕೆಟ್ ಇತಿಹಾಸದ ಅತೀ ಚಿಕ್ಕ ಪಂದ್ಯ, 7 ರನ್‍ಗೆ ತಂಡ ಆಲ್ ಔಟ್!

LEAVE A REPLY

Please enter your comment!
Please enter your name here