ಕರಾಚಿ: ಕ್ರಿಕೆಟ್ ಇತಿಹಾಸದಲ್ಲಿ ದಿಗ್ಗಜ ಬ್ಯಾಟ್ಸ್‍ಮನ್‍ಗಳೆಲ್ಲ ಬ್ಯಾಟಿಂಗ್ ಮಾಡೋಕೆ ಕೊಂಚ ಅಳುಕುತ್ತಿದ್ದ ಬೌಲರ್ ಎಂದರೆ ಪಾಕಿಸ್ತಾನದ ಮಾಜಿ ಮಾರಕ ವೇಗಿ ಶೋಯೆಬ್ ಅಖ್ತರ್‍ಗೆ. ಅಖ್ತರ್ ಎಸೆಯುತ್ತಿದ್ದ ಬೌನ್ಸರ್, ಯಾರ್ಕರ್‍ಗೆ ಬ್ಯಾಟ್ಸ್‍ಮನ್‍ಗಳ ಮುಖದಲ್ಲಿ ಬೆವರಿಳಿಯುತ್ತಿದ್ದುದೂ ಇದೆ. ಇದೇ ಕಾರಣಕ್ಕೆ ಬ್ಯಾಟ್ಸ್‍ಮನ್‍ಗಳು ಎದುರಿಸಲು ಕಷ್ಟಪಡುತ್ತಿದ್ದ ಬೌಲರ್‍ಗಳ ಪಟ್ಟಿಯಲ್ಲಿ ಈಗಲೂ ಅಖ್ತರ್ ಸಿಗುತ್ತಾರೆ. ಶೋಯೆಬ್ ಅಖ್ತರ್ ವೇಗದ ಬೌಲಿಂಗ್ ಪರಿಗಾಗಿಯೇ ಅವರಿಗೆ ‘ರಾವಲ್ಪಿಂಡಿ ಎಕ್ಸ್‍ಪ್ರೆಸ್’ ಎಂಬ ಹೆಸರಿತ್ತು. ಇಂಥ ಶ್ರೇಷ್ಠ ಬೌಲರ್ ಅಖ್ತರ್ ತಾನು ಬೌಲಿಂಗ್ ಮಾಡಲು ಕಷ್ಟ ಅನುಭವಿಸುತ್ತಿದ್ದ ಬ್ಯಾಟ್ಸ್‍ಮನ್ ಹೆಸರು ಹೇಳಿದ್ದಾರೆ. ಆದರೆ ಈ ಬ್ಯಾಟ್ಸ್‍ಮನ್ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.
ಯಾರು ಆ ಬ್ಯಾಟ್ಸ್‍ಮನ್?
ವೇಗದ ಬೌಲರ್ ಆಗಿದ್ದ ಅಖ್ತರ್ ಎದುರಿಸಲು ದಿಗ್ಗಜ ಬ್ಯಾಟ್ಸ್‍ಮನ್‍ಗಳೇ ಹೆದರುತ್ತಿದ್ದರು ಎಂದಮೇಲೆ ಇನ್ನು ಬೌಲರ್‍ಗಳು ಅಖ್ತರ್‍ಗೆ ಯಾವಲೆಕ್ಕ? ಆದರೆ ಅಖ್ತರ್ ಬೌಲಿಂಗ್ ಮಾಡೋಕೆ ಪರದಾಡುತ್ತಿದ್ದುದು ಬ್ಯಾಟ್ಸ್‍ಮನ್‍ಗೆ ಅಲ್ಲ, ಬೌಲರ್‍ಗೆ. ಅವರೂ ಶ್ರೇಷ್ಠ ಬೌಲರ್ ಅನ್ನೋದು ವಿಶೇಷ. ಅಖ್ತರ್ 46 ಟೆಸ್ಟ್ ಪಂದ್ಯಗಳಲ್ಲಿ 178 ವಿಕೆಟ್, 163 ಏಕದಿನ ಪಂದ್ಯಗಳಲ್ಲಿ 247 ವಿಕೆಟ್, 15 ಟಿ20ಐ ಪಂದ್ಯಗಳಲ್ಲಿ 19 ವಿಕೆಟ್ ದಾಖಲೆ ಹೊಂದಿದ್ದಾರೆ.
ಮುತ್ತಯ್ಯ ಮುರಳೀಧರನ್
ಶೋಯೆಬ್ ಅಖ್ತರ್ ಬೌಲಿಂಗ್ ಮಾಡೋಕೆ ಕಷ್ಟ ಅನುಭವಿಸುತ್ತಿದ್ದ ಬ್ಯಾಟ್ಸ್‍ಮನ್ ಎಂದರೆ ಅದು ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್. ಹೀಗೆಂದು ಅಖ್ತರ್ ಅವರೇ ಹೇಳಿಕೊಂಡಿದ್ದಾರೆ. ಅಖ್ತರ್ ಆಡುತ್ತಿದ್ದ ದಿನಗಳಲ್ಲಿ 11ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುತ್ತಿದ್ದ ಮುರಳೀಧರನ್, ಅಖ್ತರ್‍ಗೆ ಬಹಳ ಕಾಟ ಕೊಡುತ್ತಿದ್ದರಂತೆ. ಅವರಿಗೆ ಬೌಲಿಂಗ್ ಮಾಡೋಕೆ ಅಖ್ತರ್‍ಗೆ ಬಲು ಕಷ್ಟ ಅನ್ನಿಸುತ್ತಿತ್ತಂತೆ.
‘ನಾನು ತಮಾμÉ ಮಾಡುತ್ತಿಲ್ಲ’
“ನಾನು ಬೌಲಿಂಗ್ ಮಾಡಿದ್ದರಲ್ಲಿ ನನಗೆ ಬಲು ಕಷ್ಟ ಅನ್ನಿಸುತ್ತಿದ್ದ ಬ್ಯಾಟ್ಸ್‍ಮನ್ ಎಂದರೆ ಅದು ಮುತ್ತಯ್ಯ ಮುರಳೀಧರನ್. ನಾನಿದನ್ನು ತಮಾμÉ ಮಾಡುತ್ತಿಲ್ಲ. ‘ನನ್ನನ್ನು ಕೊಲ್ಲಬೇಡ ಎಂದು ಆತ ಒಮ್ಮೆ ನನ್ನಲ್ಲಿ ವಿನಂತಿಸಿಕೊಂಡಿದ್ದ. ‘ನಾನು ತೆಳ್ಳಗಿನ ಮನುಷ್ಯ, ನೀನು ಬೌಲ್ಸರ್ ಹಾಕಿದರೆ ನಾನು ಸಾಯಬಹುದು. ಬಾಲ್ ಪಿಚ್ ಮಾಡಿ ಕೊಂಚ ನಿಧಾನಕ್ಕೆ ಹಾಕು. ನಾನೇ ನಿನಗೆ ವಿಕೆಟ್ ಒಪ್ಪಿಸುತ್ತೇನೆ’ ಎಂದು ಆತ ಹೇಳಿದ್ದ. ಹೀಗಾಗಿ ಆತನಿಗೆ ಬೌಲಿಂಗ್ ಮಾಡೋದೇ ಬಲು ಕಷ್ಟ ಅನ್ನಿಸುತ್ತಿತ್ತು,” ಎಂದು ಸ್ಪೋಟ್ರ್ಸ್‍ಕೀಡಾ ಜೊತೆ ಅಖ್ತರ್ ಹೇಳಿಕೊಂಡಿದ್ದಾರೆ.