ಬೆರ್ನ್: ಸ್ವಿಟ್ಜರ್‍ಲ್ಯಾಂಡ್‍ನ ಟೆನಿಸ್ ದಂತಕತೆ ರೋಜರ್ ಫೆಡರರ್ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಆಡುತ್ತಿಲ್ಲ. ಫೆಡರರ್ ಅಭಿಮಾನಿಗಳಿಗೆ ಈ ಸಂಗತಿ ಆಘಾತ ತಂದಿದೆ. ಮೊಣಕಾಲು ಗಾಯಕ್ಕೀಡಾಗಿರುವ ಫೆಡರರ್ ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಆಡುತ್ತಿಲ್ಲ ಎಂದಿದ್ದಾರೆ.
20 ಗ್ರ್ಯಾಂಡ್‍ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿರುವ ರೋಜರ್ ಫೆಡರರ್ ಇತ್ತೀಚೆಗμÉ್ಟೀ ಮುಕ್ತಾಯಗೊಂಡಿರುವ ವಿಂಬಲ್ಡನ್ 2021ರಲ್ಲಿ ಕ್ವಾರ್ಟರ್ ಫೈನಲ್‍ನಲ್ಲಿ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಆಗ ಫೆಡರರ್ ತಾನು ಈ ಸೀಸನ್‍ನಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. 39ರ ಹರೆಯದ ರೋಜರ್ ಫೆಡರರ್ ಈ ಬೇಸಗೆಯ ಬಳಿಕ ಮತ್ತೆ ಸಂಪೂರ್ಣ ಚೇತರಿಸಿ ಸ್ಪರ್ಧೆಗಳಿಗೆ ಕಮ್ ಬ್ಯಾಕ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಬಾರಿಯ ವಿಂಬಲ್ಡನ್‍ನಲ್ಲಿ ಪೆÇೀಲ್ಯಾಂಡ್‍ನ ಹಬರ್ಟ್ ಹರ್ಕಾಕ್ಜ್ ವಿರುದ್ಧ ಫೆಡರರ್ 6-3, 7-6(4), 6-0ರ ಅಂತರದಿಂದ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದರು.ಜಪಾನ್‍ನ ಟೊಕಿಯೋದಲ್ಲಿ ಜುಲೈ 23ರಿಂದ ಆರಂಭಗೊಳ್ಳುವ ಒಲಿಂಪಿಕ್ಸ್ ಆಗಸ್ಟ್ 8ರಂದು ಕೊನೆಗೊಳ್ಳಲಿದೆ.