150ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ, 3500 ದಂಡ

0
297

ಹಗರಿಬೊಮ್ಮನಹಳ್ಳಿ: ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ನೇತೃತ್ವದಲ್ಲಿ ಬುಧವಾರ ಪಟ್ಟಣದ ಬಸವೇಶ್ವರ ಬಜಾರ್‌ನಲ್ಲಿರುವ ಅಂಗಡಿಮುAಗಟ್ಟುಗಳ ಮೇಲೆ ದಾಳಿ ನಡೆಸಿ 150ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶ ಪಡಿಸಿಕೊಂಡು 3500ರೂ. ದಂಡ ವಿಧಿಸಲಾಗಿದೆ.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ಮಾತನಾಡಿ ಪ್ರಗತಿ ಪರಿಶೀಲನ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದನ್ವಯ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವುದಕ್ಕಾಗಿ ಅಂಗಡಿ ಮುಂಗಟ್ಟುಗಳಲ್ಲಿ ಬಳಸುವ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ, ನಗರದ ಸ್ವಚ್ಛ ಸುಂದರ ಪರಿಸರವನ್ನು ಸೇರಿದಂತೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಅಂಗಡಿಗೆ ತೆರಳುವಾಗ ಕೈಚೀಲ ಅಥವಾ ಬ್ಯಾಗ್‌ಗಳನ್ನು ಬಳಸುವಂತೆ ತಿಳಿಸಿಲಾಗಿದೆ ಎಂದರು.ಮುAದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಹಂತ ಹಂತವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಸಿದರು.

Previous articleತಳಮಟ್ಟದ ಅಭಿವೃದ್ದಿ ಬಿ.ಜೆ.ಪಿಯಿಂದ ಮಾತ್ರ ಸಾಧ್ಯ
Next articleಕೋವ್ಯಾಕ್ಸಿನ್ ಲಸಿಕೆಯ ವಿತರಣೆಗೆ ಎದುರಾದ ವಿಫ್ನ

LEAVE A REPLY

Please enter your comment!
Please enter your name here