25 ಕೋಟಿ ವಂಚನೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಅರುಣಾ ಕುಮಾರಿ ಮಂಗಳವಾರ ಬೆಳಗ್ಗೆ ವಿಡಿಯೋವೊಂದನ್ನು ಬಹಿರಂಗಪಡಿಸಿದ್ದಾರೆ. ಅಜಾÐತ ಸ್ಥಳದಿಂದ ವಿಡಿಯೋ ಬೈಟ್ ರಿಲೀಸ್ ಮಾಡಿರುವ ಅರುಣಾ ಕುಮಾರಿ ಈ ಪ್ರಕರಣದಲ್ಲಿ ‘ನನ್ನದು ಪ್ರಮುಖ ಪಾತ್ರವಿಲ್ಲ, ನನ್ನನ್ನು ಬಳಸಿಕೊಂಡಿದ್ದಾರೆ ಅμÉ್ಟೀ’ ಎಂದಿದ್ದಾರೆ. ‘ಹೆಣ್ಣು ಎಂಬ ಕಾರಣಕ್ಕೆ ಸಮಾಜದಲ್ಲಿ ನನ್ನ ಬಗ್ಗೆ ತೇಜೋವಧೆ ಮಾಡುವುದು ತಪ್ಪು’ ಎಂದು ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರುಣಾ ಕುಮಾರಿ ಇನ್ನು ಸೀಲ್ ಹಾಕಿ 2 ಲಕ್ಷ ಲಂಚ ಪಡೆಯುತ್ತಾರೆ ಎಂದು ನಟ ದರ್ಶನ್ ಮಾಡಿದ್ದ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಅರುಣಾ ಕುಮಾರಿ ”ಅದು ನನ್ನ ಜೀವನ, ನನಗೆ ಯಾರೂ ಸಹಾಯ ಮಾಡೋಕೆ ಬರಲ್ಲ” ಎಂದಿದ್ದಾರೆ. ಸೋಮವಾರ ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಟ ದರ್ಶನ್ ‘ಅರುಣಾ ಕುಮಾರಿ ಬ್ಯಾಂಕ್ ಮ್ಯಾನೇಜರ್ ಅಲ್ಲ, ಆಕೆ ಪಿಯುಸಿ ಪಾಸ್ ಆಗಿಲ್ಲ’ ಎಂದು ಬಹಿರಂಗಪಡಿಸಿದ್ದರು. ಅದೇ ಸಂದರ್ಭದಲ್ಲಿ ಅರುಣಾ ಕುಮಾರಿ ಅವರ ಪತಿಯನ್ನು ವೇದಿಕೆಗೆ ಕರೆಯಿಸಿ ‘ಅರುಣಾ ಕುಮಾರಿ ಸೀಲ್ ಹಾಕೋಕೆ 2 ಲಕ್ಷ ಲಂಚ ಪಡೆಯುತ್ತಾರೆ’ ಎಂದು ದೂರಿದ್ದರು. ಈ ವಿಷಯಕ್ಕೆ ಅರುಣಾ ಕುಮಾರಿ ಪ್ರತಿಕ್ರಿಯಿಸಿ, ”ಜನರಲ್ ಆಗಿ ಅದು ನನ್ನ ಲೈಫ್. ನಾನು ಏನ್ ತೆಗೆದುಕೊಳ್ತೀನಿ, ಬಿಡ್ತೀನಿ ಅದು ನನ್ನ ಬದುಕು. ನನ್ನ ಲೈಫ್ ಕೆಟ್ಟರೆ ದರ್ಶನ್, ಉಮಾಪತಿ, ಮತ್ತೊಬ್ಬರು, ಮತ್ತೊಬ್ಬರು ಬೇರೆ ಯಾರೂ ಬರಲ್ಲ” ಎಂದಿದ್ದಾರೆ. ”ಇದು ದೊಡ್ಡವರ ವಿಷಯ, ನನ್ನನ್ನು ಸುಮ್ಮನೆ ಎಳೆದುಕೊಂಡು ಬಂದಿದ್ದಾರೆ. ಅವರವರೇ ಬಗೆಹರಿಸಿಕೊಳ್ಳಬಹುದಿತ್ತು. ಸುಮ್ಮನೆ ನನ್ನ ಮರ್ಯಾದೆ ಹಾಳು ಮಾಡಿದರು” ಎಂದು ಅರುಣಾ ಕುಮಾರಿ ಆಕ್ರೋಶ ಹೊರಹಾಕಿದ್ದಾರೆ.