ಅನಂತ್ ನಾಗ್‍ಗೆ ಪದ್ಮಪ್ರಶಸ್ತಿ ನೀಡಿ’ ಅಭಿಯಾನಕ್ಕೆ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಸಾಥ್

0
248

ಭಾರತದ ಅತ್ಯಂತ ಗೌರವವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಸರ್ಕಾರ ‘ಪೀಪಲ್ಸ್ ಪದ್ಮ’ ಹೆಸರಿನಡಿಯಲ್ಲಿ ಕರೆ ನೀಡಿದೆ. ಈ ಸಾಲಿನ ಪದ್ಮ ಪ್ರಶಸ್ತಿಗಾಗಿ ಕರ್ನಾಟಕದಿಂದ ಇಬ್ಬರು ಮಹಾನ್ ಕಲಾವಿದರ ಹೆಸರು ಚರ್ಚೆಯಲ್ಲಿದೆ. ಕಲಾ ಕ್ಷೇತ್ರ ವಿಭಾಗದಲ್ಲಿ ಸಂಗೀತ ನಿರ್ದೇಶಕ, ಸಾಹಿತಿ ನಾದಬ್ರಹ್ಮ ಹಂಸಲೇಖ ಮತ್ತು ಹಿರಿಯ ನಟ ಅನಂತ್ ನಾಗ್ ಅವರ ಹೆಸರು ಸೂಚಿಸುವಂತೆ ಅಭಿಯಾನ ಶುರುವಾಗಿದೆ. ಅನೇಕ ಕನ್ನಡ ಅಭಿಮಾನಿಗಳು ಈ ಇಬ್ಬರು ದಿಗ್ಗಜರ ಹೆಸರನ್ನು ಪದ್ಮಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದ್ದಾರೆ.

ಈ ಅಭಿಯಾನಕ್ಕೆ ಅನೇಕ ಸೆಲೆಬ್ರಿಟಿಗಳು ಸಾಥ್ ನೀಡುತ್ತಿದ್ದಾರೆ. ಇದೀಗ ನಟ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕೂಡ ಕೈ ಜೋಡಿಸಿದ್ದು, ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ರಿಷಬ್ ಮತ್ತು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪದ್ಮಪ್ರಶಸ್ತಿ ಅಭಿಮಾನಕ್ಕೆ ರಿಷಬ್ ಶೆಟ್ಟಿ ಸಾಥ್
ರಿಷಬ್ ಶೆಟ್ಟಿ ಅನಂತ್ ನಾಗ್ ಅವರಿಗೆ ಪದ್ಮಪ್ರಶಸ್ತಿ ಅಭಿಯಾನದ ಪತ್ರ ಶೇರ್ ಮಾಡುವ ಮೂಲಕ “ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣ. ಈ ಮಾಹಿತಿಯನ್ನು ಇಂದಿನಿಂದಲೇ ಹೆಚ್ಚೆಚ್ಚು ಜನರಿಗೆ ತಲುಪಿಸೋಣ” ಎಂದು ಬರೆದುಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ
ನಟ, ನಿರ್ದೇಶಕ ರಿಷಬ್ ಟ್ವೀಟ್ ಅನ್ನು ಶೇರ್ ಮಾಡಿ ರಕ್ಷಿತ್, “ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ” ಎಂದು ಹೇಳಿದ್ದಾರೆ.

ವರ್ಸಟೈಲ್ ನಟ ಅನಂತ್ ನಾಗ್
ಕನ್ನಡ ಚಿತ್ರರಂಗ ಪ್ರತಿಭಾನ್ವಿತ ಕಲಾವಿದ ಅನಂತ ನಾಗ್. ತಮ್ಮ ವಿಶಿಷ್ಟ ಅಭಿನಯ ಹಾಗೂ ವ್ಯಕ್ತಿತ್ವದ ಮೂಲಕ ಜಂಟಲ್‍ಮ್ಯಾನ್ ಎನಿಸಿಕೊಂಡಿರುವ ನಟ. ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಅನಂತ್ ನಾಗ್ ಗೌರವದ ಪ್ರತೀಕ. ಸುಮಾರು ನಾಲ್ಕೂವರೆ ದಶಕದಿಂದ ಭಾರತೀಯ ಸಿನಿಮಾ ಲೋಕದಲ್ಲಿ ತೊಡಗಿಕೊಂಡಿರುವ ಅನಂತ್ ನಾಗ್ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾμÉಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪಿಎಂ ಮೋದಿಯಿಂದ ಆಹ್ವಾನ
ಬೇರು ಮಟ್ಟದಲ್ಲಿ ಅಸಾಧಾರಣ ಕಾರ್ಯ ಮಾಡಿದ ಮತ್ತು ಹೆಚ್ಚು ಪ್ರಚಾರಕ್ಕೆ ಬಾರದ ಜನರನ್ನು ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ನಲ್ಲಿ ಪ್ರಧಾನಮಂತ್ರಿ, “ಭಾರತದಲ್ಲಿ ಹಲವು ಪ್ರತಿಭಾವಂತ ಜನರಿದ್ದಾರೆ, ಅವರು ಬೇರುಮಟ್ಟದಲ್ಲಿ ಅಸಾಧಾರಣ ಕಾರ್ಯ ಮಾಡುತ್ತಿದ್ದಾರೆ. ಹಲವು ಬಾರಿ ನಾವು ಅವರ ಬಗ್ಗೆ ನೋಡುವುದಿಲ್ಲ ಅಥವಾ ಕೇಳುವುದಿಲ್ಲ. ನಿಮಗೆ ಹೆಚ್ಚು ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ತಿಳಿದಿದೆಯೇ? ನೀವು ಅವರನ್ನು #PeoಠಿಟesPಚಿಜmಚಿ ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶನ ಸೆಪ್ಟೆಂಬರ್ 15ರವರೆಗೆ ತೆರೆದಿರುತ್ತದೆ.” ಎಂದು ಆಹ್ವಾನಿಸಿದ್ದಾರೆ.

Previous articleಶಾಸಕ ಭೀಮನಾಯ್ಕ ರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ
Next article‘ನನ್ನ ಜೀವನ ಕೆಟ್ಟರೆ ಯಾರೂ ಬರಲ್ಲ’: ದರ್ಶನ್ ಆರೋಪಕ್ಕೆ ಅರುಣಾ ಕುಮಾರಿ ತಿರುಗೇಟು

LEAVE A REPLY

Please enter your comment!
Please enter your name here