”ಅಪ್ಪ, ನಾನು ಭಾರತದ ಪರ ಆಡ್ಬೇಕು” : ಮಗನ ಮಹಾದಾಸೆಯನ್ನ ಬಿಚ್ಚಿಟ್ಟ ಉಮ್ರಾನ್ ಮಲಿಕ್ ತಂದೆ

0
365

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವಾರು ಕ್ರಿಕೆಟ್ ಪ್ರತಿಭೆಗಳಿಗೆ ದೊಡ್ಡ ವೇದಿಕೆ ಮಾಡಿಕೊಟ್ಟಿದೆ. ಇದು ಕೇವಲ ದೇಶೀಯ ಆಟಗಾರರಿಗೆ ಅಷ್ಟೇ ಅಲ್ಲದೆ ವಿದೇಶಿ ಆಟಗಾರರಿಗೂ ಭವ್ಯ ವೇದಿಕೆಯಾಗಿದೆ. ಮನೋರಂಜನ್ ಕಾ ಬಾಪ್ ಖ್ಯಾತಿ ಐಪಿಎಲ್‌ ಮೂಲಕ ಹಲವಾರು ಆಟಗಾರರು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ , ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಸಿರಾಜ್ ಹೀಗೆ ಕೆಲವು ಆಟಗಾರರು ಐಪಿಎಲ್ ಮೂಲಕ ಗಮನಸೆಳೆದು ಟೀಂ ಇಂಡಿಯಾ ಜರ್ಸಿ ತೊಡುವ ಅವಕಾಶ ಲಭಿಸಿತು. ಇದೇ ರೀತಿಯಲ್ಲಿ ಟೀಂ ಇಂಡಿಯಾ ಸೇರುವ ಕನಸು ಕಾಣುತ್ತಿರುವ ಉದಯೋನ್ಮುಕ ವೇಗಿ ಉಮ್ರಾನ್ ಮಲಿಕ್. ಸನ್‌ರೈಸರ್ಸ್ ಹೈದ್ರಾಬಾದ್ ಪರ ಚೊಚ್ಚಲ ಪಂದ್ಯವನ್ನಾಡಿದ ಬಲಗೈ ವೇಗಿ ಉಮ್ರಾನ್, ತಮ್ಮ ಅತ್ಯಂತ ವೇಗದ ಬೌಲಿಂಗ್ ಮೂಲಕವೇ ಎಲ್ಲರನ್ನೂ ಬೆರಗುಗೊಳಿಸಿದರು.

ಜಮ್ಮು ಕಾಶ್ಮೀರದ ಬೌಲರ್ ಸತತವಾಗಿ 150 kmph ಮಟ್ಟದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ರು. ರಾಷ್ಟ್ರೀಯ ಆಯ್ಕೆಗಾರರ ಗಮನಸೆಳೆದ ಸ್ಪೀಡ್‌ ಸ್ಟಾರ್‌ ಹೌದು ಉಮ್ರಾನ್ ಮಲಿಕ್ ಯಾವಾಗ ಸತತವಾಗಿ 150 kmph ವೇಗದಲ್ಲಿ ಬೌಲಿಂಗ್ ಮಾಡಿದ್ರೋ, ಅದಾಗಲೇ ಆಯ್ಕೆಗಾರರು ಈತನ ಮೇಲೆ ಕಣ್ಣಿಟ್ಟರು, ಆತನನ್ನ ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ಮೊದಲು 2021ರ ಟಿ20 ವಿಶ್ವಕಪ್‌ನಲ್ಲಿ ಮಲಿಕ್ ಭಾರತದ ನೆಟ್ ಬೌಲರ್‌ಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿದ್ದರೆ, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಅವರನ್ನು ಭಾರತ ಎ ತಂಡದಲ್ಲಿ ಸೇರಿಸಲಾಗಿದೆ. ಭಾರತ ತಂಡಕ್ಕೆ ಸೇರಲು ಸುವರ್ಣಾವಕಾಶ ಉಮ್ರಾನ್ ಮಲಿಕ್‌ಗೆ ತನ್ನ ಸಾಮರ್ಥ್ಯ ಸಾಭೀತುಪಡಿಸಲು ಸುವರ್ಣಾವಕಾಶ ಲಭಿಸಿದೆ. ಪ್ರಿಯಾಂಕ್ ಪಾಂಚಾಲ್ ಅವರ ನಾಯಕತ್ವದಲ್ಲಿ, ಭಾರತ ಎ ತಂಡದ ಮೂರು ನಾಲ್ಕು ದಿನಗಳ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಎ ತಂಡದ ಎದುರು ಆಡಲಿದೆ. ಹೀಗಾಗಿ ಈ ಸರಣಿಯಲ್ಲಿ ಉಮ್ರಾನ್ ಮಿಂಚಿದ್ದೇ ಆದಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಒಂದು ಹೆಜ್ಜೆ ಸಮೀಪಿಸಲಿದ್ದಾರೆ. ಉಮ್ರಾನ್ ಬೆಳವಣಿಗೆ ಕಂಡು ಖುಷಿಯಾದ ತಂದೆ ಅಬ್ದುಲ್ ರಶೀದ್ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಉಮ್ರಾನ್ ಮಲಿಕ್ ಬೆಳವಣಿಗೆ ಕಂಡು ಅವರ ತಂದೆ ಅಬ್ದುಲ್ ರಶೀದ್ ಸಂತೋಷ ವ್ಯಕ್ತಪಡಿಸಿದ್ದಾರೆ. ಉಮ್ರಾನ್ ಕಠಿಣ ಪ್ರರಿಶ್ರಮಕ್ಕೆ ಫಲ ದೊರೆಯುವ ಸಂದರ್ಭ ಬಂದಿದೆ. ನಮ್ಮ ಹಾರೈಕೆಗಳು ಯಾವಾಗಲೂ ಅವನೊಂದಿಗೆ ಇರುತ್ತವೆ ಎಂದು ರಶೀದ್ ತಿಳಿಸಿದ್ದಾರೆ. ಇದರ ಜೊತೆಗೆ ಮಾತು ಮುಂದುವರಿಸಿದ ರಶೀದ್, ಉಮ್ರಾನ್ ಯಾವಾಗಲೂ ಭಾರತವನ್ನು ಪ್ರತಿನಿಧಿಸಲು ಮತ್ತು ರಾಷ್ಟ್ರಕ್ಕೆ ಕೀರ್ತಿ ತರಲು ಬಯಸುತ್ತಾರೆ ಎಂದು ತಿಳಿಸಿದರು. ಅಪ್ಪ.. ನಾನು ಭಾರತದ ಪರ ಆಡಬೇಕು! ಉಮ್ರಾನ್ ತಂದೆ ಬಹಿರಂಗಪಡಿಸಿರುವಂತೆ, ಆತ ಯಾವಾಗಲೂ ಹೇಳುವ ವಿಷಯ ” ಪಾಪಾ, ನಾನು ಭಾರತಕ್ಕಾಗಿ ಆಡಲು ಬಯಸುತ್ತೇನೆ” ಎಂಬುದಾಗಿದೆಯಂತೆ. ನಮ್ಮ ಹಾರೈಕೆ ಯಾವಾಗಲೂ ಅವನೊಂದಿಗೆ ಇರುತ್ತವೆ.

ಮುಂದೊಂದು ದಿನ ನಮ್ಮ ಮಗು ಭಾರತಕ್ಕಾಗಿ ಆಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಈಗ ಅವರ ಹೆಸರು ಭಾರತ ‘ಎ’ ತಂಡಕ್ಕೆ ಬಂದಿದ್ದು, ಭವಿಷ್ಯದಲ್ಲಿ ಅವರ ಹೆಸರು ಭಾರತ ತಂಡಕ್ಕೆ ಬಂದು ರಾಷ್ಟ್ರಕ್ಕೆ ಹೆಮ್ಮೆ ತರುತ್ತದೆ ಎಂದು ನಾನು ಭಾವಿಸುತ್ತೇನೆ “ಎಂದು ಉಮ್ರಾನ್ ಮಲಿಕ್ ಅವರ ತಂದೆ ನ್ಯೂಸ್ 18 ಗೆ ತಿಳಿಸಿದ್ದಾರೆ. ಆತ ನನ್ನ ಮಗನಲ್ಲ, ರಾಷ್ಟ್ರದ ಮಗು! “ನಾವು ಎಲ್ಲರಿಗೂ ಹೇಳುತ್ತೇವೆ ‘ಅವನು ನಮ್ಮ ಮಗುವಲ್ಲ, ಅವನು ರಾಷ್ಟ್ರದ ಮಗು. ಅವರು ಚೆನ್ನಾಗಿ ಆಟವಾಡಿ ದೇಶಕ್ಕೆ ಕೀರ್ತಿ ತರಲಿ ಎಂಬುದೇ ಈಗ ನಮ್ಮ ಆಸೆ. ನಾವು ನಿಜವಾಗಿಯೂ ಸಂತೋಷವಾಗಿದ್ದೇವೆ. ಇಡೀ ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತ ಈ ಮಗುವಿನ ಬೆಳವಣಿಗೆಗೆ ಸಂತೋಷವಾಗಿದೆ. ಇಡೀ ದೇಶವೇ ಅವರನ್ನು ಹೊಗಳುತ್ತಿದೆ. ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದರಿಂದ ಇಡೀ ರಾಷ್ಟ್ರದೊಂದಿಗೆ ನಾವು ತುಂಬಾ ಸಂತೋಷಪಟ್ಟಿದ್ದೇವೆ, “ಎಂದು ಅವರು ಹೇಳಿದರು.

ಉಮ್ರಾನ್ ಐಪಿಎಲ್ 2021ರಲ್ಲಿ ಎಸ್‌ಆರ್‌ಎಸ್ ತಂಡದಲ್ಲಿ ಮೊದಲು ಸ್ಥಾನ ಪಡೆದಿರಲಿಲ್ಲ. ಎಡಗೈ ವೇಗಿ ಟಿ. ನಟರಾಜನ್ ಗಾಯಾಳುವಾಗಿ ಹೊರಬಿದ್ದರಿಂದ ಅಲ್ಪಾವಧಿಯಲ್ಲಿ ಬದಲಿಯಾಗಿ ತಂಡಕ್ಕೆ ಸೇರಿಕೊಂಡ್ರು. ಆದ್ರೆ ಕಡಿಮೆ ಸಮಯದಲ್ಲೇ ಈತ ಮನೆ ಮಾತಾದರು. ಹಣ್ಣು ಮಾರಾಟ ಮಾಡಿ ಜೀವನ ನಡೆಸುವ ಉಮ್ರಾನ್ ತಂದೆ ಉಮ್ರಾನ್ ಮಲಿಕ್ ತಂದೆ ಅಬ್ದುಲ್ ರಷೀದ್ ಅವರು ಜಮ್ಮುವಿನ ಗುಜ್ಜರ್ ನಗರ್​ನವರು. ಜಮ್ಮು ನಗರದ ಶಾಹೀದಿ ಚೌಕ್​ನಲ್ಲಿ ಹಣ್ಣು ಮಾರಿ ಜೀವನ ನಡೆಸುತ್ತಾರೆ. ಆದರೆ, ಮಗನ ಕ್ರಿಕೆಟ್ ಆಸೆಗೆ ಯಾವತ್ತೂ ತಣ್ಣೀರೆರಚಿದವರಲ್ಲ. ಅವರ ಆಸೆ ಆಕಾಂಕ್ಷೆಗಳಿಗೆ ನೀರೆರದು ಪೋಷಿಸಿದ್ದಾರೆ. ಉಮ್ರಾನ್ ಮಲಿಕ್​ನಿಗೆ ಕ್ರಿಕೆಟ್ ಹುಚ್ಚು ಎಷ್ಟಿತ್ತೆಂದರೆ ಸರಿಯಾದ ಸಮಯಕ್ಕೆ ಊಟ ಮಾಡುವಷ್ಟು ಪುರುಸೊತ್ತು ಇಲ್ಲದಷ್ಟು ಸದಾ ಕ್ರಿಕೆಟ್​ನಲ್ಲೇ ಮುಳುಗಿಹೋಗುತ್ತಿದ್ದ. ಆತನಿಗೆ ಊಟ ತಿನಿಸುವಷ್ಟರಲ್ಲಿ ನಮಗೆ ಸಾಕಾಗಿ ಹೋಗುತ್ತಿತ್ತು. ಹಾಗು ಹೀಗು ತಿನಿಸಿದ ತಕ್ಷಣ ಆತ ಮತ್ತೆ ಆಡಲು ಓಡಿ ಹೋಗುತ್ತಿದ್ದ ಎಂದು ಅವರ ತಂದೆ ಹಳೆಯ ದಿನಗಳನ್ನ ನೆನಪಿಸಿಕೊಂಡಿದ್ದಾರೆ.

Previous articleದಿಯಾ ಸಿಸ್ಟಮ್ಸ್ ಸ್ಥಾಪಕ ಡಾ.ರವಿಚಂದ್ರನ್ ನಿಧನ
Next articleಮೊದಲ ಸವಾಲು ಎದುರಿಸಲು ಜೈಪುರಕ್ಕೆ ಬಂದಿಳಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್

LEAVE A REPLY

Please enter your comment!
Please enter your name here