10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರರು ಕೂಡ ಅಂಚೆ ಕಛೇರಿಯಲ್ಲಿ ತಮ್ಮ ಖಾತೆ ತೆರಯಬಹುದು..

0
223

ದುಡ್ಡು ಸಂಪಾದನೆ ಮಾಡುವುದು ಎಷ್ಟು ಮುಖ್ಯವೋ, ಅದನ್ನು ಕೂಡಿಡುವುದು ಮತ್ತು ಬೆಳಸುವುದು ಹಾಗು ಕೊನೆಯದಾಗಿ ಅದನ್ನು ಸರಿಯಾದ ಕೆಲಸಕ್ಕೆ ಬಳಸುವುದು ಕೂಡ ಅಷ್ಟೇ ಮುಖ್ಯ. ಇದು ಕೂಡ ಒಂದು ವಿದ್ಯೆ. ದುಡಿದ ಹಣವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಕೆಲಸಕ್ಕೆ ಬಳಸಲು ಆಗದಿದ್ದರೆ, ಆ ದುಡಿಮೆಗೆ, ಸಂಪಾದನೆಗೆ ಯಾವ ಅರ್ಥವೂ ಇರುವುದಿಲ್ಲ. ಹಿಂದೆಲ್ಲ, ಒಂದು ರುಪಾಯಿಗೂ ತುಂಬಾನೆ ಮಹತ್ವವಿತ್ತು. ಒಂದು ರುಪಾಯಿ ಖರ್ಚು ಮಾಡಬೇಕಾದರು ನೂರು ಬಾರಿ ಯೋಚಿಸುತ್ತಿದ್ದರು. ತಿಂಗಳ ಸಂಪಾದನೆಯಲ್ಲಿ ಬರುವ ಅರ್ಧದಷ್ಟು ಹಣವನ್ನು ಮೊದಲು ‘ಉಳಿತಾಯ’ಕ್ಕೆಂದು ಎತ್ತಿಟ್ಟು. ಆನಂತರ ತಮ್ಮ ಖರ್ಚಿಗೆ ಬಳಸಿಕೊಳ್ಳುತ್ತಿದ್ದರು. ಈ ರೀತಿ ಕಷ್ಟಪಟ್ಟು ದುಡಿಯುವ ಹಣವನ್ನು, ಎಲ್ಲೂ ಪೋಲಾಗದಂತೆ ಜಾಗೃತಿವಹಿಸಿ, ಸರಿಯಾದ ಕೆಲಸಕ್ಕೆ ಮಾತ್ರ ಬಳಸುತ್ತಿದ್ದರು. ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸುವುದೇ ಅವರ ದುಡಿಮೆಯ ಮುಖ್ಯ ಧ್ಯೇಯವಾಗಿತ್ತು. ಒಂದು ರೀತಿಯಲ್ಲಿ ಹೇಳುವುದಾರೆ, ‘ಹಂಚಿ ತಿನ್ನುವುದರಲ್ಲೇ ಸುಖ’ ಎಂಬ ಪೋಲಿಸಿ ಅವರದ್ದಾಗಿತ್ತು. ಆದರೆ, ಇಂದಿನ ಪೀಳಿಗೆಯವರು ತಿಂಗಳು ಪೂರ್ತಿ ದುಡಿಯುವುದನ್ನು, ಅದನ್ನು ಒಂದೇ ದಿನದಲ್ಲಿ ಖರ್ಚು ಮಾಡಿ, ಪುನಃ ತಂದೆ ತಾಯಂದಿರ ಹತ್ತಿರವೇ ಕಯ್ಯೊಡುತ್ತಾರೆ. ಇವರದ್ದು, ‘ನನ್ನ ಪಾಲು ನನಗೆ, ನಿನ್ನನ ಪಾಲೂ ನನಗೆ’ ಅನ್ನುವ ಪೋಲಿಸಿ..
ಹಣದ ನಿರ್ವಹಣೆಯಲ್ಲಿ ತಂದೆಗಿರುವ ಚಾತುರ್ಯ ಮಕ್ಕಳಿಗೇಕೆ ಬರಲಿಲ್ಲ. ಏಕೆಂದರೆ ತಂದೆ ಮಕ್ಕಳಿಗೆ ಹಣದ ನಿರ್ವಹಣೆಯ ಕುರಿತಾಗಿ ಏನು ಹೇಳಿಕೊಡಲಿಲ್ಲ. ಮಗ/ಮಗಳು ಓದು ಮುಗಿಸಲಿ, ದುಡಿಮೆ ಆರಂಭಿಸಲಿ, ಆಮೇಲೆ ಅವನಿಗೆ ದುಡಿಮೆಯ ಮಹತ್ವದ ಕುರಿತಾಗಿ ತಿಳಿಸುತ್ತೇನೇ ಅನ್ನುವ ತಂದೆಯರೇ ನಮ್ಮ ದೇಶದಲ್ಲಿ ಹೆಚ್ಚು. ತಂದೆಯAದಿರು ಮಾಡುವ ಈ ತಪ್ಪಿನಿಂದಲೇ ಇಂದು ಅವರ ಮಕ್ಕಳು ದುಡಿಮೆಯ್ನು ತುಂಬಾ ಲೈಟಾಗಿ ತಗೆದುಕೊಳ್ಳುತ್ತಿರುವುದು. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಹಣದ ನಿರ್ವಹಣೆಯ ಕುರಿತಾಗಿ ಉಳಿತಾಯದ ಕುರಿತಾಗಿ ಎಜುಕೇಟ್ ಮಾಡಬೇಕು. ಅವರೇ ಸ್ವತ್ಹ ಹಣವನ್ನು ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಇದೀಗ ಅಂಚೆ ಕಛೇರಿಯಲ್ಲಿ ನೂತನ ಯೋಜನೆಯೊಂದನ್ನು ಜಾರಿಗೆತರಲಾಗಿದೆ. ಅದೇಂನತೀರ? ಇನ್ನುಮುಂದೆ, 10 ವರ್ಷ ಮೇಲ್ಪಟ್ಟ ಅಪ್ರಾಪ್ತ ವಯಸ್ಕರರು ಕೂಡ ಅಂಚೆ ಕಛೇರಿಯಲ್ಲಿ ತಮ್ಮ ಖಾತೆಯನ್ನು ತೆರಯಬಹುದು ಮತ್ತು ತಿಂಗಳ ಆದಾಯ ಯೋಜನೆಯಡಿ ಹಣವನ್ನು ಜಮಾ ಮಾಡಬಹುದು. ಈ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ..
ಅಂಚೆ ಕಛೇರಿಯಲ್ಲಿ ಐದು ವರ್ಷದ ಮಾಸಿಕ ಆದಾಯ ಯೋಜನೆಯಡಿ ಪ್ರತಿ ತಿಂಗಳು ಜಮಾ ಮಾಡುವ ಹಣದ ಮೇಲೆ ವಾರ್ಷಿಕವಾಗಿ 6.6% ಬಡಿದದವನ್ನು ನೀಡಲಾಗುತ್ತದೆ. ಮಾಸಿಕ ಆದಾಯ ಯೋಜನೆಯು, ಒಂದು ಉಳಿತಾಯದ ಯೋಜನೆಯಾಗಿದ್ದು, ಇದರಡಿಯಲ್ಲಿ ನೀವು ಪ್ರತಿ ತಿಂಗಳು ಒಂದು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಬಹುದು ಮತ್ತು ನಿಗದಿತ ಬಡ್ಡಿಯನ್ನುಗಳಿಸಬಹುದು. ದೇಶದ ಯಾವುದೇ ಅಂಚೆ ಕಛೇರಿಯಲ್ಲಿ ತಮ್ಮ ಖಾತೆಯನ್ನು ತೆರೆದು, ಐದು ವರ್ಷದ ಮಾಸಿಕ ಆದಾಯ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಜಮಾ ಮಾಡಬಹುದು. ಮೂರು ಮಯಸ್ಕರರು ಸೇರಿ ಜಂಟಿ ಖಾತೆಯನ್ನು ಸಹ ತೆರೆಯಬಹುದು.

Previous articleಮಾಳಪುರ ಗ್ರಾಮದ ಭೂ ಅಕ್ರಮ ಕಬಳಿಕೆ ಕುರಿತು ನ್ಯಾಯಾಂಗ ತನಿಖೆ ಮಾಡಲು ಒತ್ತಾಯ
Next articleನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗೆ ಅವಕಾಶ ಇದೆ

LEAVE A REPLY

Please enter your comment!
Please enter your name here