ಐಪಿಎಲ್‍ಗೂ ಮುನ್ನವೇ ಶತಕ ಬಾರಿಸಿದ ಮುಂಬೈನ ಕ್ರಿಸ್ ಲಿನ್!

0
245

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‍ಮನ್ ಕ್ರಿಸ್ ಲಿಸ್ ಶತಕ ಬಾರಿಸಿದ್ದಾರೆ. ಆದರೆ ಇದು ಕ್ರಿಕೆಟ್‍ನಲ್ಲಿ ಅಲ್ಲ. ಕೊರೊನಾ ಪರೀಕ್ಷೆಯಲ್ಲಿ. ಅಂದರೆ ಈವರೆಗೆ ಲಿನ್ ಒಟ್ಟಾರೆ 100 ಕೋವಿಡ್-19 ಪರೀಕ್ಷೆಗಳನ್ನು ಪೂರೈಸಿದ್ದಾರೆ.

ಬಲಗೈ ಬ್ಯಾಟ್ಸ್‍ಮನ್ ಆಗಿರುವ ಕ್ರಿಸ್ ಲಿನ್ ಅವರಿಗೀಗ 30ರ ಹರೆಯ. ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಓಡಾಟ ಹೀಗೆ ಒಟ್ಟಾರೆಯಾಗಿ ಲಿನ್ ಈ ವರೆಗೆ 100 ಕೊರೊನಾ ಟೆಸ್ಟ್‍ಗಳನ್ನು ಮಾಡಿಸಿಕೊಂಡಿದ್ದಾರೆ. ಕ್ರಿಕೆಟರ್ ಒಬ್ಬ ಇಷ್ಟು ಸಂಖ್ಯೆಯ ಟೆಸ್ಟ್ ಮಾಡಿಸಿಕೊಂಡಿರುವ ಅಪರೂಪದ ದಾಖಲೆಯಿದು. ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಪರ ಲಿನ್ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಸದ್ಯ ಚೆನ್ನೈಯಲ್ಲಿ ಲಿನ್ ಬಯೋ ಬಬಲ್ ಒಳಗಿದ್ದಾರೆ. ಐಪಿಎಲ್ ಸಲುವಾಗಿಯೂ ಲಿನ್ ಈಗಾಗಲೇ ಕೊರೊನಾ ಟೆಸ್ಟ್‍ಗಳನ್ನು ಮಾಡಿಸಿಕೊಂಡಿದ್ದಾರೆ. ಕೊರೊನಾ ಆರಂಭ ಆದಾಗಿನಿಂದ ಹಿಡಿದು ಈವರೆಗೆ ಕ್ರಿಸ್ ಮಾಡಿಸಿಕೊಂಡಿರುವ ಕೊರೊನಾ ಟೆಸ್ಟ್‍ಗಳ ಲೆಕ್ಕ 100 ಆಗಿದೆ. 4 ಏಕದಿನ ಪಂದ್ಯಗಳಲ್ಲಿ 75 ರನ್, 18 ಟಿ20ಐ ಪಂದ್ಯಗಳಲ್ಲಿ 291 ರನ್, 41 ಐಪಿಎಲ್ ಪಂದ್ಯಗಳಲ್ಲಿ 1280 ರನ್ ದಾಖಲೆ ಲಿನ್ ಹೊಂದಿದ್ದಾರೆ.

Previous articleಐಪಿಎಲ್ 2021: ಈ ಬಾರಿಯ ಐಪಿಎಲ್‍ನಲ್ಲಿ ಚೆನ್ನೈ ಸ್ಥಾನವನ್ನು ಊಹಿಸಿದ ಗೌತಮ್ ಗಂಭೀರ್
Next articleಪಾಲಿಕೆ ಚುನಾವಣೆ: ಏ.8ರಿಂದ ನಾಮಪತ್ರ ಸಲ್ಲಿಕೆ: ಡಿಸಿ

LEAVE A REPLY

Please enter your comment!
Please enter your name here