18 ವರ್ಷದ ನಂತರ ಕನ್ನಡ ಸಿನಿಮಾದಲ್ಲಿ ತೇಜ್

0
221

ಏಪ್ರಿಲ್ 16ರಂದು ತೆರೆಗೆ ಬರಲಿರುವ ರಿವೈಂಡ್ ಒಂದು ಫ್ಯಾಮಿಲಿ ಮನರಂಜನಾ ಸಿನಿಮಾ. ಈ ಚಿತ್ರದ ತಮಿಳು, ಮಲಯಾಳಂ ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್

‘ಮಿಸೆ ಚಿಗುರಿದಾಗ’ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ವಿನೋದ್ ತೇಜ್ ಇದೀಗ 18 ವರ್ಷಗಳ ಗ್ಯಾಪ್ ನಂತರ ಸ್ಯಾಂಡಲ್‍ವುಡ್‍ಗೆ ಗ್ರ್ಯಾಂಡ್ ಆಗಿ ಏಂಟ್ರಿ ಕೊಡುತ್ತಿದ್ದಾರೆ. ಅಲ್ಲದೆ ತೇಜ್ ಈಗ ನಾಯಕನಾಗಿ ಅಷ್ಟೇ ಅಲ್ಲ, ಬದಲಾಗಿ ನಿರ್ದೇಶಕನಾಗಿಯೂ ಹೊಣೆ ಹೊತ್ತಿದ್ದಾರೆ. ನಟಿ ಮೇಘನಾ ರಾಜ್ ತಾಯಿ ಪ್ರಮಿಳಾ ಜೊμÁಯ ಅವರ ಸಹೋದರನ ಮಗನಾಗಿರು ತೇಜ್ ನಾಯಕತ್ವದಲ್ಲಿ ತಯಾರಾಗಿದ್ದೆ ‘ರಿವೈಂಡ್’ ಸಿನಿಮಾ. ಈ ಚಿತ್ರ ಇದೇ ಏಪ್ರಿಲ್ 16ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕೊರೋನಾ ಕಾರಣದಿಂದ ಥಿಯೇಟರ್‍ನಲ್ಲಿ 50% ರಷ್ಟು ಜನರಿಗೆ ಮಾತ್ರ ಅವಕಾಶವಿದ್ದರೂ, ತೇಜ್ ಚಿತ್ರವನ್ನು ಸಂತೋಷದಿಂದಲೇ ರಿಲೀಸ್ ಮಾಡುತ್ತಿದ್ದಾರೆ. ಈ ಸಂತೋಷಕ್ಕೆ ಕಾರಣ ಅವರಿಗೆ ಸಿನಿಮಾ ಮೇಲೆ ಇರುವ ನಂಬಿಕೆ. ’20 – 30 ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡಿದಾಗ ಒಂದು ಅಥವಾ ಎರಡು ವಾರದಲ್ಲಿ ಈ ಹಣವನ್ನು ವಾಪಸ್ ತೆಗೆಯಬೇಕಾಗುತ್ತದೆ. ಆಗ 100% ಬೇಕು. ನಮ್ಮದು 3 – 4 ಕೋಟಿ ಸಿನಿಮಾ. ನಮಗೆ 50% ಸಾಕು. ಸಿನಿಮಾ ಮೇಲೆ ನಂಬಿಕೆ ಇದೆ, ಗೆಲ್ಲುವ ವಿಶ್ವಾಸವಿದೆ. ಹಾಗಾಗಿ ನಾವು ಖುಷಿ ಖುಷಿಯಾಗಿಯೇ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಈ ಮೊದಲು ನಮ್ಮ ಜೊತೆ 100% ಇದ್ದಾಗ ಆರು ಸಿನಿಮಾಗಳು ರಿಲೀಸ್‍ಗೆ ಸಿದ್ದವಿದ್ದವು, ಈಗ ಎರಡು ಮಾತ್ರ ಇವೆ. ಆ ದೃಷ್ಟಿಯಿಂದಲೂ ನಮ್ಮ ಚಿತ್ರಕ್ಕೆ ಸರ್ಕಾರದ ಈ 50% ಯೋಜನೆ ಒಳ್ಳೆಯದನ್ನೇ ಮಾಡಿದೆ. ಈ ಕಷ್ಟ ಇನ್ನೂ ಎರಡು ವರ್ಷ ಇದ್ದೆ ಇರುತ್ತದೆ ಹಾಗಾಗಿ ನಾವೀಗ ಮುಂದೆ ಹೋಗದೆ ದೈರ್ಯವಾಗಿ 16ಕ್ಕೆ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎನ್ನುವರು ತೇಜ್.

ರಿವೈಂಡ್ ಸಿನಿಮಾ ಕನ್ನಡದಲ್ಲಿ ಮಾತ್ರ ಸಿದ್ದವಾಗಿಲ್ಲ. ಈಗಾಗಲೇ ತಮಿಳು, ಮಲಯಾಳಂ ಮತ್ತು ಹಿಂದಿಗೆ ಸಿನಿಮಾದ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿವೆ. ‘ನಾನು 18 ವರ್ಷದ ಗ್ಯಾಪ್‍ನಲ್ಲಿ ತಮಿಳು ಭಾಷೆಯ ನಾಲ್ಕು ಸಿನಿಮಾದಲ್ಲಿ ನಟಿಸಿದ್ದೇನೆ. ಹಾಗಾಗಿ ರಿವೈಂಡ್ ಅಲ್ಲಿ ಬಿಜಿನೆಸ್ ಆಗಿದೆ. ಜೊತೆಗೆ ನನ್ನ ಎಲ್ಲಾ ತಮಿಳು ಸಿನಿಮಾಗಳು ಮಲಯಾಳಂನಲ್ಲಿ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದವು ಅಲ್ಲದೆ, ರಿವೈಂಡ್ ಚಿತ್ರದ ಕಂಟೆಂಟ್ ಮತ್ತು ನನ್ನ ಲುಕ್ ಮೇಲೆ ನಂಬಿಕೆ ಇಟ್ಟು ಚಿತ್ರವನ್ನು ಮಲಯಾಳಂನ ದೊಡ್ಡ ವಿತರಕರೊಬ್ಬರು ತೆಗೆದುಕೊಂಡಿದ್ದಾರೆ. ಇನ್ನು ಹಿಂದಿಯಲ್ಲಿ ನಾವು ಥಿಯೇಟರ್‍ನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿಲ್ಲ. ಬದಲಿಗೆ ಸೆಟ್‍ಲೈಟ್, ಮತ್ತು ಟಿವಿ ರೈಟ್ಸ್ ಮಾರಾಟ ಮಾಡಲಾಗಿದೆ. ನಾವು ಈ ಚಿತ್ರವನ್ನು ತೆಲುಗು ಭಾಷೆಯಲ್ಲಿ ಬಿಡುತ್ತಿಲ್ಲ. ಕಾರಣ ಸಾಕಷ್ಟು ತಯಾರಿ ಬೇಕಾಗುತ್ತದೆ. ಅಲ್ಲಿ ಹೋಗಿ ಗೆಲ್ಲಬೇಕು ಅಲ್ಲವೆ! ಹಾಗಾಗಿ ನನ್ನ ಮುಂದಿನ ಸಿನಿಮಾ ‘ರಾಮಾಚಾರಿ 2.0’ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿಯೇ ಶೂಟ್ ಮಾಡಲಾಗುತ್ತಿದೆ’ ಎಂದು ಸಿನಿಮಾ ಬಿಜಿನೆಸ್ ಬಗ್ಗೆ ಮಾತನಾಡುವರು ತೇಜ್.

ಇನ್ನು 18 ವರ್ಷ ಕನ್ನಡ ಸಿನಿಮಾ ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವ ತೇಜ್ “ಮಿಸೆ ಚಿಗುರಿದಾಗ’ ಸಿನಿಮಾ ಆದಮೇಲೆ ತುಂಬಾ ಆಫರ್‍ಗಳು ಬಂದವು. ಆಗ ಚಿತ್ರರಂದಲ್ಲಿ ಲಾಂಗು ಮಚ್ಚುಗಳ ದರ್ಬಾರ್ ಹೆಚ್ಚಾಗಿತ್ತು. ಅಂತ ಸಿನಿಮಾ ನನಗೆ ಬೇಡ ಎನಿಸಿತು. ಜೊತೆಗೆ ನಮ್ಮದು ಮದ್ಯಮ ವರ್ಗದ ಕುಟುಂಬ. ತಾಯಿ ಮೊದಲು ವಿದ್ಯಾಭ್ಯಾಸ ಮಾಡು ಎಂದರು. ಹಾಗಾಗಿ ಇಂಜನಿಯರಿಂಗ್ ಮಾಡಿದೆ. ನಂತರ ಇನ್ನೇನು ಸಿನಿಮಾ ಮಾಡಬೇಕು ಎನ್ನುತ್ತಿರುವಾಗ ಮುಂಗಾರು ಮಳೆ ಸಿನಿಮಾ ಬಂತು ಅದಾದಮೇಲೆ ತುಂಬಾ ಜನರು ಹೀರೋಗಳಾಗಿ ಬರತೊಡಗಿದರು ಈ ಪ್ರವಾಹದಲ್ಲಿ ನಾನು ಕಳೆದು ಹೊಗಬಾರದು ಎಂದು ಕನ್ನಡ ಸಿನಿಮಾ ಮಾಡಲಿಲ್ಲ. ಇದೇ ಸಂದರ್ಭದಲ್ಲಿ ತಮಿಳಿನ ಸಿನಿಮಾಕ್ಕೆ ಆಫರ್ ಬಂತು. ಅಲ್ಲಿಗೆ ಹೋಗಿ ನಾಲ್ಕು ಸಿನಿಮಾ ಮಾಡಿದೆ. ಈಗ ಕನ್ನಡ ಚಿತ್ರರಂಗ ಹೊಸತನಕ್ಕೆ ತೆರೆದುಕೊಂಡಿದೆ. ಈಗ ನಾನು ಕನ್ನಡದಲ್ಲಿ ಸಿನಿಮಾ ಮಾಡಬಹುದು ಎಂದು ನಿರ್ದಾರ ಮಾಡಿ ರಿವೈಂಡ್ ಮಾಡಿದೆ’ ಎನ್ನುವರು.

ಸಿನಿಮಾ ಬಗ್ಗೆ ಹೇಳುವ ತೇಜ್ ‘ರಿವೈಂಡ್ ಒಂದು ಫ್ಯಾಮಿಲಿ ಮನರಂಜನಾ ಸಿನಿಮಾ. ಇದು ಇನ್ನೊಂದು ದೃಶ್ಯಂ ಎನ್ನಬಹುದಾದಂತ ಕಥೆ ಒಳಗೊಂಡಿದೆ. ಇದರಲ್ಲಿ ನಾನು ಕ್ರೈಮ್ ವರದಿಗಾರನಾಗಿ ಅಭಿನಯಿಸಿದ್ದು, ಕಷ್ಟದಲ್ಲಿರುವ ತನ್ನ ಫ್ಯಾಮಿಲಿಯನ್ನು ಹೇಗೆ ಕಾಪಾಡುತ್ತಾನೆ ಎಂಬುದು ಸಿನಿಮಾದ ಹೈಲೈಟ್’ ಎನ್ನುವರು. ಅಂದಂಗೆ ಈ ಸಿನಿಮಾದಲ್ಲಿ ತೇಜ್‍ಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ ಚಂದನ ರಾಘವೇಂದ್ರ. ಇವರು ಈ ಚಿತ್ರದ ನಾಯಕಿ ಅಷ್ಟೇ ಅಲ್ಲ, ತೇಜ್‍ಗೆ ಎಲ್ಲಾ ವಿಭಾಗದಲ್ಲೂ ಸಾಥ್ ನೀಡಿದ್ದಾರೆ. ರಿವೈಂಡ್‍ನಲ್ಲಿ ಹೊಸ ಪ್ರತಿಭೆಗಳಿದ್ದು, ಜೊತೆಗೆ ಸುಂದರ್ ರಾಜ್, ಧರ್ಮ, ಸಂದೀಪ್ ಮಲಾನಿ, ಆನಂದ್ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಆನಂದ್, ವಿಕ್ರಮ್ ಸಂಗೀತ, ವಿನೋದ ಸಂಕಲನವಿದೆ.

Previous articleಕಲರ್‌ಫುಲ್ ಸೆಟ್‌ನಲ್ಲಿ ಹಾಡಿ ಕುಣಿದ ‘ತೋತಾಪುರಿ’ ತಂಡ
Next articleಐಪಿಎಲ್ 2021: ಈ ಬಾರಿಯ ಐಪಿಎಲ್‍ನಲ್ಲಿ ಚೆನ್ನೈ ಸ್ಥಾನವನ್ನು ಊಹಿಸಿದ ಗೌತಮ್ ಗಂಭೀರ್

LEAVE A REPLY

Please enter your comment!
Please enter your name here