ಚಿತ್ರೋದ್ಯಮದ ಸಂಕಷ್ಟಕ್ಕೆ ನೆರವಾದ ನಿರ್ಮಾಪಕ ರಮೇಶ್ ರೆಡ್ಡಿ

0
253

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಮೇಶ್ ರೆಡ್ಡಿ ಅವರು ಕೊರೋನಾ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ನೆರವಿಗೆ ನಿಲ್ಲುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಸ್ಯಾಂಡಲ್‍ವುಡ್ ನಲ್ಲಿ ಕೆಲಸ ಮಾಡುವ ಸಾಹಸ ಕಲಾವಿದರು, ಬರಹಗಾರರು, ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡುವವರು, ಆರ್.ಪಿ.ಗಳು ಸೇರಿದಂತೆ ಬಹುತೇಕ ವಿಭಾಗಗಳ 800ಕ್ಕೂ ಹೆಚ್ಚು ಜನರಿಗೆ ಆಹಾರದ ಕಿಟ್‍ಗಳನ್ನು ವಿತರಿಸಿದ್ದಾರೆ. ಶ್ರೀಮತಿ ಸುಧಾಮೂರ್ತಿ ಅವರ ಇನ್ಫೋಸಿಸ್ ಪ್ರತಿμÁ್ಠನದ ಮೂಲಕವೂ ನಿರ್ಮಾಪಕ ರಮೇಶ್ ರೆಡ್ಡಿ ಅವರು ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಫುಡ್ ಕಿಟ್ ಗಳನ್ನು ಹಂಚುವ ಮೂಲಕ ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ಈ ಹಿಂದೆ ಕೆ.ಮಂಜು ಪುತ್ರ ಶ್ರೇಯಸ್ ಜೊತೆ ‘ಪಡ್ಡೆಹುಲಿ’ ಚಿತ್ರ ನಿರ್ಮಾಣ ಮಾಡಿದ್ದ ರಮೇಶ್ ರೆಡ್ಡಿ ಅವರು ಈಗ ಎರಡು ಬಿಗ್ ಬಜೆಟ್ ಪ್ರಾಜೆಕ್ಟ್‍ಗಳನ್ನು ತೆರೆಗೆ ತರಲು ಅಣಿಯಾಗಿದ್ದಾರೆ. ಅವರದೇ ಬ್ಯಾನರ್ ಸೂರಜ್ ಫಿಲಂಸ್ ನಿರ್ಮಾಣದ ಬಹುನಿರೀಕ್ಷಿತ ಚಿತ್ರಗಳಾದ ರಮೇಶ್ ಅರವಿಂದ್ ಅಭಿನಯ, ನಿರ್ದೇಶನದ ‘100’ ಹಾಗೂ ಯೋಗರಾಜ ಭಟ್ ನಿರ್ದೇಶನದ ಗಣೇಶ್, ದಿಗಂತ್ ಅಭಿನಯದ ‘ಗಾಳಿಪಟ 2’ ಸಿನಿಮಾಗಳು ಇದೇ ವರ್ಷ ತೆರೆ ಕಾಣಲಿವೆ.

Previous articleಪ್ರಜ್ವಲ್ ಹುಟ್ಟುಹಬ್ಬದಂದು ರಿಲೀಸ್ ಆಗಿದೆ ವೀರಂ ಟೀಸರ್
Next articleಸಿಎಂ ಯಾರೂ ಎಂಬ ಪ್ರಶ್ನೇ ಅಪ್ರಸ್ತುತ: ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ

LEAVE A REPLY

Please enter your comment!
Please enter your name here