‘ಡಾಟರ್ ಆಫ್ ಪಾರ್ವತಮ್ಮ’ ಖ್ಯಾತಿಯ ಶಶಿಧರ್ ಅವರ ನಿರ್ಮಾಣ ಹಾಗೂ ಖದರ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ‘ವೀರಂ’. ನಟ ಪ್ರಜ್ವಲ್ ದೇವರಾಜ್ ಹಿಂದೆಂದೂ ಕಾಣಿಸದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೊನ್ನೆಯಷ್ಟೇ ಆನಂದ್ ಆಡಿಯೋ ಮೂಲಕ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್‍ಗೆ ಸಾಮಾಜಿಕ ಜಾಳತಾನದಲ್ಲಿ ಒಳ್ಳೆ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಇದೇ ಮೊದಲಬಾರಿಗೆ ಪ್ರಜ್ವಲ್ ದೇವರಾಜ್‍ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಖದರ್ ಕುಮಾರ್ ಅವರು ಹೊಸದೊಂದು ಕಂಟೆಂಟನ್ನು ಹೇಳಹೊರಟಿದ್ದು, ಗೂಗ್ಲಿ, ಶಿವಲಿಂಗ, ಶ್ರಾವಣಿ ಸುಬ್ರಹ್ಮಣ್ಯ ಮುಂತಾದ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಖದರ್ ಕುಮಾರ್ ಈ ಚಿತ್ರದ ಮೂಲಕ ಮೊದಲಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಇದೊಂದು ಮಾಸ್ ಎಂಟರ್‍ಟೈಮೆಂಟ್ ಕಥಾಹಂದರ ಹೊಂದಿರುವ ಚಿತ್ರ. ಒಂದು ಮಾಸ್ ಕಥೆಯನ್ನು ಎಮೋಷನಲ್ ಆಗಿಯೂ ಜನರಿಗೆ ತೋರಿಸಬಹುದು ಎಂದು ಈ ಚಿತ್ರದ ಮೂಲಕ ತೋರಿಸುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಶಶಿಧರ್. ವಿಶೇಷವಾಗಿ ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷವಾದ ಪಾತ್ರವೊಂದಕ್ಕ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಡಾಟರ್ ಆಫ್ ಪಾರ್ವತಮ್ಮ ಎಂಬ ಚಿತ್ರವನ್ನು ನಿರ್ಮಿಸಿದ್ದ ಶಶಿಧರ್ ಅವರು ಶಶಿಧರ್ ಸ್ಟುಡಿಯೋಸ್ ಪೆÇ್ರಡಕ್ಷನ್ ಮೂಲಕ ಶುಗರ್ ಲೆಸ್ ಹಾಗೂ ವೀರಂ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.