ತುಪ್ಪ ಬೇಕಾ ತುಪ್ಪ ಎಂಬ ಐಟಂ ಸಾಂಗ್ ನಿಂದ ಜನಪ್ರಿಯವಾದ ನಟಿ ರಾಗಿಣಿ ದ್ವಿವೇದಿ ಮೊಟ್ಟ ಮೊದಲ ಬಾರಿಗೆ ಆಲ್ಬಂ ಸಾಂಗ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡಿನ ಮೊದಲ ಲುಕ್ ರಾಗಿಣಿ ಶೇರ್ ಮಾಡಿದ್ದಾರೆ. ರಾಗಿಣಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ನನ್ನ ಮೊದಲ ಆಲ್ಬಂ ಸಾಂಗ್, ಗ್ಲಾಮರಸ್ ಆಗಿದೆ, ಪ್ರೇಕ್ಷಕರಿಗೆ ಎನರ್ಜಿ ಬೂಸ್ಟರ್ ಆಗಲಿದೆ ಎಂದು ರಾಗಿಣಿ ತಿಳಿಸಿದ್ದಾರೆ.
ಸ್ಪೆಷಲ್ ಸಾಂಗ್ಸ್‍ನ ಕ್ವೀನ್ ನಾನು, ಸಿನಿಮಾಗಳ ಹಾಡಿನ ಜೊತೆಗೆ ಆಲ್ಬಂ ಸಾಂಗ್‍ನಲ್ಲಿ ಸ್ವತಂತ್ರ್ಯವಾಗಿ ಕಾಣಿಸಿಕೊಂಡಿದ್ದೇನೆ, ಸೌತ್ ಇಂಡಿಯಾದಲ್ಲಿ ಇದೊಂದು ಟ್ರೆಂಡ್ ಸೃಷ್ಟಿಸಲಿದೆ, ಅನೇಕ ದಿನಗಳ ನಂತಕ ನಾನು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು ಕಾತುರದಿಂದ ಕಾಯುತ್ತಿದ್ದೇನೆ ಎಂದು ರಾಗಿಣಿ ತಿಳಿಸಿದ್ದಾರೆ. ಭಜರಂಗಿ ಖ್ಯಾತಿಯ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ, ನಾಲ್ಕು ವಿವಿಧ ಲುಕ್ ನಲ್ಲಿ ರಾಗಿಣಿ ಕಾಣಿಸಿಕೊಳ್ಳಲಿದ್ದು, ರುದ್ರಾಕ್ಷ್ ದ್ವಿವೇದಿ ವಸ್ತ್ರವಿನ್ಯಾಸ ಮಾಡಿದ್ದಾರೆ.
ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ಚೈತ್ರಾ ಹಿನ್ನೆಲೆ ಗಾಯನವಿದೆ. ಪ್ರೀತಮ್ ಛಾಯಾಗ್ರಹಣವಿದೆ. ಮ್ಯೂಸಿಕ್ ಆಲ್ಬಮ್ ಅದ್ಫುತ ಅಂಶಗಳನ್ನು ಪ್ರಯೋಗಿಸಲು ಅನುವು ಮಾಡಿಕೊಡುತ್ತದೆ ಎಂದು ನಾನು ಅರಿತುಕೊಂಡೆ, ಆದರೆ ಸಿನಿಮಾಗಳಲ್ಲಿ ನಿಬರ್ಂಧವಿರುವ ಕಾರಣ ಇದನ್ನು ಪ್ರಯೋಗಿಸಲು ಸಾಧ್ಯವಿಲ್ಲ ಎಂದು ರಾಗಿಣಿ ಹೇಳುತ್ತಾರೆ. ಕನ್ನಡ ಆಲ್ಬಂ ಸಾಂಗ್ ಅನ್ನು ಟಿ.ಆರ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದು, ಕ್ರಿಸ್ಟಲ್ ಮ್ಯೂಸಿಕ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗುತ್ತದೆ, ನಂತರ ಅದನ್ನು ವಿವಿಧ ಭಾμÉಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಸದ್ಯ ರಾಗಿಣಿ ಕರ್ವ 3 ಮತ್ತು ಜಾನಿ ವಾಕರ್ ಸಿನಿಮಾ ಶೂಟಿಂಗ್ ಆರಂಭಕ್ಕೆ ಕಾಯುತ್ತಿದ್ದಾರೆ. ಇನ್ನು ಎರಡು ಪ್ರಾಜೆಕ್ಟ್ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ.