ಭಾರತ ಹಾಗೂ ಶ್ರಿಲಂಕಾ ತಂಡಗಳ ಸರಣಿ ಆರಂಭಕ್ಕೂ ಮುನ್ನವೇ ಸರಣಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಲಂಕಾ ಪ್ರವಾಸಕ್ಕೆ ತೆರಳಿದರುವ ಭಾರತೀಯ ತಂಡ ದ್ವಿತೀಯ ದರ್ಜೆಯ ತಂಡ ಎಂದಿದ್ದು ಇದು ಶ್ರಿಲಂಕಾ ತಂಡಕ್ಕೆ ಮಾಡುತ್ತಿರುವ ಅವಮಾನ ಎಂಬ ಮಾತನ್ನು ಆಡಿದ್ದರು. ಈ ಮಾತಿಗೆ ಭಾರತದ ಮಾಜಿ ಕ್ರಿಕೆಟಿಗ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಿರುಗೇಟು ನೀಡಿದ್ದಾರೆ. ಆಕಾಶ್ ಚೋಪ್ರ ಅರ್ಜುನ್ ರಣತುಂಗಾ ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನೀಡಿದ ಹೇಳಿಕೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. “ಭಾರತೀಯ ಕ್ರಿಕೆಟ್ ತಮಡದ ಮುಖ್ಯ ತಂಡ ಅಲ್ಲ ಎಂಬ ಹೇಳಿಕೆ ನಿಜಕ್ಕೂ ಒಪ್ಪುವಂತದ್ದು. ಬೂಮ್ರಾ, ಶಮಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಅವರಂತಾ ಆಟಗಾರರು ಈ ಪ್ರವಾಸದಲ್ಲಿ ಇಲ್ಲ. ಆದರೆ ಈ ತಂಡ ನಿಜಕ್ಕೂ ಬಿ ಗ್ರೇಡ್ ತಂಡದ ರೀತಿಯಲ್ಲಿದೆಯಾ?” ಎಂದು ಆಕಾಶ್ ಚೋಪ್ರ ಪ್ರಶ್ನಿಸಿದ್ದಾರೆ.
“ಇದು ಭಾರತದ ಪ್ರಥಮ ತಂಡವಲ್ಲ. ಆದರೆ ಭಾರತದ ಈ ತಂಡದಲ್ಲಿ ಸಂಭಾವ್ಯ ಆಡುವ ಬಳಗ 471 ಏಕದಿನ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದೆ. ಶ್ರೀಲಂಕಾ ಕ್ರಿಕೆಟ್ ತಂಡ ಈ ಪ್ರವಾಸಕ್ಕೆ ತಂಡವನ್ನು ಆಯ್ಕೆ ಮಾಡಿಕೊಂಡಾಗ ಅವರ ತಂಡದಲ್ಲಿ ಎಷ್ಟು ಪಂದ್ಯಗಳನ್ನು ಆಡುದ ಅನುಭವವಿದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ. ಅವರ ತಂಡದೊAದಿಗೆ ಹೋಲಿಕೆ ಮಾಡಲು ಆರಂಭಿಸಿದಾಗ ನಿಜಕ್ಕೂ ಸರಣಿ ಸಾಕಷ್ಟು ಸಾಕಷ್ಟು ಉತ್ಸುಕತೆಯನ್ನು ಸೃಷ್ಟಿಸುತ್ತದೆ” ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಶ್ರೀಲಂಕಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್‌ನಲ್ಲಿ ಆಡಲು ಕ್ವಾಲಿಫೈಯರ್ ಪಂದ್ಯದಲ್ಲಿ ಆಡಬೇಕಿದೆ. ಆದರೆ ಕ್ರಿಕೆಟ್‌ಗೆ ಹೊಸತಾಗಿರುವ ಅಪ್ಘಾನಿಸ್ತಾನ ತಂಡ ಅರ್ಹತಾ ಸುತ್ತಿನಲ್ಲಿ ಆಡಬೇಕಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
ಇದಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಅರ್ಜುನ್ ರಣತುಂಗಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿತ್ತು. “ಭಾರತದ ತಂಡದ 20 ಆಟಗಾರರಲ್ಲಿ 14 ಮಂದಿ ಆಟಗಾರರು ಭಾರತದ ಪರವಾಗಿ ಎಲ್ಲಾ ಮಾದರಿಗಳಲ್ಲಿ ಅಥವಾ ಕೆಲ ಮಾದರಿಗಳಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಭಾರತ ದ್ವಿತೀಯ ದರ್ಜೆಯ ತಂಡವಲ್ಲ” ಎಂದಿತ್ತು ಶ್ರಿಲಂಕಾ ಕ್ರಿಕೆಟ್ ಮಂಡಳಿ.