ಟೋಕಿಯೋ ಒಲಿಂಪಿಕ್ಸ್: ಭಾರತದ ಮೊದಲ ಬ್ಯಾಚ್ ಜುಲೈ 17ಕ್ಕೆ ಪ್ರಯಾಣ ಸಾಧ್ಯತೆ

0
254

ನವದೆಹಲಿ, ಜುಲೈ 4: ಒಲಿಂಪಿಕ್ಸ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಭಾರತದ ಕ್ರೀಡಾಪಟುಗಳು ಈ ಅತ್ಯುನ್ನತ ಕ್ರೀಡಾಕೂಟದಲ್ಲಿ ಪಾಳ್ಗೊಳ್ಳಲು ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಟೋಕಿಯೋದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ ಕ್ರೀಡಾಪಟುಗಳ ಮೊದಲ ತಂಡ ಜುಲೇ 17ರಂದು ಜಪಾನ್‌ಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಇದಕ್ಕೆ ಪೂರಕವಾದ ಸಿದ್ಧತೆಗಳನ್ನು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ನಡೆಸುತ್ತಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನರೀಂದರ್ ಭಾತ್ರಾ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಈಗಿನ ಯೋಜನೆಯಂತೆ ನಮ್ಮ ಮೊದಲ ಬ್ಯಾಚ್‌ನ ಕ್ರೀಡಾಪಟುಗಳ ತಂಡವನ್ನು ಜುಲೈ 17ರಂದು ಕಳುಹಿಸಲಾಗುತ್ತದೆ. ಆದರೆ ಕ್ವಾರಂಟೈನ್ ಹಾಗೂ ತರಬೇತಿಯ ಕಾರಣಗಳಿಂದಾಗಿ ಒಂದೆರಡು ದಿನ ಮುನ್ನ ಕಳುಹಿಸಲು ಪ್ರಯತ್ನಗಳನ್ನು ಕೂಡ ನಡೆಸುತ್ತಿದ್ದೇವೆ. ಈ ವಿಚಾರಗಳ ಕುರಿತಾಗಿ ಟೋಕಿಯೋದಲ್ಲಿ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ” ಎಂದು ಭಾತ್ರಾ ಹೇಳಿದ್ದಾರೆ.

“ಸರ್ಕಾರ ನಮಗೆ ಎಲ್ಲಾ ರೀತಿಯಿಂದಲೂ ಬೆಂಬಲವನ್ನು ನೀಡುತ್ತಿದೆ. ಎಲ್ಲಾ ವಿಚಾರಗಳ ಕುರಿತಾಗಿರುವ ಗೊಂದಲಗಳ ಬಗ್ಗೆ ಶೀಘ್ರದಲ್ಲಿಯೇ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿ ನಾವಿದ್ದೇವೆ” ಎಂದು ಭಾತ್ರಾ ಹೇಳಿದ್ದಾರೆ. ಇನ್ನು ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಒಟ್ಟು ಕ್ರೀಡಾಪಟುಗಳ ಸಂಖ್ಯೆಯ ಕುರಿತಾಗಿ ಕೇಳಿದಾಗ ಅವರು “ಕೆಲ ಹೆಸರುಗಳು ಇನ್ನಷ್ಟೇ ನಮಗೆ ಬರಬೇಕಾಗಿದೆ. ಅದಕ್ಕಾಗಿ ನಾವು ಕಾಯುತ್ತಿದ್ದೇವೆ. ಅವುಗಳ ಬಗ್ಗೆ ಶೀಘ್ರವಾಗಿ ನಾವು ಸಾರ್ಬಜನಿಕವಾಗಿ ಮಾಹಿತಿಯನ್ನು ನೀಡುತ್ತೇವೆ” ಎಂದಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಕಳೆದ ವರ್ಷ ಈ ಕ್ರೀಡಾಕೂಟ ನಡೆಯಬೇಕಾಗಿತ್ತು. ಆದರೆ ಕೊರೊನಾವೈರಸ್‌ನ ಕಾರಣದಿಂದಾಗಿ ಈ ವರ್ಷಕ್ಕೆ ಮುಂದೂಡಲಾಗಿದೆ. ಜುಲೈ 23ರಿಂದ ಆರಂಭವಾಗುವ ಈ ಕ್ರೀಡಾಕೂಟ ಆಗಸ್ಟ್ 8ರವರೆಗೆ ನಡೆಯಲಿದೆ.

Previous articleಐಪಿಎಲ್: ಮುಂದಿನ ಆವೃತ್ತಿಗೆ 2 ಹೊಸ ತಂಡಗಳು, ನೀಲ ನಕಾಶೆಯ ಸಂಪೂರ್ಣ ಮಾಹಿತಿ
Next articleದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು

LEAVE A REPLY

Please enter your comment!
Please enter your name here