ಹಸಿವಿಗೆ ಔಷಧಿಯಿಲ್ಲ, ವೈರಸ್‍ಗೆ ವ್ಯಾಕ್ಸಿನ್ ಇದೆ ಎಂದ ಸಲಗ ತಂಡ

0
287

ಸರ್ಕಾರದ ಹೊಸ ಕೊರೋನಾ ಮಾರ್ಗಸೂಚಿಯಿಂದ ಸ್ಯಾಂಡಲ್‍ವುಡ್‍ನಲ್ಲಿ ಆತಂಕ ಶುರುವಾಗಿದೆ. ಥಿಯೇಟರ್‍ಗಳಲ್ಲಿ ಮತ್ತೆ 50% ಭರ್ತಿಗೆ ಸರ್ಕಾರ ಮುಂದಾಗಿದ್ದು, ದೊಡ್ಡ ಸಿನಿಮಾಗಳ ನಿರ್ಮಾಪಕರು ಮತ್ತು ನಟರು ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಈಗಾಗಲೇ ಇದರ ಬಗ್ಗೆ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ಇದೀಗ ರಿಲೀಸ್‍ಗೆ ಸಿದ್ದವಿರುವ ‘ಸಲಗ’ ಚಿತ್ರತಂಡ ಸರ್ಕಾರದ ಆದೇಶದ ವಿರುದ್ಧ ಧ್ವನಿ ಎತ್ತಿದೆ. ನಟರಾದ ದುನಿಯಾ ವಿಜಯ್, ಡಾಲಿ ಧನಂಜಯ್ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಅವರುಗಳು ಏಪ್ರಿಲ್ 7ರ ನಂತರವು ಶೇ. 50% ಬೇಡ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಶುಕ್ರವಾರವೇ ಥಿಯೇಟರ್‍ಗಳಲ್ಲಿ ಶೇ. 50% ಭರ್ತಿಗೆ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಯುವರತ್ನ ಚಿತ್ರತಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರನ್ನು ಕೇಳಿಕೊಂಡಿತು ಆದ್ದರಿಂದ ಏಪ್ರಿಲ್ 7ರ ವರೇಗೆ 100% ಮುಂದುವರೆಸಲು ಸರ್ಕಾರ ನಿರ್ದಾರ ಮಾಡಿ 7 ನಂತರ ಶೇ. 50ಗೆ ಮುಂದಾಗಿದೆ. ಅದಕ್ಕಾಗಿ ಇದೀಗ ಸಲಗ ತಂಡ 7ರ ನಂತರವೂ 100% ಭರ್ತಿಗೆ ಅವಕಾಶ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ.

‘ಮನುಷ್ಯನ ಹಸಿವಿಗೆ ಯಾವುದೇ ಔಷಧಿಯಿಲ್ಲ ವೈರಸ್‍ಗೆ ವ್ಯಾಕ್ಸಿನ್ ಇದೆ. ಮತ್ತೇ ಲಾಕ್ ಡೌನ್, 50% ಇವೆಲ್ಲಾ ತುಂಬಾ ಎಪೆಕ್ಟ್ ಮಾಡುತ್ತದೆ. ಒಂದು ಸಿನಿಮಾ ಒಬ್ಬ ನಿರ್ಮಾಪಕನಿಗೆ ಎಫೆಕ್ಟ್ ಆದರೆ ಅದನ್ನೆ ನೆಚ್ಚಿಕೊಂಡಿರುವ ನೂರಾರು ಕುಟುಂಬಗಳಿಗೆ ಳು ಎಫೆಕ್ಟ್ ಆಗುತ್ತದೆ. ಯಾಹುದೇ ಕಾನೂನು ಮಾಡಬೇಕಾದರೆ, ಕೆಳವರ್ಗದವರನ್ನ ನೋಡಿ ಮಾಡಬೇಕು. ಆದರೆ ರೂಲ್ಸ್‍ಗಳೇಲ್ಲಾ ಅವರಿಗೆ ಹೇಗೆ ಬೇಕೂ ಹಾಗೆ ಆಗುತ್ತಿವೆ. ಈಗಾಗಲೇ ಒಂದು ವರ್ಷದಿಂದ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಮತ್ತೆ ಆ ತರ ಸಪರ್ ಆಗೋದು ಬೇಡ. 50% ಕ್ಯಾನ್ಸಲ್ ಮಾಡಿ. ಉಳ್ಳವರಿಗೆ ಸಮಸ್ಯೆ ಆಗಲ್ಲ ನಮ್ಮಂತವರಿಗೆ ಸಮಸ್ಯೆ ಆಗುತ್ತೆ. ಎಲ್ಲವು ರನ್ ಆಗುತ್ತಿರುವಾಗ ಸಿನಿಮಾ ಯಾಕೆ ಆಗಬಾರದು’ ಎಂದಿದ್ದಾರೆ ಧನಂಜಯ್.

Previous articleಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಣೆ
Next articleಪಾಲಿಕೆ ಚುನಾವಣೆ:ಏ.8ರಿಂದ ನಾಮಪತ್ರ ಸಲ್ಲಿಕೆ: ಡಿಸಿ

LEAVE A REPLY

Please enter your comment!
Please enter your name here