ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ಜಾಕ್ಲಿನ್ ಫರ್ನಾಂಡೆಸ್ ‘ಗಡಂಗ್ ರಕ್ಕಮ್ಮ’

0
316

3Dಯಲ್ಲಿ ಚಿತ್ರ ತೆರೆ ಕಾಣಲಿದೆಯೆಂಬ ಘೋಫಣೆಯ ನಂತರ, ಚಿತ್ರತಂಡ ಜ್ಯಾಕ್ಲಿನ್‌ ಈ ಚಿತ್ರದಲ್ಲಿ ಒಂದು ಕುತೂಹಲತಾರಿಯಾದ ಪಾತ್ರ ನಿರ್ವಹಿಸಿದ್ದಾರೆಂದು ಹೇಳಿದ್ದಾರೆ. ಮುಂಬೈ ನಗರದಾದ್ಯಂತ ಹಾಗು ದೇಶದ ಇತರೆ ನಗರಗಳಲ್ಲಿ ಬಿಲ್ಬೋರ್ಡುಗಳಲ್ಲಿ ಪ್ರದರ್ಶನವಾಗಲಿದೆ. ಬಾಲಿವುಡ್ ಬೆಡಗಿ ಚಿತ್ರದಲ್ಲಿ ರಕೇಲ್ ಡಿ’ಕೋಸ್ಟ AKA ‘ಗಡಂಗ್ ರಕ್ಕಮ್ಮ’ ಇದು ಪ್ಯಾನ್ ಇಂಡಿಯಾ 3D ಲುಕ್‌ ಕೂಡ ಆಗಿರುತ್ತದೆ.

‘ಫಸ್ಟ್ ಲುಕ್’ ವಿವಿಧ ಪ್ರಾಂತ್ಯ ಹಾಗು ಜನಾಂಗಗಳಂದ ಪ್ರೇರೇಪಿತವಾಗಿದೆ. ಚಿತ್ರದಲ್ಲಿ ಗಡಂಗ್ ರಕ್ಕಮ್ಮನ ಪಾತ್ರ ಕಾಲ್ಪನಿಕ ಜಾಗದಲ್ಲಿ ‘ಗಡಂಗ್‌’ ನಡೆಸುತ್ತಿರುತ್ತಾಳೆ. ಜ್ಯಾಕ್ಲಿನ್ ವಿಕ್ರಾಂತ್ ರೋಣ ಪ್ರಪಂಚಕ್ಕೆ ಕಾಳ್ಗಿಚ್ಚಿನಂತೆ ಸೇರ್ಪಡೆಯಾಗಿದ್ದಾರೆಂದು ಸುದ್ದಿ ಯಾಗಿದೆ. ಪ್ರಮುಖ ಪಾತ್ರ ನಿರ್ವಹಣೆಯಲ್ಲದೇ, ಸುದೀಪ್‌ನೊಂದಿಗೆ ಹೆಜ್ಜೆ ಕೂಡ ಹಾಕಿದ್ದಾರೆ.

“ ‘ಪ್ರಪಂಚದ ಹೊಸ ನಾಯಕ’ನ ಕಥೆಗೆ ಜ್ಯಾಕ್ಲಿನ್ ಸೇರ್ಪಡೆ ಮತ್ತಷ್ಟು ಹುರುಪು ತಂದಿದೆ. ಜನ-ಮನದಲ್ಲಿ ಅಚ್ಚಳಿಯುವುದಲ್ಲದೇ, ತಲೆ-ತಲೆಮಾರುಗಳಲ್ಲಿ ನೆಲೆಸುವಂತಹ ಅದ್ಭುತ ಚಿತ್ರ ವಿಕ್ರಾಂತ್ ರೋಣ. ಈತನಕ ಚಿತ್ರದ ಸುತ್ತ ಮೂಡಿರುವ ಕುತೂಹಲ ನೋಡಿ ಸಂತಸವಾಗುತ್ತಿದೆ” ಎಂದು ನಿರ್ಮಾಪಕ ಜ್ಯಾಕ್ ಮಂಜು ಹೇಳಿದ್ದಾರೆ. “ಜಾಕ್ಲಿನ್ ಪೋಸ್ಟರ್ ಬಿಡುಗಡೆಯ ಉದ್ದೇಶ ವಿಕ್ರಾಂತ್ ರೋಣ ದೊಡ್ಡ ಮಟ್ಟದ ಚಿತ್ರ ಮಾತ್ರವಲ್ಲ, ತಂಡದ ಪರಿಶ್ರಮ ಹಾಗು ಥಿಯೇಟರ್ ಗೆ ಬರುವ ಪ್ರತಿಯೊಬ್ಬ ಪ್ರೇಕ್ಷಕನ ಸಮಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ. ಪ್ರತಿ ಘೋಷಣೆಯೊಂದಿಗೆ ಕುತೂಹಲದ ಎಳೆ ತರುತ್ತಿರುವುದು ಅದ್ಭುತವಾದ ಅನುಭವ”, ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

“ವಿಕ್ರಾಂತ್ ರೋಣ ತಂಡ ನನ್ನನ್ನು ಹೃದ್ಪೂರ್ವಕವಾಗಿ ಸ್ವಾಗತಿಸಿದರು. ಈ ಚಿತ್ರದಲ್ಲಿ ಕಳೆದ ಪ್ರತಿ ಕ್ಷಣವೂ ಸುಂದರ ಅನುಭವ. ಅದ್ಧುರಿಯಾಗಿ ಪೋಸ್ಟರ್ ಬಿಡುಗಡೆ ಮಾಡುತ್ತಿರುವ ನಿರ್ಮಾಪಕರಿಗೆ ಹೃದ್ಪೂರ್ವಕ ಧನ್ಯವಾದಗಳು. ಈ ಚಿತ್ರದ ಅನುಭವ ನನಗೆ ಬಹಳ ವಿಷೇಶವಾಗಿದ್ದು, ಸದಾ ನೆನಪಿನಲ್ಲುಳಿಯುತ್ತದೆ.”, ಎಂದು ಜ್ಯಾಕ್ಲಿನ್ ಹೇಳಿದ್ದಾರೆ

ವಿಕ್ರಾಂತ್ ರೋಣ ಬಹು ಭಾಷ ಆಕ್ಷನ್ ಅಡ್ವೆಂಚರ್ ಚಿತ್ರವಾಗಿದ್ದು, 14 ಭಾಷೆಗಳಲ್ಲಿ ಹಾಗು 55 ದೇಶದಳಲ್ಲಿ 3D ಬಿಡುಗಡೆ ಕಾಣಲಿದೆ. ನಿರ್ದೇಶನ ಅನೂಪ್ ಭಂಡಾರಿ, ನಿರ್ಮಾಪಣೆ ಜ್ಯಾಕ್ ಮಂಜು ಮತ್ತು ಶಾಲಿನಿ ಮಂಜುನಾಥ್, ಸಹ-ನಿರ್ಮಾಪಣೆ ಅಲಂಕಾರ್ ಪಾಂಡಿಯನ್, ಸಂಗೀತ ಅಜನೀಶ್ ಲೋಕನಾಥ್, ಛಾಯಾಗ್ರಹಣ ವಿಲಿಯಂ ಡೇವಿಡ್ ಹಾಗು ಸೆಟ್‌ ವಿನ್ಯಾಸ ಶಿವಕುಮಾರ್ ಜೆ. ತಾರಾಗಣ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ಜಾಕ್ಲಿನ್ ಫರ್ನಾಂಡೆಸ್

Previous articleಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ : ವಿಕಾಸ್ ಕಿಶೋರ್ ಸುರಳ್ಕರ್
Next articleಡಾ||ವಿಜಯಸಂಕೇಶ್ವರ ಅವರ ಸಾಧನೆ ಆಧರಿಸಿದ ಚಿತ್ರ “ವಿಜಯಾನಂದ”ಗೆ ಚಾಲನೆ

LEAVE A REPLY

Please enter your comment!
Please enter your name here