ಈ ಬಾರಿಯ ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ಭಾರತ ಟಿ20 ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವಾಗಿತ್ತು. ತಂಡದ ಆಟಗಾರರ ಅತ್ತುತ್ತಮ ಫಾರ್ಮ್ ಸಹಿತ ಸಾಕಷ್ಟು ಅಂಶಗಳು ಭಾರತ ತಂಡವನ್ನು ಈ ಸ್ಥಾನಕ್ಕೆ ನಿಲ್ಲಿಸಿತ್ತು. ಆದರೆ ವಿಶ್ವಕಪ್‌ನ ಆರಂಭದ ನಂತರ ಭಾರತದ ಸ್ಥಿತಿ ಈಗ ಬದಲಾಗಿದೆ. ಆರಂಭಿಕ ಎರಡು ಪಂದ್ಯಗಳಲ್ಲಿಯೂ ಭಾರತ ಹೀನಾಯವಾಗಿ ಸೋಲು ಕಂಡಿದೆ. ಈ ಸೋಲಿನ ಮೂಲಕ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ ವಿರಾಟ್ ಕೊಹ್ಲಿ ಪಡೆ ಟೂರ್ನಿಯಿಂದಲೇ ಹೊರಬೀಳುವ ಹಂತದಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಅಂತರದಿಂದ ಭಾರೀ ಪ್ರಮಾಣದ ಸೋಲು ಅನುಭವಿಸಿರುವುದು ಭಾರತಕ್ಕೆ ದೊಡ್ಡ ಏಟನ್ನು ನೀಡಿದೆ. ಈ ಮೂಲಕ ಭಾರತ ತನ್ನ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಟೀಮ್ ಇಂಡಿಯಾದ ಆಟಗಾರರು ಎಲ್ಲಾ ವಿಭಾಗಗಳಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿರುವುದು ಈ ಎರಡು ಪಂದ್ಯಗಳಲ್ಲಿಯೂ ಸ್ಪಷ್ಟವಾಗಿದೆ. ಹಾಗಾದರೆ ಟೂರ್ನಿಯ ಆರಂಭದಲ್ಲಿ ಫೆವರೀಟ್ ತಂಡವಾಗಿದ್ದ ಭಾರತ ಈ ಸ್ಥಿತಿಯನ್ನು ಎದುರಿಸಲು ಕಾರಣವೇನು? ಅತ್ಯುತ್ತಮ ಆಟಗಾರರ ಪಡೆಯನ್ನು ಹೊಂದಿದ್ದರೂ ವಿರಾಟ್ ಕೊಹ್ಲಿ ಪಡೆ ಎಡವಿದ್ದು ಎಲ್ಲಿ? ಮುಂದೆ ಓದಿ..
ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಹೆಚ್ಚಿನ ಒತ್ತು
ಒಂದಂತೂ ಸ್ಪಷ್ಟ, ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ಅನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಆಟಗಾರರು ಐಪಿಎಲ್ ಫ್ರಾಂಚೈಸಿಗಳಿಗೆ ಆಡುವಾಗ ಇರುವ ಒತ್ತಡ ಹಾಗೂ ಭಾವನೆಗಳು ಮತ್ತು ರಾಷ್ಟ್ರೀಯ ತಂಡದ ಪರವಾಗಿ ಆಡುವಾಗ ಇರುವ ಒತ್ತಡ ಹಾಗೂ ಭಾವನೆಗಳು ಸಂಪೂರ್ಣ ಭಿನ್ನವಾಗಿರುತ್ತದೆ. ಅಲ್ಲದೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಆ ಹೆಮ್ಮೆಯೂ ಭಿನ್ನವಾಗಿರುತ್ತದೆ. ಹಾಗಿದ್ದರೂ ವಿರಾಟ್ ಪಡೆ ಇಂಗ್ಲೆಂಟ್ ವಿರುದ್ಧದ ಟೆಸ್ಟ್ ಸರಣಿಯನ್ನು ಪೂರ್ತಿಗೊಳಿಸದೆ ಐಪಿಎಲ್‌ನಲ್ಲಿ ಆಡಲು ಯುಎಇಗೆ ಬಂದಿದ್ದರು. ಐಪಿಎಲ್ ಪಂದ್ಯಗಳ ತೀವ್ರತೆ ಹಾಗೂ ಅತಿಯೆನಿಸುವ ಪಂದ್ಯಗಳು ಆಟಗಾರರನ್ನು ಬಳಲುವಂತೆ ಮಾಡಿತ್ತು. ವಿಶ್ವಕಪ್‌ನಂತಾ ಪ್ರಮುಖ ಟೂರ್ನಿ ಮುಂದಿದ್ದರೂ ಆಟಗಾರರು ಹಾಗೂ ಬಿಸಿಸಿಐ ಚಿತ್ತ ಮಹತ್ವದ ಟೂರ್ನಿಗಿಂತಲೂ ಹಚ್ಚು ಐಪಿಎಲ್ ಮೇಲೆಯೇ ಇತ್ತು. ಇದು ಭಾರತ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷೆಯ ಮಟ್ಟ ತಲುಪದಿರಲು ಪ್ರಮುಖ ಕಾರಣವಾಗಿದೆ.
ಅತಿಯಾದ ಬಯೋಬಬಲ್ ಜೀವನ
ಕೊರೊನಾವೈರಸ್‌ನ ಆರಂಭದ ಬಳಿಕ ಕ್ರಿಕೆಟ್ ಆಟಗಾರರು ಸತತವಾಗಿ ಬಯೋಬಬಲ್‌ನಲ್ಲಿದ್ದು ಟೂರ್ನಿಗಳಲ್ಲಿ ಭಾಗವಹಿಸಬೇಕಿದೆ. ಸುದೀರ್ಘ ಕಾಲದಿಂದ ಆಟಗಾರರು ಈ ಬಯೋಬಬಲ್‌ನಲ್ಲಿರುವುದು ಆಟಗಾರರಿಗೆ ಒತ್ತಡವನ್ನುಂಟು ಮಾಡುತ್ತದೆ. ಆಸ್ಟ್ರೇಲಿಯಾ ಪ್ರವಾಸದ ನಂತರ ಭಾರತ ನಿರಂತರವಾಗಿ ಕ್ರಿಕೆಟ್ ಆಡುತ್ತಿದೆ. ಪ್ರತಿ ಸರಣಿಯೂ ಬಯೋಬಬಲ್‌ನಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ಆಟಗಾರರು ಒಂದಾದ ನಂತರ ಮತ್ತೊಂದು ಬಯೋಬಬಲ್‌ಗೆ ಒ್ರವೇಶಿಸುತ್ತಿದ್ದರು. ಇದು ಖಂಡಿತವಾಗಿಯೂ ಆಟಗಾರರಿಗೆ ಹಿನ್ನಡೆಯುಂಟು ಮಾಡುತ್ತದೆ. ಆಟಗಾರರು ಇಂತಾ ವಾತಾವರಣದಲ್ಲಿ ಅತಿಯಾಗಿ ಬಳಲುತ್ತಾರೆ ಎಂಬುದನ್ನು ಯಾರಾದರೈ ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ಬಿಸಿಸಿಐ ತನ್ನ ಆಟಗಾರರನ್ನು ಸೂಕ್ತ ರೀತಿಯಲ್ಲಿ ಈ ಒತ್ತಡವನ್ನು ನಿರ್ವಹಿಸುವಂತೆ ಮಾಡಲು ವಿಫಲವಾಯಿತು.
ಆಯ್ಕೆ ಮಂಡಳಿ ಮಾಡಿದ ಮಹಾ ಪ್ರಮಾದ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಆಘಾತಕಾರಿ ಪ್ರದರ್ಶನದಲ್ಲಿ ಆಯ್ಕೆ ಮಂಡಳಿಯ ತಪ್ಪು ನಿರ್ಧಾರಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲರ್ ಅರಂತಾ ಆಟಗಾರನನ್ನು ಟೂರ್ನಿಯಿಂದ ಹೊರಗಿಟ್ಟಿರುವುದು ಎಂತವರಿಗೂ ಅಚ್ಚರಿಯುಂಟು ಮಾಡುತ್ತದೆ. ಅಲ್ಲದೆ ದೀಪಕ್ ಚಹರ್ ಅವತಂತಾ ಸ್ಪೆಶಲಿಸ್ಟ್ ಬೌಲರ್‌ಗೂ ಕೂಡ ಸ್ಕ್ವಾಡ್‌ನಲ್ಲಿ ಅವಕಾಶ ದೊರೆತಿಲ್ಲ. ಹಾಗಾಗಿ ಆಯ್ಕೆ ಮಂಡಳಿಯ ಎಡವಟ್ಟು ಈ ಬಾರಿಯ ವಿಶ್ವಕಪ್‌ನ ಆರಂಭದಲ್ಲಿಯೇ ಭಾರತ ಹೀನಾಯ ಪರಿಸ್ಥಿತಿಯನ್ನು ಎದುರಿಸಲು ಕಾರಣವಾಗಿದೆ.