9 C
New York
Tuesday, October 4, 2022

Buy now

spot_img

೩೮ ವರ್ಷಗಳ ಬಳಿಕ ಪತ್ತೆಯಾದ ಯೋಧನ ಶವ

ಹಲ್ದ್ವಾನಿ: ಗಸ್ತಿನಲ್ಲಿದ್ದಾಗ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಸೇನಾ ಯೋಧನ ಶವ 38 ವರ್ಷಗಳ ಬಳಿಕ ಸಿಯಾಚಿನ್‌ನ ಹಳೆಯ ಬಂಕರ್‌ನಲ್ಲಿ ಪತ್ತೆಯಾಗಿದೆ. 19 ಕುಮಾವ್ ರೆಜಿಮೆಂಟ್‌ನ ಚಂದ್ರಶೇಖರ್ ಹರ್ಬೋಲಾ ಅವರ ಶವವೆಂದು ರಾನಿಖೇತ್‌ನಲ್ಲಿರುವ ಸೈನಿಕ್ ಗ್ರೂಪ್ ಸೆಂಟರ್ ಗುರುತಿಸಿದೆ.

ಚಂದ್ರಶೇಖರ್ ಹರ್ಬೋಲಾ, 1984 ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ‘ಆಪರೇಷನ್ ಮೇಘದೂತ್’ ಗಾಗಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಗೆ ಕಳುಹಿಸಲ್ಪಟ್ಟ 20 ಸದಸ್ಯರ ಪಡೆಗಳ ಭಾಗವಾಗಿದ್ದರು. ಗಸ್ತು ತಿರುಗುತ್ತಿದ್ದಾಗ ಅವರು ಹಿಮದ ಬಿರುಗಾಳಿಗೆ ಸಿಲುಕಿದರು. ಆ ವೇಳೆ 15 ಸೈನಿಕರ ಶವಗಳು ಪತ್ತೆಯಾಗಿದ್ದವು.  ಇತರ ಐವರ ಶವಗಳು ಪತ್ತೆಯಾಗಿರಲಿಲ್ಲ. ಅದರಲ್ಲಿ ಹರ್ಬೋಲಾ ಕೂಡ ಒಬ್ಬರು.

ಚಂದ್ರಶೇಖರ್ ಹರ್ಬೋಲಾ ಅವರ ಅಲ್ಮೋರಾ ಮೂಲದ ಅವರ ಪತ್ನಿ ಶಾಂತಿ ದೇವಿ ಪ್ರಸ್ತುತ ಸರಸ್ವತಿ ವಿಹಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಹರ್ಬೋಲಾ ಅವರ ಪಾರ್ಥಿವ ಶರೀರ ಸೋಮವಾರ ತಡರಾತ್ರಿ ಇಲ್ಲಿಗೆ ತಲುಪುವ ನಿರೀಕ್ಷೆಯಿದೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,510FollowersFollow
0SubscribersSubscribe
- Advertisement -spot_img

Latest Articles