8.6 C
New York
Saturday, December 4, 2021

Buy now

spot_img

“ಹಾನಗಲ್​​ನಲ್ಲಿ ಬಿ.ಜೆ.ಪಿ ಪರವಾಗಿ ಸಾಮಾಜಿಕ ಸಮೀಕರಣದ ಒಲವು ಕಾಣುತ್ತಿದೆ”:ಸಿಎಂ

ಹಾವೇರಿ: ಎಲ್ಲ ಸಮುದಾಯ ಹಾಗೂ ವರ್ಗಗಳ ಜನ ಇಂದು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ಹಾನಗಲ್ ತಾಲೂಕಿನಲ್ಲಿ ಹಿಂದೆಂದೂ ಕಂಡರಿಯದ ಸಾಮಾಜಿಕ ಸಮೀಕರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿ.ಜೆ.ಪಿ ಪರವಾಗಿ ಸಾಮಾಜಿಕ ಸಮೀಕರಣದ ಒಲವು ಕಾಣುತ್ತಿದೆ. ಶಿವರಾಜ್ ಸಜ್ಜನರ್ ಅವರು ದೊಡ್ಡ ಅಂತರದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭೇಟಿ ನೀಡಿದ ಸಂದರ್ಭದಲ್ಲಿಯೂ ಬಹಳ ದೊಡ್ಡ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದೆ. ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಹಲವಾರು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು.
ಸಿಂದಗಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಹುರುಪು ಮತ್ತು ಹುಮ್ಮಸ್ಸು ನೋಡಿದರೆ, ಅತ್ಯಧಿಕ ಮತಗಳಿಂದ ಭಾ.ಜ.ಪ ಅಭ್ಯರ್ಥಿ ರಮೇಶ್ ಬೂಸನೂರು ಆಯ್ಕೆಯಾಗುವ ಭರವಸೆ ಇದೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,042FollowersFollow
0SubscribersSubscribe
- Advertisement -spot_img

Latest Articles