ಹಳ್ಳಿಗಳಿಗೆ ಬಂತು ಸಂಚಾರಿ ಎಟಿಎಂ ವಾಹನ

0
379


ಕುರುಗೋಡು: ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿನ ಗ್ರಾಹಕರ ಮನೆ ಬಾಗಿಲಿಗೆ ಎಟಿಎಂ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಎರಡು ಸಂಚಾರಿ ಎಟಿಎಂ ವಾಹನಗಳ ವ್ಯವಸ್ಥೆ ಕೈಗೊಂಡಿದೆ. ಇದನ್ನು ಗ್ರಾಮೀಣ ಪ್ರದೇಶದ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕಿನ ನೌಕರ ನಾಗಭೂಷಣ ಕರೆ ನೀಡಿದರು.
ಅವರು ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬಿಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಎಟಿಎಂ ಸಂಚಾರಿ ವಾಹನಗಳ ಸೌಲಭ್ಯ ಕುರಿತು ಬುಧವಾರ ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಮತ್ತು ಎಟಿಎಂ ವ್ಯವಸ್ಥೆಗಳು ಇರುವುದಿಲ್ಲ, ತಾಲೂಕಿನ ಗ್ರಾಮಗಳ ಗ್ರಾಹಕರ ಮನೆ ಮನೆ ಬಾಗಿಲಿಗೆ ಬ್ಯಾಂಕಿನ ವ್ಯವಹಾರಕ್ಕಾಗಿ ಬಿಡಿಸಿಸಿ ಬ್ಯಾಂಕ್ ಎರಡು ಸಂಚಾರಿ ವಾಹನಗಳ ವ್ಯವಸ್ಥೆ ಕಲ್ಪಿಸಿದೆ. ಇದನ್ನು ಪ್ರತಿಯೊಬ್ಬ ಗ್ರಾಹಕರು ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದರು.
ನAತರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ.ಶಿವರಾಜ್ ಮಾತನಾಡಿ, ಗ್ರಾಮೀಣ ಭಾಗದ ಜನಗಳು ಬ್ಯಾಂಕಿನ ವಹಿವಾಟು ನಡೆಸಲು ಪಟ್ಟಣಗಳಿಗೆ ತೆರಳಬೇಕಾಗಿತ್ತು. ಈಗ ಬಿಡಿಸಿಸಿ ಬ್ಯಾಂಕಿನ ವತಿಯಿಂದ ಎಟಿಎಂ ಸಂಚಾರಿ ವಾಹಗಳ ವ್ಯವಸ್ಥೆಯಿಂದ ಗ್ರಾಹಕರಿಗೆ ತುಂಬ ಅನುಕೂಲಕರವಾಗಿದೆ. ಈ ಸೇವೆ ಹೀಗೆ ನಿರಂತರವಾಗಿದ್ದಾರೆ, ಗ್ರಾಮೀಣ ಜನರು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

Previous articleಧರೆಗುರುಳಿದ ವಿದ್ಯುತ್ ಕಂಬಗಳು ಪ್ರಾಣಾಪಾಯದಿಂದ ಪಾರಾದ ಜನ
Next articleಪುನೀತ್ ರಾಜಕುಮಾರ್ ಮನೆಗೆ ಮುರುಘಾ ಶರಣರ ಭೇಟಿ

LEAVE A REPLY

Please enter your comment!
Please enter your name here