ಮರಿಯಮ್ಮನಹಳ್ಳಿ:ಹೋಬಳಿಯಲ್ಲಿ ಸ್ವಚ್ಚ ಪ್ರಾಮಾಣಿಕ ಜನಪರ ಆಡಳಿತ ತರಲು ಕೆ.ಆರ್.ಎಸ್ ಪಕ್ಷದ ಹಳದಿ ಪಡೆ ಸಿದ್ದವಾಗಿದೆ ಎಂದುಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ.ಗಣೇಶರವರು ಮರಿಯಮ್ಮನಹಳ್ಳಿ ಹೋಬಳಿ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು.ಅವರು ಪಟ್ಟಣದ ದುರ್ಗಾದಾಸ ಬಯಲು ರಂಗಮಂದಿರದಲ್ಲಿ ಹೋಬಳಿ ಘಟಕಕ್ಕೆ ಚಾಲನೆ ನೀಡಿದರು.
ಹೊಸಪೇಟೆ ತಾಲೂಕು ಘಟಕದವರು, ಹಾಗೇ ಹಗರಿಬೊಮ್ಮನಹಳ್ಳಿ ತಾಲೂಕು ಘಟಕದ ಸೇನಾನಿಗಳು ಹೆಚ್ಚು ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ, ಮರಿಯಮ್ಮನಹಳ್ಳಿ ಹೋಬಳಿಯ ಬಂಧುಗಳಿಗೆ ಡಬಲ್ ಧಮಾಕ. ಯಾವ ಕಡೆ ಹೋದರೂ, ನಿಮ್ಮ ಪರ ನಿಲ್ಲಲು ಹಳದಿಪಡೆ ಸಿದ್ಧವಾಗಿರುತ್ತದೆ.