7.2 C
New York
Tuesday, February 7, 2023

Buy now

spot_img

ಸ್ವಚ್ಛತೆ ಬಗ್ಗೆ ಪುರಸಭೆ ವತಿಯಿಂದ ಬೀದಿ ನಾಟಕದ ಮೂಲಕ ಜಾಗೃತಿ

ಬೆಳಗಾಯಿತು ವಾರ್ತೆ
ಹಗರಿಬೊಮ್ಮನಹಳ್ಳಿ.ಜು.17 : ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಮಹಾಮಾರಿ ಕರೋನಾ ವೈರಸ್‌ನ ಬಗ್ಗೆ ಮತ್ತು ಸ್ವಚ್ಛತೆಯ ಅರಿವು ಕಾರ್ಯಕ್ರಮವನ್ನು ಪುರಸಭೆಯ ವತಿಯಿಂದ ಮರಿಯಮ್ಮನಹಳ್ಳಿಯ ರಂಗಚೌಕಿ ಕಲಾ ತಂಡದಿಂದ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಶನಿವಾರ ಜಾಗೃತಿ ಮೂಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೃಷ್ಣಾ ನಾಯ್ಕ್ ತಮಟೆ ಬಾರಿಸುವುದರ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾರ್ವಜನಿಕ ಸ್ಥಳ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಶೌಚಾಲಯ ಬಳಕೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುತ್ತದೆ, ಮಲ ಮೂತ್ರಗಳನ್ನು ಎಲ್ಲೆಂದರಲ್ಲಿ ಮಾಡುವುದರಿಂದ ಪರಿಸರ ಹಾನಿ ಮಾಡುವುದರ ಜೊತೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತದೆ.ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಸ್ವಚ್ಛ ಭಾರತ ನಿರ್ಮಾಣದ ಪರಿಕಲ್ಪನೆಯ ಮನಸ್ಸಿನಲ್ಲಿ ಛಾಪು ಮೂಡಿಸಿದರೆ ನಾಳಿನ ಬದುಕು ಸುಂದರವಾಗುತ್ತದೆ, ಬಳಸಿದ ಕಸವನ್ನು ಹಸಿ ಹಾಗೂ ಒಣ ಕಸವಾಗಿ ಬೇರ್ಪಡಿಸಿ ಪುರಸಭೆ ವಾಹನಗಳಿಗೆ ಹಾಕಬೇಕು, ಕಸಮುಕ್ತ ವಾತಾವರಣ ನಿರ್ಮಿಸಿ ಸ್ವಚ್ಛ ಭಾರತ ನಿರ್ಮಾಣ ಮಾಡುವ ಪ್ರಯತ್ನದಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಬೀದಿ ನಾಟಕದ ಮೂಲಕ ಅರಿವು ಮೂಡಿಸಲಾಗುತ್ತಿದೆ, ಇನ್ನು ಮಾಹಾಮಾರಿ ಕರೋನಾ ವೈರಸ್‌ನ ಸರಪಳಿಯನ್ನು ತಪ್ಪಿಸಲು ಎಸ್‌ಎಂಎಸ್ ಪಾಲನೆ ಕಡ್ಡಾಯವಾಗಿದೆ, ಸ್ವಚ್ಛತೆಯ ಬಗ್ಗೆ ಬೇಜವಾಬ್ದಾರಿತನ ತೋರಿದರೆ ದಂಡ ವಿಧಿಸಲಾಗುವುದು ಎಂದರು.
ಈ ಸಂಧರ್ಭಧಲ್ಲಿ ಪುರಸಭೆಯ ಕಂದಾಯ ಅಧಿಕಾರಿ ಎಂ.ಮಾರೆಪ್ಪ, ಸಿಎಒ ಬಸವರಾಜ್, ವ್ಯೆವಸ್ಥಾಪಕ ಚಂದ್ರಶೇಖರ್, ನೈರ್ಮಲ್ಯ ಮೇಸ್ತಿç ಪ್ರಭಾಕರ, ಕಿರಿಯ ಆರೋಗ್ಯ ಸಹಾಯಕಿ ಕೆ.ಜಯಲಕ್ಷ್ಮಿ , ನಾಗರತ್ನ, ರಂಗಚೌಕಿ ಕಲಾವಿದರಾದ ಸರದಾರ, ಮಹಾಂತೇಶ್,ಹುಲುಗಪ್ಪ ಬಂಡಿಹಳ್ಳಿ, ನೇತ್ರ ಶಾರದ, ಹನುಮಂತ, ಬಸವರಜ , ವೀರೇಂದ್ರ ಸೇರಿದಂತೆ ಪುರಸಭೆಯ ಪೌರಕರ್ಮಿಕರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,698FollowersFollow
0SubscribersSubscribe
- Advertisement -spot_img

Latest Articles