ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ‘ಪರಾಕ್ರಮ ದಿನ’ ಎಂದು ಆಚರಣೆ ಮಾಡಲಾಗುವುದು

  0
  271

  ಒಡಿಶಾದ ಕಟಕ್‌ನಲ್ಲಿ 1897ರ ಜನವರಿ 23 ರಂದು ಜನಿಸಿದ ಸುಭಾಷ್ ಚಂದ್ರ ಬೋಸ್ ಅವರ ತಂದೆ ಜಾನಕೀನಾಥ್ ಬೋಸ್, ತಾಯಿ ಪ್ರಭಾವತಿ. ತತ್ವಶಾಸ್ತ್ರ ಪದವಿ(1919), ಇಂಗ್ಲೆAಡ್ ನಿಂದ ಐಸಿಎಸ್ ಪದವಿ(1920) ಪಡೆದ ಬೋಸ್ 1921 ರಲ್ಲಿ ಭಾರತಕ್ಕೆ ಮರಳಿ ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾದರು. ಬೋಸ್‌ಗೆ ಮಂದಗಾಮಿ ಚಿಂತನೆಯಲ್ಲಿ ನಂಬಿಕೆ ಇರಲಿಲ್ಲ. ಅವರದೇನಿದ್ದರೂ ಹೋರಾಟದ ಹಾದಿ. ಅದಕ್ಕೆಂದೇ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್‌ಎ) ಸ್ಥಾಪಿಸಿ, ಆ ಮೂಲಕ ಸ್ವಾತಂತ್ರ‍್ಯ ಹೋರಾಟಕ್ಕೆ ಬಲ ನೀಡಿದರು.

  1945 ಆಗಸ್ಟ್ 18 ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಅಸುನೀಗಿದರು ಎಂಬ ಸುದ್ದಿಯನ್ನು ಇಂದಿಗೂ ಭಾರತೀಯರಿಗೆ ಅರಗಿಸಿಕೊಳ್ಳುವುದು ಕಷ್ಟವೆನ್ನಿಸಿದೆ.
  ತಮ್ಮ ಅಪ್ರತಿಮ ಶೌರ್ಯದ ಮೂಲಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಭಾರತೀಯರ ಹೆಮ್ಮೆ ಎನ್ನಿಸಿದ್ದಾರೆ. ಅವರ ಜಯಂತಿಯAದು ನಾವು ಅವರಿಗೆ ತಲೆಬಾಗೋಣ.
  ಸ್ವಾತಂತ್ರ‍್ಯ ಚಳವಳಿಯ ಸಮಯದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ತೋರಿದ ಶೌರ್ಯವನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ. ಅವರ ಜನ್ಮದಿನದಂದು ಅವರ ದೇಶಭಕ್ತಿಗೆ ನಮ್ಮ ನಮನ.

  ಯುವಕರಿಗೆ ಆದರ್ಶ
  ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯAದು, ಅವರಿಗೆ ನನ್ನ ವಿಧೇಯ ನಮನಗಳು. ಅವರ ಧೈರ್ಯ, ಶೌರ್ಯ ಮತ್ತು ಆದರ್ಶಗಳು ಎಂದಿಗೂ ಮುಂದಿನ ತಲೆಮಾರುಗಳಿಗೆ ಸ್ಫೂರ್ತಿ ನೀಡಲಿ. ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ‍್ಯ ಕೊಡಿಸುತ್ತೇನೆ ಎಂದು ಶೌರ್ಯದಿಂದ ಹೇಳಿದ ಭಾರತದ ಧೈರ್ಯವಂತ ಪುತ್ರರಲ್ಲೊಬ್ಬರಾದವರು ನೇತಾಜಿರವರು.

  Previous article“ಅಂಗವಿಕಲತೆ ಶಾಪವಲ್ಲ ಅದೊಂದು ನೂನ್ಯತೆ”.
  Next articleಕೋವಿಡ್ ಬೂಸ್ಟರ್‌ಡೋಸ್‌ಅನ್ನು ಯಾವಾಗ ತೆಗೆದುಕೊಳ್ಳಬೇಕು?

  LEAVE A REPLY

  Please enter your comment!
  Please enter your name here