ಬೆಳಗಾಯಿತು ವಾರ್ತೆ
ಕೊಟ್ಟೂರು: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 131ನೇ ಜಯಂತೋತ್ಸವದ ಪ್ರಯುಕ್ತ ಬಸ್ ನಿಲ್ದಾಣದ ಹತ್ತಿರ ಅಂಬೇಡ್ಕರ್ ಯುವ ಬಳಗದವರು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನರಿಗೆ ಸಿಹಿ ಪಾನೀಯ ವಿತರಿಸಿ ಅರ್ಥಪೂರ್ಣ ಮತ್ತು ವಿಶೇಷವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಬಳಗದ ಅಧ್ಯಕ್ಷರಾದ ಪಿ ಅಜ್ಜಯ್ಯ, ಆರ್ ಪ್ರಕಾಶ್, ಜಿ ದುರುಗೇಶ್, ಬಿ ಸುರೇಶ್, ಬಿ ಶಂಕರ್, ಬಿ ಕೆಂಚಪ್ಪ ,ಬಿ ಪ್ರಸಾದ್,ಕೆ ಹನುಮಂತ ಮುಂತಾದವರು ಇದ್ದರು.
