22.3 C
New York
Tuesday, August 16, 2022

Buy now

spot_img

ಸಾಮಾಜಿಕ ಜಾಲತಾಣದಲ್ಲೂ ರಾಷ್ಟ್ರಧ್ವಜ ಅಭಿಯಾನ: ಪ್ರೊಫೈಲ್ ಪಿಕ್ ಗಳಾಗಿ ರಾಷ್ಟ್ರಧ್ವಜ ಬಳಸಲು ಸಿಎಂ ಕರೆ

ಬೆಂಗಳೂರು: ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಹಿನ್ನೆಲೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಎಂಬ ಅಭಿಯಾನಕ್ಕೆ ಕರೆ ನೀಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಶುರು ಮಾಡಿದೆ.

ಈ ಅಭಿಯಾನದ ಮೂಲಕ ಆ ದಿನ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಲಿ ಎಂಬ ಉದ್ದೇಶ ಹೊಂದಿರುವ ಬಿಜೆಪಿ ಇಂದಿನಿಂದ ಸಾಮಾಜಿಕ ಜಾಲತಾಣದಲ್ಲೂ ರಾಷ್ಟ್ರಧ್ವಜ ಅಭಿಯಾನ ಪ್ರಾರಂಭಿಸಿದೆ. ಹೌದು ಆಗಸ್ಟ್ 2 ರಿಂದ 15ರವರೆಗೆ ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋಗಳಾಗಿ ರಾಷ್ಟ್ರಧ್ವಜ ಬಳಸುವ ಅಭಿಯಾನಕ್ಕೆ ಮುಂದಾಗಿದೆ.

ಈ ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಪ್ರೋಫೈಲ್ ಪಿಕ್ ಗಳಾಗಿ ನಮ್ಮ ರಾಷ್ಟ್ರಧ್ವಜವನ್ನು ಬಳಸೋಣ. ಈ ಮೂಲಕ ಪ್ರಧಾನಿ ಶ್ರೀ Narendra Modi ಅವರು ಕರೆ ನೀಡಿರುವ “ಮನೆ ಮನೆಯಲ್ಲೂ ರಾಷ್ಟ್ರಧ್ವಜ” ಅಭಿಯಾನದ ಬಗ್ಗೆ ಜಾಗೃತಿ ಮೂಡಿಸೋಣ ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,436FollowersFollow
0SubscribersSubscribe
- Advertisement -spot_img

Latest Articles