9.3 C
New York
Tuesday, October 4, 2022

Buy now

spot_img

“ಸಚಿವ ಮಾಧುಸ್ವಾಮಿಯವರು ಮಾತಾಡಿರೋದನ್ನ ತಪ್ಪು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ”: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರು ಬದಲಾಗ್ತಾರೆಂದು ಕಾಂಗ್ರೆಸ್ ಕಿಚ್ಚು ಹೊತ್ತಿಸಿದ ಬೆನ್ನಲ್ಲೇ ಸಚಿವರಾದ ಜೆ. ಮಾಧುಸ್ವಾಮಿಯವರ ಆಡಿಯೋ ಸ್ವಪಕ್ಷದಲ್ಲೇ ಕಿಡಿ ಹೊತ್ತಿಸಿದೆ.  ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡ್ತೀದ್ದೀವಷ್ಟೇ ಎಂದು ಹೇಳಿರುವ ಸಚಿವ ಜೆ. ಮಾಧುಸ್ವಾಮಿಯವರ ಆಡಿಯೋ ಲೀಕ್ ಆಗಿದ್ದು ಹಲವು ಸಚಿವರು ಮಾಧುಸ್ವಾಮಿಯವರ ವಿರುದ್ಧ ಕಿಡಿಕಾರಿದ್ದು ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ, ಸಚಿವ ಮಾಧುಸ್ವಾಮಿಯವರು ಆ ರೀತಿ ಬೇರೆ ಸಂದರ್ಭದಲ್ಲಿ ಹೇಳಿದ್ದಾರೆ.  ಅವರ ಜೊತೆ ಮಾತಾಡಿದ್ದೇನೆ. ಮೂರು ತಿಂಗಳ ಹಿಂದೆ ಕೊ ಆಪರೇಟಿವ್ ವಿಚಾರದಲ್ಲಿ ಮಾತಾಡಿರೋದು. ಯಾವುದೇ ತಪ್ಪು  ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲವು ಸರಿಯಿದೆ. ಏನೂ ತೊಂದರೆಯಿಲ್ಲ ಎಂದು ಹೇಳಿದರು.

ಶಿವಮೊಗ್ಗ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ತನಿಖೆ ಪ್ರಕ್ರಿಯೆ ನಡೆಯುವಾಗ ನಾವು ಕಮೆಂಟ್ ಮಾಡೋದು ಸರಿಯಲ್ಲ. ಕಾನೂನು ಪ್ರಕಾರ ತನಿಖೆ ಮಾಡೋಕೆ  ಆದೇಶ ಕೊಟ್ಟಿದ್ದೇನೆ. ಪೊಲೀಸರು ಅವರ  ಕರ್ತವ್ಯ ಮಾಡ್ತಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,510FollowersFollow
0SubscribersSubscribe
- Advertisement -spot_img

Latest Articles