9 C
New York
Tuesday, October 4, 2022

Buy now

spot_img

ಸಂಪೂರ್ಣ ಸಿಸಿಟಿವಿ ನಿಗಾದಲ್ಲಿ ಇನ್ಮುಂದೆ ಬಳ್ಳಾರಿ

ಬಳ್ಳಾರಿ: ಬಳ್ಳಾರಿ ಜಿಲ್ಲಾ ಕ್ರೀಡಾಂಗಣದ ಬಳಿ ಜಿಲ್ಲಾ ಖನಿಜ ನಿಧಿಯ ಮ್ಯಾಕ್ರೋ ಯೋಜನೆ ಅಡಿ ನಿರ್ಮಿಸಲಾಗಿರುವ ಹಾಕಿ ಸಿಂಥಟಿಕ್ ಟರ್ಫ್ ಮೈದಾನವನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಸೋಮವಾರ ಉದ್ಘಾಟಿಸಿದರು.ನಂತರ ಸಚಿವರು ನಿರ್ಮಿಸಲಾಗಿರುವ ಹಾಕಿ ಟರ್ಫ್ ಮೈದಾನ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲನಿಮಿಷಗಳ ಕಾಲ ಹಾಕಿ ಸ್ಟೀಕ್ ಹಿಡಿದು ಆಟವಾಡಿದ್ದು ಗಮನಸೆಳೆಯಿತು.ನಂತರ ಸಚಿವರು ಬಳ್ಳಾರಿ ಮಹಾನಗರ ಪಾಲಿಕೆಯ ವಿವಿಧ ವಾಹನಗಳಾದ ಸಕಿಂಕ್ ಮಷೀನ್,ತ್ರಿಚಕ್ರ ಜೆಟ್ಟಿಂಗ್ ಮಶೀನ್, ಸ್ಕಿಡ್ ಲೋಡರ್,ಫಾಗೀಂಗ್ ಮಶೀನ್,ಟ್ರ್ಯಾಕ್ಟರ್ ಜೊತೆಗೆ ಟ್ರೇಲರ್,ಹಿತಾಚಿ ಯಂತ್ರಗಳನ್ನು ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ವಿತರಿಸಿದರು.ಈ ವಾಹನಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು.ನಂತರ ನಲ್ಲಚೇರವು ಪ್ರದೇಶದಲ್ಲಿರುವ ವಾಲ್ಮೀಕಿ ಭವನದ ಸಮೀಪ 4ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.*ಸಂಪೂರ್ಣ ಸಿಸಿಟಿವಿ ನಿಗಾದಲ್ಲಿ ಇನ್ಮುಂದೆ ಬಳ್ಳಾರಿ!: ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಖನಿಜ ನಿಧಿ ಅನುದಾನದಡಿ ನಿರ್ಮಿಸಲಾಗಿರುವ ನೂತನ ಕಂಟ್ರೋಲ್ ರೂಂ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಉದ್ಘಾಟಿಸಿದರು.ಬಳ್ಳಾರಿ ನಗರದ 26 ಪ್ರಮುಖ ವೃತ್ತಗಳಲ್ಲಿ(ಜಂಕ್ಷನ್) 90 ಅತ್ಯಾಧುನಿಕ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದು,ಈ ಪ್ರದೇಶದ ಬಳಿಯ ಸಂಪೂರ್ಣ ಚಲನವಲನಗಳನ್ನು ಎಸ್ಪಿ ಕಚೇರಿಯಲ್ಲಿ ನಿರ್ಮಿಸಲಾಗಿರುವ ಕಂಟ್ರೋಲ್ ರೂಂನಿಂದಲೇ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ಅವರು ಹೇಳಿದರು.ಇದೇ ಸಂದರ್ಭದಲ್ಲಿ ನವೀಕರಿಸಲಾಗಿರುವ ಹಳೆಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಕಚೇರಿಗೆ ಬಳ್ಳಾರಿಯ ಗಾಂಧಿನಗರದ ಪೊಲೀಸ್ ಠಾಣೆಯಲ್ಲಿರುವ ಡಿವೈಎಸ್ಪಿ ಕಚೇರಿ ಸ್ಥಳಾಂತರಿಸಲಾಗುತ್ತಿದ್ದು,ಈ ನವೀಕರಿಸಲಾಗಿರುವ ಬ್ರೂಸ್‍ಪೇಟೆ ಪೊಲೀಸ್ ಠಾಣೆಯನ್ನು ಸಹ ಈ ಸಂದರ್ಭದಲ್ಲಿ ಸಚಿವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ,ಬಿ.ನಾಗೇಂದ್ರ, ಮೇಯರ್ ರಾಜೇಶ್ವರಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಮತ್ತಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,510FollowersFollow
0SubscribersSubscribe
- Advertisement -spot_img

Latest Articles