ಶ್ರಾವಣವೆಂದರೆ ಸರಣಿ ಹಬ್ಬಗಳ ಮಾಸ

0
113

ಸಿರುಗುಪ್ಪ: ಶ್ರಾವಣ ಮಾಸವೆಂದರೆ ಹಬ್ಬಗಳ ಮಾಸವೆಂದೇ ಕರೆಯಬಹುದು ಈ ಮಾಸದಲ್ಲಿ ಮಳೆಯಾಗದ ಕೆಲವಡೆ ಮಳೆಗಾಗಿ ಗ್ರಾಮದಲ್ಲಿನ ದೇವತೆಗಳಿಗೆ ಅಭಿಷೇಕ, ಸಪ್ತಭಜನೆ, ಮಾಡಿದರೆ ಇನ್ನೂ ಕೆಲವು ಗ್ರಾಮಗಳಲ್ಲಿನ ದೇವಸ್ಥಾನಗಳ ದೇವರ ಉತ್ಸವ ಮೂರ್ತಿಯನ್ನು ಶ್ರಾವಣ ಮಾಸದಲ್ಲಿ ವಿಶೇಷವಾಗಿ ಹಗರಿ ಇಲ್ಲವೇ ನದಿಪಾತ್ರಕ್ಕೆ ತೆರಳಿ ಉತ್ಸವ ಮೂರ್ತಿಗಳನ್ನು ನೀರಿನಲ್ಲಿ ಅಭಿಷೇಕ ಮಾಡಿ ಗಂಗೆಪೂಜೆ ಸಲ್ಲಿಸಲಾಗುತ್ತದೆ.
ಇದೇ ರೀತಿಯಲ್ಲಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರೀ ಮಾರಿಕಾಂಬೆಯ ಮೂರ್ತಿಯನ್ನು ರಥಸಮೇತವಾಗಿ ನದಿಯ ದಡಕ್ಕೆ ಕರೆದೊಯ್ದು ಗಂಗಾದೇವಿಯ ದರ್ಶನ ಮತ್ತು ಗಂಗಾರತಿಯ ಮೂಲಕ ವಿಶೇಷ ಪೂಜೆ ಸಲ್ಲಿಸಿ ನಂತರ ಪಲ್ಲಕ್ಕಿಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು.
ವಿಶೇಷ ಅಲಂಕಾರ : ಉತ್ಸವ ಮೂರ್ತಿಗಳಿಗೆ ವಿವಿಧ ಆಭರಣಗಳು, ಮುಖವಾಡಗಳು, ಶಸ್ತçಗಳಿಂದ, ಬಣ್ಣಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತದೆ.
ಗAಗಾಪೂಜೆ : ಗಂಗೆಯನ್ನು ತುಂಬಿದ ಬಿಂದಿಗೆಯ ಕಳಸದಿಂದ ನೀರನ್ನು ತಂದು ದೇವಸ್ಥಾನಗಳಲ್ಲಿನ ಶಾಶ್ವತ ಪ್ರತಿಮೆಗಳನ್ನು ಶುದ್ದಗೊಳಸಿ ಪೂಜಿಸುವುದೇ ಗಂಗಾಪೂಜೆ ಅಥವಾ ಗಂಗಾಧರ್ಶನವೆAತಲೂ ಕರೆಯಲಾಗುತ್ತದೆ.
ವಿವಿಧ ದೇವಸ್ಥಾನಗಳಿಂದ ಗಂಗಾಪೂಜೆ : ಐತಿಹಾಸಿಕ ಕ್ಷೇತ್ರವಾದ ಕುರುಗೋಡು ದೊಡ್ಡಬಸವೇಶ್ವರ ತಾಲೂಕಿನ ರುದ್ರಪಾದ ಗ್ರಾಮಕ್ಕೆ, ಬೈರಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ನಡವಿ ಗ್ರಾಮಕ್ಕೆ, ಉಪ್ಪಾರಹೊಸಳ್ಳಿ ಗ್ರಾಮದ ಹನುಮಂತರಾಯ, ತೆಕ್ಕಲಕೋಟೆಯ ವರವಿನ ಮಲ್ಲೇಶ್ವರ, ಹುಲಿಗೆಮ್ಮ ಮತ್ತು ಯಲ್ಲಮ್ಮ ನಿಟ್ಟೂರು ಗ್ರಾಮಕ್ಕೆ ಸಮೀಪದ ಹಳೆಕೋಟೆ ಶ್ರೀ ವೀರಭದ್ರೇಶ್ವರ, ಹೆರಕಲ್ ಗ್ರಾಮಕ್ಕೆ ಹಾಗೇಯೇ ನೆರೆಯ ಆಂದ್ರಪ್ರದೇಶದ ಹರಿವಾಣಂ ಗ್ರಾಮದ ಗರ್ಜಿಲಿಂಗೇಶ್ವರ ಕೆಂಚನಗುಡ್ಡ ಗ್ರಾಮಕ್ಕೆ, ಸಿರುಗುಪ್ಪದಲ್ಲಿ ಮಾರಿಕಾಂಭ ದೇವತೆ, ಹೀಗೆ ಬಹುತೇಕ ದೇವ ದೇವತೆಯರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕರೆತಂದು ತುಂಗಭದ್ರೆಯ ನದಿಯ ದಡದಲ್ಲಿ ಪೂಜಿಸಲಾಗುತ್ತದೆ.
ಹಬ್ಬದ ಸಂಭ್ರಮಾಚರಣೆ : ನದಿಯ ಪಾತ್ರಕ್ಕೆ ಆಗಮಿಸಿ ಪೂಜೆ ಕಾರ್ಯದ ನಂತರ ಉತ್ಸವ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ವಾಪಸ್ಸ್ ದೇವಸ್ಥಾನಕ್ಕೆ ತೆರಳುವ ದಿನದಂದು ಆಯಾ ಗ್ರಾಮದ ಜನರು ಭಕ್ತರು ಗ್ರಾಮದಲ್ಲಿ ಸಿರಿ ಸಂಪತ್ತು ನೆಲೆಸಲೆಂದು ತಮ್ಮ ತಮ್ಮ ಮನೆಗಳಲ್ಲಿ ಸಿಹಿಖಾದ್ಯ ತಯಾರಿಸಿ ಕಾಯಿ, ಕರ್ಪೂರ, ಹಣ್ಣುಹಂಪಲು, ನೈವೇದ್ಯಗಳಿಂದ ಹರಕೆಗಳನ್ನು ತೀರಿಸಿ ಹಬ್ಬದ ಸಂಭ್ರಮಾಚರಣೆ ಮಾಡುವುದು ವಿಶೇಷ.

Previous articleಬ್ಯಾಂಕ್ ಧೋರಣೆಗೆ ಖಂಡನೆ
Next articleಅಗ್ನಿ ಕುಂಡದಲ್ಲಿ ಭಾರತದ ಭೂಪಟ

LEAVE A REPLY

Please enter your comment!
Please enter your name here