7.3 C
New York
Monday, December 5, 2022

Buy now

spot_img

ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದಾಗ ಜೀವನದಲ್ಲಿ ಗೆಲುವು


ಚಿತ್ರದುರ್ಗ: ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆದಾಗ ಶ್ರದ್ಧೆ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು. ಯಾವ ಕೆಲಸವೇ ಆಗಲಿ ಚಾಚು ತಪ್ಪದೇ ಆಸಕ್ತಿಯಿಂದ ಮಾಡಿದಾಗ ಜೀವನದಲ್ಲಿ ಗೆಲುವು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಸ್ಟೇಡಿಯಂ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಯಲ್ಲಿ ಮಂಗಳವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಕೈಗಾರಿಕೆ ಸಂಸ್ಥೆ (ಮಹಿಳಾ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಿನಿ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದಲ್ಲಿ ಯಾರಿಗೂ ಕೀಳರಿಮೆ ಭಾವನೆ ಇರಬಾರದು. ಈ ಭಾವನೆಯನ್ನು ಬಿಟ್ಟು ಕೆಲಸ ಮಾಡಬೇಕು. ಉದ್ಯೋಗಾಕಾಂಕ್ಷಿಗಳು ದುಡಿಯಬೇಕು ಎಂಬ ಛಲ ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೋವಿಡ್-19 ಮೊದಲ ಮತ್ತು ಎರಡನೇ ಅಲೆ ಹಾಗೂ ಸಂಭಾವ್ಯ ಮೂರನೇ ಅಲೆಯ ಹಿನ್ನೆಲೆಯಲ್ಲಿ ಉದ್ಯೋಗದ ಅವಶ್ಯಕತೆ ತುಂಬಾ ಇದೆ. ಈ ಸಂದರ್ಭದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ತುಂಬಾ ಅದ್ಭುತವಾದ ಕಾರ್ಯವಾಗಿದೆ ಎಂದ ಅವರು ಕಂಪನಿಗಳು ಇಂತಹ ಸಂದರ್ಭದಲ್ಲಿ ಯಾರಿಗೆ ಉದ್ಯೋಗ ಅವಶ್ಯಕತೆ ಇದೆಯೋ ಅಂತವರಿಗೆ ಉದ್ಯೋಗ ನೀಡಿದರೆ ಒಂದು ದೊಡ್ಡ ಸೇವೆ ಮಾಡಿದಂತಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೌಶಲ್ಯಾಭಿವೃದ್ಧಿ ರೂಢಿಸಿಕೊಂಡು, ಜ್ಞಾನ ಬೆಳೆಸಿಕೊಂಡು ಉತ್ತಮ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗಾವಕಾಶಗಳು ಇರುವುದನ್ನು ಕಾಣಬಹುದು. ಆದರಿಂದ ಕಂಪನಿಯವರು ನೀಡುವ ಉದ್ಯೋಗ ಅವಕಾಶವನ್ನು ಉತ್ತಮವಾಗಿ ಸದ್ಭಬಳಕೆ ಮಾಡಿಕೊಂಡು. ನಿಮ್ಮ ಆಸಕ್ತಿಗಾನುಗುಣವಾಗಿ ಉದ್ಯೋಗ ಪಡೆದು ಹೆಚ್ಚಿನ ಕೌಶಲ್ಯಾಭಿವೃದ್ಧಿಯನ್ನು ಬೆಳಿಸಿಕೊಳ್ಳಬೇಕು. ಜೊತೆಗೆ ಮೇಳದಲ್ಲಿ ನೀಡುವ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಿ ಎಂದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,593FollowersFollow
0SubscribersSubscribe
- Advertisement -spot_img

Latest Articles