ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದ ಕೊಪ್ಪಳ ತಾ.ಪಂ ಇಒ

0
284

ಕೊಪ್ಪಳ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆಯನ್ನು ನೀಡುವ ಬಗ್ಗೆ ಪರಿಶೀಲಿಸಲು ಕೊಪ್ಪಳ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಅವರು ತಾಲೂಕಿನ ಲೇಬಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ (ಡಿ.02) ಭೇಟಿ ನೀಡಿ, ಮಕ್ಕಳೊಂದಿಗೆ ಬಿಸಿಯೂಟ ಸವಿದರು.
ನಂತರ ತಾ.ಪಂ ಇಒ ಅವರು ಮಾತನಾಡಿ, ಮಕ್ಕಳು ಪೌಷ್ಠಿಕ ಆಹಾರವನ್ನು ಸೇವನೆ ಮಾಡುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸಬಲರಾಗಿರುತ್ತಾರೆ. ಊಟಕ್ಕಿಂತ ಪೂರ್ವದಲ್ಲಿ ಶಾಲಾ ಮಕ್ಕಳಿಗೆ ಕೈ ತೊಳೆಯುವಂತೆ ತಿಳಿಸಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿರುವದು ಸ್ವಚ್ಛತೆಯ ಕೊರತೆಯಿಂದ. ಆದ್ದರಿಂದ ಪ್ರತಿಯೊಂದು ಮಗುವೂ ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲದಿದ್ದರೆ ಪಾಲಕರಿಗೆ ಒತ್ತಾಯ ಮಾಡಿ ಶೌಚಾಲಯ ಕಟ್ಟಿಸುವಂತೆ ಮನವೊಲಿಸಬೇಕು. ನಂತರ ಮನೆಯ ಕುಟುಂಬದ ಸದಸ್ಯರು ಎಲ್ಲರೂ ಶೌಚಾಲಯವನ್ನು ಬಳಸುವಂತೆ ಪ್ರೇರೇಪಿಸಬೇಕು. ಮನೆಯಲ್ಲಿ ಪ್ರತಿ ದಿನ ಬರುವ ಹಸಿ ಕಸ, ಒಣ ಕಸ ಇತ್ಯಾದಿಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಗ್ರಾಮ ಪಂಚಾಯತಿಯ ಕಸ ಸಂಗ್ರಹಣಾ ವಾಹನಕ್ಕೆ ನೀಡಬೇಕು. ಇದರಿಂದ ಸಕಾಲದಲ್ಲಿ ಕಸವನ್ನು ಮರುಬಳಕೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ನಿಮ್ಮ ಮನೆಯಲ್ಲಿ ಈ ಎಲ್ಲಾ ಅಂಶಗಳನ್ನು ಪಾಲಿಸಲು ತಿಳಿ ಹೇಳಬೇಕು ಎಂದು ಕರೆ ನೀಡಿದರು.

Previous articleಮಳೆಯಿಂದಾಗಿ ಮನೆಹಾನಿ ತಹಶೀಲ್ದಾರರಿಂದ ಪರಿಶೀಲನೆ
Next articleಕೊನೆ ಹಂತ ತಲುಪಿರುವ ಕೋವಿಡ್ ಲಸಿಕಾ ವಿತರಣಾ ಕಾರ್ಯಕ್ರಮ

LEAVE A REPLY

Please enter your comment!
Please enter your name here