“ವೀಕೆಂಡ್ ಕರ್ಪ್ಯೂ ಪರಿಣಾಮವಿಲ್ಲ.”

0
185

ಮರಿಯಮ್ಮನಹಳ್ಳಿ:ಕೊರೋನ,ಓಮಿಕ್ರಾನ್ ಹರಡದಂತೆ ಸರ್ಕಾರ ಜಾರಿಗೊಳಿಸಿರುವ ವಿಕೇಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ ಪಟ್ಟಣದ ನಾಣಿಕೆರೆ ವೃತ್ತ ಸೇರಿದಂತೆ ನಾನಾ ಕಡೆ ಶನಿವಾರ ವಾಹನ ಸವಾರರು ಸಂಚರಿಸಿದ ಹಿನ್ನೆಲೆಯಲ್ಲಿ ಪೋಲಿಸರು ಬಿಸಿ ಮುಟ್ಟಿಸಿದರು.
ಒಮಿಕ್ರಾನ್, ಕೋವಿಡ್-19 ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಕಡಿವಾಣ ಹಾಕಲು ಶುಕ್ರವಾರ ರಾತ್ರಿ10ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಈ ಕುರಿತು ಗಮನಕ್ಕಿದ್ದರೂ ವಾಹನ ಸವಾರರು ಅನಗತ್ಯವಾಗಿ ನಾನಾ ನೆಪ ಹೇಳಿಕೊಂಡು ಸಂಚರಿಸುವುದು ಸಾಮಾನ್ಯವಾಗಿ ಕಂಡು ಬಂದಿತು.‌ನಾಣಿಕೆರೆ ವೃತ್ತದ ಬಳಿ ತಪಾಸಣೆ ನಿರತರಾಗಿದ್ದ ಪಟ್ಟಣ ಠಾಣೆಯ ಸಿಬ್ಬಂದಿಗಳು ಅನಗತ್ಯ ಓಡಾಟ ನಡೆಸುವವರಿಗೆ ಬಿಸಿ ಮುಟ್ಟಿಸಿದರು. ಆರೋಗ್ಯ ಸಮಸ್ಯೆ, ಸರ್ಕಾರಿ ನೌಕರರು, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೇವೆಯಲ್ಲಿ‌ ನಿರತರಾದವರನ್ನು ಹೊರತು ಪಡಿಸಿ ಉಳಿದವರಿಗೆ ದಂಡ ವಿಧಿಸಿ,ಮಾಸ್ಕಧರಿಸದವರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.
ವಾಹನದ ದಾಖಲೆಗಳು, ಚಾಲನಾ ಪತ್ರ, ವಿಮೆ, ಹೆಲ್ಮೆಟ್ ಇರಬೇಕು, ಮಾಸ್ಕ್ ಧರಿಸಬೇಕು ಇದರಿಂದ  ನಿಮ್ಮ ಜೀವಕ್ಕೆ ರಕ್ಷಣೆಯಾಗಿರಲಿದೆ. ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಿದರು.  ಈ ಕ್ರಮ ನಿಮ್ಮ‌ ಒಳ್ಳೆಯದಕ್ಕೆ ಎಂಬುದನ್ನು‌ ಮರಿಬೇಡಿ ಎಂದು ಸವಾರರಿಗೆ‌ ಹೇಳುತ್ತಿರುವುದು ಕಂಡು ಬಂದಿತು.

Previous articleನಗರದಲ್ಲಿ ಲಾಕ್‌ಡೌನ್‌ಗೆ ಮಿಶ್ರ ಪ್ರತಿಕ್ರಿಯೆ
Next articleಕನ್ನಡ ಕವಿ “ಚಂಪಾ” ನಿಧನಕ್ಕೆ ಕಲಾಕೇಂದ್ರದಿಂದ ಸಂತಾಪ

LEAVE A REPLY

Please enter your comment!
Please enter your name here